Advertisement

ರೈಗೆ ಕೊನೆ ಕ್ಷಣದಲ್ಲಿ ಕೈತಪ್ಪಿ ಹೋದ ಗೃಹ ಖಾತೆ

11:44 AM Sep 02, 2017 | Team Udayavani |

ಮಂಗಳೂರು: ರಮಾನಾಥ ರೈ ಅವರಿಗೆ ಬಹುತೇಕ ಖಚಿತವಾಗಿದ್ದ ಗೃಹಖಾತೆ ಶುಕ್ರವಾರ ಕೊನೆಯ ಕ್ಷಣದಲ್ಲಿ ಕೈತಪ್ಪಿ ಹೋಗಿರುವುದು ಸಹಜವಾಗಿಯೇ ಕರಾವಳಿ ಭಾಗದ ಕಾಂಗ್ರೆಸ್‌ ಪಾಳೆಯದಲ್ಲಿ ತೀವ್ರ ನಿರಾಶೆಯನ್ನುಂಟು ಮಾಡಿದೆ. 

Advertisement

ಸಚಿವ ಸಂಪುಟದ ವೇಳೆ ರಮಾನಾಥ ರೈ ಅವರಿಗೆ ಗೃಹಖಾತೆ ಹೊಣೆಯನ್ನು ವಹಿಸಿ ಕೊಡಲಾಗು ತ್ತಿದೆ ಎಂಬ ಸುದ್ದಿ ಕಳೆದ ಒಂದು ತಿಂಗಳಿ ನಿಂದೀಚೆಗೆ ರಾಜ್ಯಮಟ್ಟದಲ್ಲಿ ಬಲವಾಗಿ ಕೇಳಿ ಬರುತ್ತಿತ್ತು. ಆದರೆ ಶುಕ್ರವಾರ ಸಂಜೆ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಗೃಹಖಾತೆಯನ್ನು ರಮಾನಾಥ ರೈ ಬದಲಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನೀಡಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಅವರ ಬಳಿಯಿದ್ದ ಗೃಹ ಸಚಿವ ಖಾತೆಯನ್ನು ಅನಂತರ ಮುಖ್ಯಮಂತ್ರಿ ಬಳಿ ಇಟ್ಟುಕೊಳ್ಳಲಾಗಿತ್ತು. ಆದರೆ ಹೈಕಮಾಂಡ್‌ ಸೂಚನೆ ಮೇರೆಗೆ ಸಂಪುಟದ ಹಿರಿಯ ಸಚಿವ ಬಿ.ರಮಾನಾಥ ರೈ ಅವರಿಗೆ ಗೃಹ ಖಾತೆ ಜವಾಬ್ದಾರಿ ವಹಿಸಿ ಕೊಡಲು ನಿರ್ಧರಿಸ ಲಾಗಿದ್ದು, ಶುಕ್ರವಾರ ಸಂಜೆವರೆಗೂ ರೈ ಅವರೇ ಗೃಹ ಸಚಿವರಾಗುತ್ತಾರೆ ಎನ್ನುವ ಸುದ್ದಿ ಹರಡಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಕೂಡ ಶುಕ್ರವಾರ ಬೆಳಗ್ಗೆ ರೈ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಇನ್ನು ರೈ ಗೃಹ ಸಚಿವರಾಗುತ್ತಾರೆ ಎಂಬುದನ್ನು ಸಿಎಂ ಕಚೇರಿ ಮೂಲ ಹಾಗೂ ರೈ ಬೆಂಬಲಿಗರು ಕೂಡ ಖಚಿತಪಡಿಸಿದ್ದರು. 

ಸಾಮಾಜಿಕ ಜಾಲತಾಣಗಳಲ್ಲಿಯೂ ರೈ ಅವರು ಗೃಹಸಚಿವರಾಗಿಯೇ ಬಿಟ್ಟರು ಎನ್ನುವ ಸಂದೇಶ ಹರಿದಾಡಲು ಶುರುವಾಗಿತ್ತು. ರೈ ಅವರು ಗೃಹ ಸಚಿವ ರಾದ ಕ್ಷಣವನ್ನು ಸಂಭ್ರಮಿಸಲು ದ.ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಿದ್ಧತೆಗಳು ನಡೆದಿದ್ದವು. ಶನಿವಾರ ಬೆಳಗ್ಗೆ 8.30ಕ್ಕೆ ರೈ ಅವರು ವಿಮಾನ ಮೂಲಕ ಬಜೆಪೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ಅಲ್ಲಿಂದ ವಾಹನ ಮೆರವಣಿಗೆ ಮೂಲಕ ಸ್ವಕ್ಷೇತ್ರಕ್ಕೆ ಕರೆತರುವ ಬಗ್ಗೆಯೂ ರೂಪು-ರೇಷೆ ಸಿದ್ಧಪಡಿಸ ಲಾಗಿತ್ತು. ಆದರೆ ಸಚಿವ ಸಂಪುಟ ವಿಸ್ತರಣೆ ಸಮಾ ರಂಭ ಮುಗಿಯು ತ್ತಿದ್ದಂತೆ ಈ ನಿರೀಕ್ಷೆಗಳೆಲ್ಲ ಹುಸಿಯಾದವು. 
ರೈ ಅವರನ್ನು ಸಿಎಂ ಒಪ್ಪಿಸಿದ್ದರು!

ಗೃಹ ಖಾತೆಗೆ ಡಿ.ಕೆ.ಶಿವಕುಮಾರ್‌, ರಾಮಲಿಂಗಾ ರೆಡ್ಡಿ , ಕೆ.ಜೆ. ಜಾರ್ಜ್‌ ನಡುವೆ ತೀವ್ರ ಪೈಪೋಟಿ ಇದ್ದ ಹಿನ್ನೆಲೆಯಲ್ಲಿ ಇವರೆಲ್ಲರನ್ನು ಬಿಟ್ಟು ಹಿರಿಯ ಸಚಿವ ಬಿ.ರಮಾನಾಥ ರೈ ಅವರಿಗೆ ಇದನ್ನು ನೀಡಲು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದರು. ಈ ಬಗ್ಗೆ ಆರಂಭದಲ್ಲಿ ರೈ ಆಸಕ್ತಿ ತೋರದಿದ್ದಾಗ ಸಿದ್ದರಾಮಯ್ಯ ರೈಯವರನ್ನು ಒಪ್ಪಿಸಿದ್ದರು. ಆದರೆ ಕೊನೆಕ್ಷಣದಲ್ಲಿ ಆದ ಕೆಲವು ಕ್ಷಿಪ್ರ ರಾಜಕೀಯ ನಿರ್ಧಾರಗಳಾಗಿ ರೈ ಬದಲಿಗೆ ರಾಮಲಿಂಗಾರೆಡ್ಡಿಗೆ ಗೃಹಖಾತೆ ವಹಿಸ‌ ಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

ಗೃಹ ಖಾತೆ ನಾನು
ನಿರೀಕ್ಷೆ  ಮಾಡಿಲ್ಲ

ಗೃಹ ಖಾತೆ ನನಗೆ ಸಿಗಬೇಕು ಎಂಬ ನಿರೀಕ್ಷೆಯನ್ನು  ನಾನು ಮಾಡಿಲ್ಲ. ಗೃಹಖಾತೆ  ಇತರರಿಗೆ ವಹಿಸಿಕೊಡುವ ಬಗ್ಗೆ ನನಗೆ ಒಂದು ವಾರದ ಮೊದಲೇ ಗೊತ್ತಿತ್ತು. ನಾನು ಹಿಂದೆ ಕೂಡ ಯಾವತ್ತೂ  ನನಗೆ ಇಂತದ್ದೆ ಖಾತೆ ಬೇಕು ಎಂದು ಕೇಳಿಲ್ಲ. ಪಕ್ಷ  ಹೊಣೆಗಾರಿಕೆ ನೀಡಿದರೆ ಅದನ್ನು  ಬೇಡ ಎನ್ನುವಷ್ಟು ದೊಡ್ಡ ವ್ಯಕ್ತಿಯೂ ನಾನು ಅಲ್ಲ.     
– ರಮಾನಾಥ ರೈ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next