Advertisement
ಹೌದು..,ರಾಷ್ಟ್ರೀಯ ಹೆದ್ದಾರಿ 275ರ ಬೆಂ.-ಮೈ. ನಡುವಿನ ಬೆಂ-ಮೈ ನಗರಗಳ ನಡುವೆ ಎರಡೂ ಬದಿ ನಾಲ್ಕು ಪಥ ಸರ್ವೀಸ್ ರಸ್ತೆ, 6 ಪಥ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣ ಕಾಮ ಗಾರಿ ಮೊದಲ ಹಂತ ಪೂರ್ಣ ಗೊಂ ಡು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾ.12 ರಂದು ಉದ್ಘಾಟನೆಯನ್ನೂ ಕಂಡಿತು. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೆದ್ದಾರಿ ಪ್ರಾಧಿಕಾರ ದುಬಾರಿ ಟೋಲ್ ಸಂಗ್ರ ಹಕ್ಕೆ ಮುಂದಾಗಿದೆ.
Related Articles
Advertisement
ಶಾಸಕರಿಗೂ ಗೌರವವಿಲ್ಲ: ಟೋಲ್ ಬೂತ್‌ಗಳಲ್ಲಿ ಯಾರೆಂದರೆ ಯಾರಿಗೂ ಗೌರವ ವಿಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಚಿವ, ಆಡಳಿತ ಪಕ್ಷದ ಶಾಸಕ ನರೇಂದ್ರಸ್ವಾಮಿ ಅವರಿಗೆ ಟೋಲ್ ಸಿಬ್ಬಂದಿ ಅವಾಜ್ ಹಾಕಿ, ಶಾಸಕರಾದರೆ ನನಗೇನು ಎಂದು ಉದ್ದಟತನದ ಪ್ರಶ್ನೆಯನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸೋಜಿಗದ ಸಂಗತಿ ಎಂದರೆ ಟೋಲ್ ಸಿಬ್ಬಂದಿಯ ವಿರುದ್ಧ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ಟೋಲ್ ಪ್ಲಾಜಾ ಬಳಿ ಪ್ರತಿದಿನ ಒಂದಿಲ್ಲೊಂದು ಗಲಾಟೆ ನಡೆಯುತ್ತಲೇ ಇದೆ. ಟೋಲ್ ಸಿಬ್ಬಂದಿಯ ದೌರ್ಜನ್ಯಕ್ಕೆ ಪ್ರಯಾಣಿಕರು ಹೈರಾ ಣಾ ಗಿದ್ದಾರೆ. ಈ ಅವವ್ಯಸ್ಥೆ ಬಗ್ಗೆ ಯಾರೂ ಪ್ರಶ್ನಿ ಸುತ್ತಿಲ್ಲ. ಪೊಲೀಸರು ಟೋಲ್ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಸಾಕಷ್ಟು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ.
ಹೈವೇ ಟೋಲ್ ಪ್ಲಾಜಾ ಬಳಿಯ ಸಮಸ್ಯೆಗಳು :
ಟೋಲ್ ಪ್ಲಾಜಾ ಒಳಗೆ ಹೋಗುವಾಗ ನೆಲ ಹಾಸಿಗೆ ಅಳವಡಿಸಿರುವ ಮೆಟಲ್ ಪೈಪ್‌ಗ್ಳು ಶಬ್ದ ಮಾಡುತ್ತಿದ್ದು, ಇವುಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಇದರಿಂದ ಪ್ರಯಾಣಿಕರು ಭಯಪಡುವಂತಾಗಿದೆ. ಟೋಲ್ ಪ್ಲಾಜಾ ಸಿಬ್ಬಂದಿಗಳು ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುವುದನ್ನು ಕಲಿಸಬೇಕಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ಗಮನಹರಿಸಬೇಕು.
ಟೋಲ್ ಬೂತ್‌ಗಳಲ್ಲಿ ಕೆಲವೊಮ್ಮೆ ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಕಡಿತವಾದರೂ, ಗೇಟ್‌ಗಳು ತೆರೆಯುತ್ತಿಲ್ಲ. ತಾಂತ್ರಿಕ ಸಮಸ್ಯೆಯಿಂದ ಪ್ರಯಾಣಿಕರು ದುಪ್ಪಟ್ಟು ಶುಲ್ಕ ತೆತ್ತುವಂತಾಗಿದೆ. ಟೋಲ್ ಪ್ಲಾಜಾ ನಿರ್ವಹಣೆ ಮಾಡುವ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಹೊರ ರಾಜ್ಯದವರಾಗಿದ್ದು, ಅವರಿಗೆ ಕನ್ನಡ ಬರುವುದಿಲ್ಲ. ಇದರಿಂದ ಟೋಲ್ ಸಮಸ್ಯೆ ಹೇಳಿದರೂ ಅವರು ಕೇಳಿಸಿಕೊಳ್ಳುತ್ತಿಲ್ಲ.
ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಸ್ಥಳೀಯ ವಾಹನಗಳಿಗೆ ರಿಯಾಯ್ತಿ ನೀಡಲಾಗುತ್ತದೆ. ಆದರೆ, ಎನ್‌ಎಚ್ 275 ಟೋಲ್ ಪ್ಲಾಜಾದಲ್ಲಿ ರಾಮನಗರ ಜಿಲ್ಲೆಯ ವಾಹನಗಳಿಗೆ ಯಾವುದೇ ರಿಯಾಯ್ತಿ ಇಲ್ಲವಾಗಿದೆ.
ಸಂಚಾರದ ವೇಳೆ ಸದ್ದು ಮಾಡುವ ಪೈಪ್‌ಗಳು: ಟೋಲ್ ಬೂತ್‌ಗಳ ಬಳಿ ಅಳವಡಿಸಿರುವ ಪೈಪ್‌ಗ್ಳ ಗುಣಮಟ್ಟದ ಅಸಮರ್ಪಕವಾಗಿದ್ದು, ವಾಹನಗಳು ಈ ಪೈಪ್‌ಗ್ಳ ಮೇಲೆ ಸಂಚರಿಸಿದಾಗ ಸದ್ದಾಗುತ್ತಿದೆ. ಕೆಲವೊಮ್ಮೆ ಪೈಪ್‌ಗ್ಳು ತುಂಡಾಗಿ ಬಿಡುತ್ತದೆ ಎಂಬ ಭಯ ಸಹ ಜನತೆಯನ್ನು ಕಾಡುತ್ತಿದೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.
ತೆರೆದು ಕೊಳ್ಳದ ಗೇಟ್‌ಗಳು : ಟೋಲ್ ಬೂತ್‌ಗೆ ಅಳವಡಿಸಿರುವ ಗೇಟ್ ಗಳು(ಬೂಮ್) ಫಾಸ್ಟ್ ಟ್ಯಾಗ್ ರೀಡ್ ಆಗುತ್ತಿದ್ದಂತೆ ಸ್ವಯಂಚಾಲಿತವಾಗಿ ತೆರೆದುಕೊಳ್ಳಬೇಕು. ಆದರೆ, ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಕಟ್ ಆದರೂ ತೆರೆದಕೊಳ್ಳುತ್ತಿಲ್ಲ. ಗೇಟ್ ತೆರೆಯದೇ ಹೋದರೆ ನಮಗೆ ಗೊತ್ತಿಲ್ಲ ಎಂದು ಟೋಲ್ ಸಿಬ್ಬಂದಿ ಬಿಲ್ ನೀಡಿ ದುಪ್ಪಟ್ಟು ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ದುಂಡಾವರ್ತನೆ ಮಾಡುತ್ತಾರೆ. ಕೆಲವೊಮ್ಮೆ ಫಾಸ್ಟ್‌ಟ್ಯಾಗ್‌ನಲ್ಲೂ ಹಣ ಕಟ್ ಆಗುವ ಜೊತೆಗೆ ಟೋಲ್‌ನಲ್ಲೂ ದುಪ್ಪಟ್ಟು ಹಣ ಕಟ್ಟಿಸಿಕೊಂಡು ಗ್ರಾಹಕರ ಜೇಬಿಗೆ ಬರೆ ಹಾಕಲಾಗುತ್ತಿದೆ.
-ಸು.ನಾ. ನಂದಕುಮಾರ್