ರಾಮನಗರ: ಉಪ ಮುಖ್ಯಮಂತ್ರಿ ಡಿಕೆ ಶಿಕುಮಾರ್ ಅವರ ತವರು ಜಿಲ್ಲೆಯಲ್ಲಿ ಅಧಿಕಾರಿಗಳ ಲಂಚಾವತಾರದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಸಾರ್ವಜನಿಕರು ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಕೈ ಬಿಸಿ ಮಾಡಲೇಬೇಕಾದ ಪರಿಸ್ಥಿತಿ ಎದುರಾಗಿದೆ.
ಡಿಸಿಎಂ ಜಿಲ್ಲೆಯಲ್ಲೇ ಲಂಚ ತಾಂಡವವಾಡುತ್ತಿದ್ದು, ಲಂಚ ಕೊಟ್ಟರೆ ಅಧಿಕಾರಿಗಳು ದಾಖಲಾತಿಯೇ ಬೇಡ ಎನ್ನುತ್ತಿದ್ದಾರೆ. ಪೌತಿ ಖಾತೆ ಮಾಡಿಲು ಗ್ರಾಮ ಲೆಕ್ಕಾಧಿಕಾರಿ ಲಂಚಕ್ಕೆ ಡಿಮ್ಯಾಂಡ್ ಮಾಡಿದ ಘಟನೆ ಮಾಗಡಿ ತಾಲೂಕು ಕಚೇರಿಯಲ್ಲಿ ನಡೆದಿದೆ.
ಲಂಚ ಪಡೆಯುತ್ತಿರುವ ಮಲ್ಲಸಂದ್ರ ವೃತ್ತದ ಗ್ರಾಮ ಲೆಕ್ಕಿಗ ರಮೇಶ್ ನ ಕೃತ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೌತಿ ಖಾತೆ ಮಾಡಲು 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ವಿಎ ರಮೇಶ್ ರೈತನ ಬಳಿ ಹಣಕ್ಕಾಗಿ ಧಮಕಿ ಹಾಕಿದ್ದಾನೆ.
ಇದನ್ನೂ ಓದಿ:ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ: ಮಣಿಪುರದಲ್ಲಿ ನಡೆಯಿತು ಆಘಾತಕಾರಿ ಘಟನೆ
ಅಲ್ಲದೆ ‘ಇಲ್ಲಿ ಸಿಸಿ ಕ್ಯಾಮೆರಾ ಇದೆ, ನಡಿ ಆಚೆ ಕೊಡು’ ಎಂದು ಲಜ್ಜೆಬಿಟ್ಟು ಕೇಳಿದ್ದಾರೆ ಗ್ರಾಮ ಲೆಕ್ಕಿಗ ರಮೇಶ್.
ಕನಕಪುರದಲ್ಲಿ ಅಮಾನತುಗೊಂಡು ಮಾಗಡಿಗೆ ಬಂದು ಸೇರಿರುವ ರಮೇಶ್, ಕಳೆದ 6 ವರ್ಷಗಳಿಂದ ಮಾಗಡಿ ತಾಲೂಕಿನಲ್ಲೇ ಕೆಲಸ ಮಾಡುತ್ತಿದ್ದಾನೆ. ರೈತನ ಬಳಿ ಈಗಾಗಲೇ 10 ಸಾವಿರ ಹಣ ಪಡೆದಿದ್ದಾನೆ. ಈತನ ಲಂಚ ಪ್ರಸಂಗದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.