Advertisement

Ramanagara: ಥ್ರಿಲ್‌ ಗಾಗಿ ಬೆಟ್ಟಕ್ಕೆ ಹೋಗಿದ್ದ ಯುವತಿಯರು;ಸಂಕಷ್ಟಕ್ಕೆ ಸಿಲುಕಿ ಪರದಾಟ

11:43 PM Dec 17, 2023 | Team Udayavani |

ರಾಮನಗರ: ಥ್ರಿಲ್‌ ಗಾಗಿ ಬೆಟ್ಟ ಏರಿದ್ದ ಯುವತಿಯರು ಬಂದ ಹಾದಿಯಲ್ಲಿ ಮರಳಲು ಸಾಧ್ಯವಾಗದೇ ಹಲವು ಗಂಟೆಗಳ ಕಾಲ ಸಂಕಷ್ಟಕ್ಕೆ ಸಿಲುಕಿದ ಘಟನೆ ಹಂದಿಗುಂದಿ ಬೆಟ್ಟದಲ್ಲಿ ಶನಿವಾರ ನಡೆದಿದೆ.

Advertisement

ಕಾಡಿನಲ್ಲಿ ಟ್ರಕಿಂಗ್ ವೇಳೆ ದಾರಿ ತಪ್ಪಿದ್ದ 6 ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.ದಾರಿ ತಪ್ಪಿ ಬೇರೊಂದು ಬೆಟ್ಟಕ್ಕೆ ತೆರಳಿದ್ದ ಬನ್ನೇರುಘಟ್ಟ ರಸ್ತೆ ಹೊರಮಾವು ಬಳಿಯ ನಿವಾಸಿಗಳಾಗಿದ್ದ ಯುವತಿಯರು ದಿನವೆಲ್ಲ ತಿರುಗಿ ಸಂಜೆಯಾಗುತ್ತಿದ್ದಂತೆ ದಾರಿ ಕಾಣದೆ ಪರದಾಡಿದ್ದಾರೆ. ಕಾಡು ಪ್ರಾಣಿಗಳ ಪ್ರದೇಶವಾದುದರಿಂದ ಭೀತಿಗೊಳಗಾಗಿದ್ದಾರೆ.ಮೊಬೈಲ್ ನೆಟ್ವರ್ಕ್ ಇಲ್ಲದ ಕಾರಣಕ್ಕೂ ಇನ್ನಷ್ಟು ಭಯ ಪಟ್ಟು ಪರದಾಡಿ ಕೊನೆಗೂ 112 ಪೊಲೀಸರಿಗೆ ಕರೆ‌ ಮಾಡಿ ಪರಿಸ್ಥಿತಿ ತಿಳಿಸಿದ್ದಾರೆ.

ಸಕಾಲದಲ್ಲಿ ನೆರವಿಗೆ ಧಾವಿಸಿದ 112 ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಮತ್ತು ರಮೇಶ್ ಅವರು ಸ್ಥಳಿಯರ ಸಹಾಯದಿಂದ ಪ್ರಾಣದ ಹಂಗು ತೊರೆದು ಕಾಲ್ನಡಿಗೆಯಲ್ಲೆ ತೆರಳಿ ಯುವತಿಯರಿಗೆ ಧೈರ್ಯ ತುಂಬಿದ್ದಾರೆ. ವಾಹನ ತೆರಳಲು ಸಾದ್ಯವಾಗದ ಕಾರಣ ಸುಮಾರು 10 ಕಿ.ಮೀ ಕಾಲ್ನಡಿಗೆಯ ಮೂಲಕವೇ ಯುವತಿಯರಿಗಾಗಿ ಹುಡುಕಾಟ ನಡೆಸಿ ಮೊಬೈಲ್ ನೆಟ್ ವರ್ಕ್ ಆಧರಿಸಿ, ಟಾರ್ಚ್ ಬೆಳಕನ್ನು ಬಳಸಿಕೊಂಡಿದ್ದಾರೆ. ಸತತ ಎರಡು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಳಗ್ಗೆ 10‌‌ ಗಂಟೆಗೆ ಟ್ರಕ್ಕಿಂಗ್ ತೆರಳಿದ್ದವರನ್ನು ರಾತ್ರಿ 8.30 ರ ವೇಳೆಗೆ ಬೆಟ್ಟದ ತುದಿಯಲ್ಲಿ ಪತ್ತೆ ಹಚ್ಚಿದ್ದಾರೆ.

ರಾಮನಗರ ಬಸವನಪುರ ಬಳಿ ಕಾರು ನಿಲ್ಲಿಸಿ‌ ಚಾರಣ ಆರಂಭಿಸಿದ್ದಾರೆ. ಮಧ್ಯಾಹ್ನದ ವೇಳೆ ಬೆಟ್ಟ ಇಳಿದು ವಾಪಾಸ್ ಆಗಬೇಕಿತ್ತು.ಸಂಜೆ 6:30 ಕ್ಕೆ ಪೊಲೀಸರಿಗೆ ಕರೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next