Advertisement
ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ಹಿರಿಯ ತಲೆಯಾಳು ಎಲ್.ಕೆ.ಅಡ್ವಾಣಿ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ತಮ್ಮ ಹಕ್ಕು ಚಲಾವಣೆ ಮಾಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೋವಾ ಮುಖ್ಯಮಂತ್ರಿ ಮನೋಹರ ಪಾರೀಕರ್ ಸೇರಿದಂತೆ ಒಟ್ಟು 44 ಮಂದಿ ಆಯಾ ರಾಜ್ಯಗಳ ರಾಜಧಾನಿಯಲ್ಲಿಯೇ ಮತ ಹಾಕಲು ಅನುಮತಿ ಪಡೆದಿದ್ದರು.
ಯುಪಿಎ ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮನ್‌ಗೆ ಬೆಂಬಲ ನೀಡಿದ್ದರು ಎಂದು ಶಿವಸೇನೆ ಆರೋಪಿಸಿದೆ. ಮೆಮನ್‌ಗೆ ಕ್ಷಮಾದಾನ ನೀಡಬೇಕೆಂದು ಒತ್ತಾಯಿ ಸಿದ್ದವರು ಗಾಂಧಿ ಎಂದು ದೂರಿದ್ದಾರೆ ಶಿವಸೇನೆ ವಕ್ತಾರ ಸಂಜಯ ರಾವುತ್. ಮೆಮನ್ ರಕ್ಷಣೆ ಎಲ್ಲ ರೀತಿಯ ಪ್ರಯತ್ನ ಮಾಡಿದ್ದರೆಂದು ಆಪಾದಿಸಿದ್ದಾರೆ. ಆ ಸಂದರ್ಭದಲ್ಲಿ ಯುಪಿಎ ಅಭ್ಯರ್ಥಿ ರಾಷ್ಟ್ರಪತಿಗೆ ಪತ್ರ ಬರೆದು ಕ್ಷಮಾದಾನ ನೀಡುವಂತೆ ಒತ್ತಾಯಿಸಿದ್ದರು ಎಂದಿದ್ದಾರೆ. ಗಾಂಧಿ ಬೆಂಬಲಕ್ಕೆ ಬಂದಿರುವ ಕಾಂಗ್ರೆಸ್ ವಕ್ತಾರ ಯಾವ ಆಧಾರದಲ್ಲಿ ಶಿವಸೇನೆ ವಿಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯ ವಿರುದ್ಧ ಆರೋಪ ಮಾಡುತ್ತಿದೆ? ನಾಗರಿಕ ಸೇವಾ ಅಧಿಕಾರಿ, ರಾಜ್ಯಪಾಲರಾಗಿ ಹತ್ತು ಹಲವು ಹುದ್ದೆಗಳನ್ನು ನಿರ್ವಹಿಸಿ ಜನಪ್ರಿಯತೆ, ಖ್ಯಾತಿ ಗಳಿಸಿದ್ದಾರೆ. ಅವರಿಗೆ ಯಾರದ್ದೂ ಪ್ರಮಾಣ ಪತ್ರ ಅಗತ್ಯವಿಲ್ಲವೆಂದಿದ್ದಾರೆ ಅವರು.
Related Articles
ಅನಾರೋಗ್ಯದ ಕಾರಣದಿಂದ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಮತ ಹಾಕಲಿಲ್ಲ. ವೈದ್ಯರ ಸಲಹೆಯಿಂದಾಗಿ ತಮ್ಮ ತಂದೆ ಮತ್ತು ಪಕ್ಷದ ಹಿರಿಯ ನಾಯಕ ಎಂ.ಕರುಣಾನಿಧಿ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿಲ್ಲ ಎಂದಿದ್ದಾರೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್. 2012ರಲ್ಲಿ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭ್ಯರ್ಥಿಯಾಗಿದ್ದಾಗ ಅವರು ಮತದಾನ ಮಾಡಿದ್ದರು.
Advertisement
ರೈತನ ಮಗನಾಗಿದ್ದುಕೊಂಡು ಸಾರ್ವಜನಿಕ ಜೀವನದಲ್ಲಿ ನಾಯ್ಡು ಸಾಧನೆ ಅಪಾರ. ಉಪ ರಾಷ್ಟ್ರಪತಿ ಸ್ಥಾನಕ್ಕೆ ಅವರು ಸೂಕ್ತ ವ್ಯಕ್ತಿ. – ನರೇಂದ್ರ ಮೋದಿ, ಪ್ರಧಾನಮಂತ್ರಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರ ಆದೇಶದಂತೆ ನಾವು ಎನ್‌ಡಿಎ ಅಭ್ಯರ್ಥಿ ಕೋವಿಂದ್‌ಗೇ ಮತ ಹಾಕಿದ್ದೇವೆ.
– ಶಿವಪಾಲ್ ಯಾದವ್,
ಉತ್ತರ ಪ್ರದೇಶ ಮಾಜಿ ಸಚಿವ