Advertisement

ʼRAAVAN’ to ʼRRRʼ: ರಾಮಾಯಣದಿಂದ ಸ್ಪೂರ್ತಿಗೊಂಡು ಬಂದ ಸಿನಿಮಾ, ಶೋಗಳಿವು

06:21 PM Jan 20, 2024 | Team Udayavani |

ಮುಂಬಯಿ: ದೇಶ ಅಯೋಧ್ಯೆಯ ಶ್ರೀರಾಮ ಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಕಾಯುತ್ತಿದೆ. ರಾಮಲಲ್ಲಾ ಮೂರ್ತಿ ಅನಾವರಣಗೊಳ್ಳಲು ದಿನಗಣನೆ ಬಾಕಿ ಉಳಿದಿದೆ. ಬಣ್ಣದ ಲೋಕದಲ್ಲಿ ರಾಮಾಯಣದ ಉಲ್ಲೇಖ ಹೊಸದೇನಲ್ಲ. ರಾಮಾಯಣದಿಂದ ಸ್ಪೂರ್ತಿಗೊಂಡು ಬಂದ ಆರು ಚಲನಚಿತ್ರ ಹಾಗೂ ಶೋಗಳ ಕುರಿತ ಪರಿಚಯ ಇಲ್ಲಿದೆ.

Advertisement

ರಮಾನಂದ ಸಾಗರ್ ಅವರ ರಾಮಾಯಣ: ರಮಾನಂದ ಸಾಗರ್‌ ಅವರು ಇಂದಿನ ಯುವ ಪೀಳಿಗೆಗೆ ಅಷ್ಟಾಗಿ ಪರಿಚಯವಿರದು. ಆದರೆ 80 ದಶಕದಲ್ಲಿ ಅತೀ ಹೆಚ್ಚು ಜನಪ್ರಿಯವಾದ ಶೋಗಳಲ್ಲಿ ಒಂದಾಗಿದ್ದ ʼರಾಮಾಯಣʼ ನೋಡಿದವರಿಗೆ ಎಲ್ಲರಿಗೂ ಇಂದಿಗೂ ರಮಾನಂದ ಸಾಗರ್‌ ಅವರ ಹೆಸರು ನೆನಪಲಿ ಉಳಿದಿದೆ.

ರಮಾನಂದ ಸಾಗರ್‌ ನಿರ್ದಶಿಸಿದ ʼರಾಮಾಯಣʼ ಶೋ ಭಾರತ ಮಾತ್ರವಲ್ಲದೆ, 53 ದೇಶಗಳಲ್ಲಿ ಪ್ರಸಾರ ಕಂಡಿದೆ. ಪ್ರಪಂಚದಾದ್ಯಂತ 650 ಮಿಲಿಯನ್‌ ಗೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪೌರಾಣಿಕ ಶೋವಾಗಿದೆ. 2020 ರಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಆದ ಸಮಯದಲ್ಲಿ ಇದನ್ನು ಮರು-ಪ್ರಸಾರ ಮಾಡಲಾಗಿತ್ತು.

ಇದನ್ನೂ ಓದಿ: Sania-Shoaib .. ಪ್ರೇಮ್‌ ಕಹಾನಿಯಿಂದ ಸದ್ದು ಮಾಡಿದ ಇಂಡೋ – ಪಾಕ್‌ ಸೆಲೆಬ್ರಿಟಿಗಳಿವರು

ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ:  ರಾಮಾಯಣದಿಂದ ಸ್ಪೂರ್ತಿಗೊಂಡಿರುವ ʼ ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮʼ ಸಿನಿಮಾವನ್ನು ರಾಮಾಯಣದ ಅತ್ಯುತ್ತಮ ಅನಿಮೇಟೆಡ್ ರೂಪಾಂತರಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ಸಿನಿಮಾವನ್ನು 1992 ರ ಬಂದ ಈ ಸಿನಿಮಾವನ್ನು ಜಪಾನೀಸ್ ಮತ್ತು ಭಾರತೀಯ ಅನಿಮೇಷನ್ ಸ್ಟುಡಿಯೋಗಳು ಸಹ-ನಿರ್ಮಾಣ ಮಾಡಿದೆ. ಜಪಾನ್‌ ನಿರ್ದೇಶಕ ಯುಗೋ ಸಾಕೋ ಇದನ್ನು ನಿರ್ದೇಶನ ಮಾಡಿದ್ದರು. ರಾಮಾಯಣ 1987 ಟಿವಿ ಸರಣಿಯಲ್ಲಿ ರಾಮನ ಪಾತ್ರದಲ್ಲಿ ಹೆಸರುವಾಸಿಯಾದ ಅರುಣ್ ಗೋವಿಲ್, ಪ್ರಿನ್ಸ್‌ ರಾಮನಿಗೆ ವಾಯ್ಸ್‌ ನೀಡಿದ್ದರು.

Advertisement

ರಾವಣ್:‌ ಮಣಿರತ್ನಂ ನಿರ್ದೇಶನದಲ್ಲಿ ಬಂದ ಬಾಲಿವುಡ್‌ ನ ʼರಾವಣ್‌ʼ ಸಿನಿಮಾದಲ್ಲಿ ʼರಾಮಾಯಣʼದ ಕಥೆಯನ್ನು ರಾವಣನ ದೃಷ್ಟಿಕೋನದಿಂದ ಹೇಳಲಾಗಿದೆ. ಡಕಾಯಿತನಾಗಿರುವ ಬೀರಾ ಪೊಲೀಸ್ ಅಧಿಕಾರಿಯ ಹೆಂಡತಿಯನ್ನು ಅಪಹರಿಸಿ ನಂತರ ಅವಳನ್ನು ಪ್ರೀತಿಸುತ್ತಾರೆ. ಅದ್ಭುತ ಅಭಿನಯ, ಛಾಯಾಗ್ರಹಣದಿಂದ ಸಿನಿಮಾ ಮೆಚ್ಚುಗೆ ಗಳಿಸಿತ್ತು.

ಹನುಮಾನ್:‌ 2005 ರಲ್ಲಿ ಬಿಡುಗಡೆಯಾದ ‘ಹನುಮಾನ್’ ವಿಜಿ ಸಮಂತ್ ನಿರ್ದೇಶನದ ಅನಿಮೇಟೆಡ್ ಚಲನಚಿತ್ರವಾಗಿದೆ. ಭಗವಾನ್ ಹನುಮಾನ್‌ನ ಜೀವನವನ್ನು ಹೇಳುತ್ತದೆ. ಇದರಲ್ಲಿ ರಾಮಾಯಣದ ಘಟನೆಗಳನ್ನು ಚಿತ್ರೀಕರಿಸಿ ತೋರಿಸಲಾಗಿದೆ. ಈ ಸಿನಿಮಾದ ಅನಿಮೇಷನ್ ಪ್ರೇಕ್ಷಕರ ಮನಗೆದ್ದಿತ್ತು.

ಆರ್‌ ಆರ್‌ ಆರ್: ಭಾರತೀಯ ಸಿನಿ ಪರೆದೆಯಲ್ಲಿ ಹೊಸ ದಾಖಲೆ ಬರೆದ ರಾಜಮೌಳಿ ಅವರ ʼಆರ್‌ ಆರ್‌ ಆರ್‌ʼ ಸಿನಿಮಾದಲ್ಲಿ ರಾಮಾಯಣದ ಅಂಶವನ್ನು ಹೇಳಲಾಗಿದೆ. ರಾಮ್‌ ಚರಣ್‌ ಪಾತ್ರವನ್ನು ರಾಮನ ಪಾತ್ರಕ್ಕೆ ಹೋಲಿಸಿದ್ದು, ಜೂನಿಯರ್ ಎನ್ ಟಿಆರ್ ಅವರ ಪಾತ್ರವನ್ನು ಹನುಮಾನ್ ಮತ್ತು ಆಲಿಯಾ ಭಟ್ ಅವರ ಪಾತ್ರವನ್ನು ಸೀತೆಗೆ ಹೋಲಿಸಿ ರಾಮಾಯಣದ ಎಳೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಹಮ್ ಸಾತ್ ಸಾತ್ ಹೈ: ಸೂರಜ್ ಬರ್ಜತ್ಯಾ ಅವರ ʼಹಮ್ ಸಾತ್ ಸಾತ್ ಹೈʼ ಸೂಪರ್‌ ಹಿಟ್‌ ಆಗಿದ್ದ ಸಿನಿಮಾ. ಈ ಸಿನಿಮಾದ ಕಥೆ ಕೂಡ ರಾಮಾಯಣದಿಂದ ಪ್ರೇರಿತಗೊಂಡಿದೆ. ಕುಟುಂಬ ಬಂಧ ಮತ್ತು ಪ್ರೀತಿಯ ಕೇಂದ್ರ ವಿಷಯದ ಕಥೆಯನ್ನು ಸಿನಿಮಾ ಒಳಗೊಂಡಿದೆ. ಚಿತ್ರವು ರಾಮಾಯಣದಿಂದ ಸ್ಫೂರ್ತಿಯನ್ನು ಪಡೆದಿದೆ. ರಾಮನ ವನವಾಸದ ಕಥೆಯ ಹಾಗೆ ಸಿನಿಮಾದಲ್ಲಿ ಕುಟುಂಬದ ಹಾಗೂ ಸಹೋದರರ ಬಾಂಧ್ಯವದ ಕಥೆಯನ್ನು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next