Advertisement

Ramanagara: ಡ್ರೋನ್‌ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು

03:20 AM Jan 13, 2025 | Team Udayavani |

ರಾಮನಗರ: ದೇಶದಲ್ಲೇ ಮೊದಲ ಬಾರಿಗೆ ಡ್ರೋನ್‌ ಮೂಲಕ ಕೃಷಿ ಭೂಮಿ ಮರುಭೂಮಾಪನ ಕಾರ್ಯ ಪರೀಕ್ಷಾರ್ಥ ಯಶಸ್ವಿಯಾಗಿದ್ದು ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬಳಿ ವ್ಯಾಪ್ತಿ ಹೊಸ ಭೂಮಾಪನದ ಡಿಜಿಟಲ್‌ ನಕ್ಷೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರೈತರಿಗೆ ವಿತರಿಸಿದರು.

Advertisement

ಈ ಮೂಲಕ 1920ರ ಅನಂತರ ಅಂದರೆ 100 ವರ್ಷದ ಬಳಿಕ ರೈತರ ಭೂಮಿ ಮರುಸರ್ವೇಗೆ ಚಾಲನೆ ದೊರೆತಿದ್ದು ಇದರ ಸಾಧಕಬಾಧಕಗಳನ್ನು ಚರ್ಚಿಸಿ ಸರಕಾರ ಇಡೀ ರಾಜ್ಯಕ್ಕೆ ಈ ಯೋಜನೆಯನ್ನು ವಿಸ್ತರಿಸಲು ಚಿಂತಿಸಿದೆ. ಇದರಿಂದ ರಾಜ್ಯದ ಎಲ್ಲ ಭೂಮಿಗಳು ಮತ್ತೆ ಸರ್ವೇಗೆ ಒಳಪಡಲಿದ್ದು, ಭೂವ್ಯಾಜ್ಯಗಳಿಗೆ ಬ್ರೇಕ್‌ ಬೀಳಲಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಉಯ್ಯಂಬಹಳ್ಳಿ ಹೋಬಳಿ ವ್ಯಾಪ್ತಿ 35 ಕಂದಾಯ ಗ್ರಾಮಗಳಲ್ಲಿ ರೋವರ್‌ ಯಂತ್ರವನ್ನು ಆಧ‌ರಿಸಿ ಪ್ರಾಯೋಗಿಕವಾಗಿ ಮರುಸರ್ವೇಗೆ 2023ರ ಆಗಸ್ಟ್‌ನಲ್ಲಿ ಸಂಸದ ಡಿ.ಕೆ.ಸುರೇಶ್‌ ಚಾಲನೆ ನೀಡಿದ್ದರು. ಈ ಹಿಂದೆ 5,800 ಪಹಣಿಗಳಿದ್ದು ಮರು ಸರ್ವೇ ಬಳಿಕ 23,469 ಪಹಣಿ ಸೃಜಿಸಲಾಗಿದೆ.

ಏನಿದು ರೋವರ್‌ ಸರ್ವೇ?
2018ರಲ್ಲಿ ರಾಮನಗರ ಜಿಲ್ಲೆಯಲ್ಲಿ ಡ್ರೋನ್‌ ಆಧಾರಿತ ಸರ್ವೇಗೆ ಚಾಲನೆ ದೊರಕಿದ್ದು 4 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ತೆಗೆದು ಸರ್ವೇ ಆಫ್‌ ಇಂಡಿಯಾಗೆ ಕಳುಹಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ರೋವರ್‌ ಅನ್ನು ಜಮೀನಿನ ಮೇಲ್ಭಾಗದಲ್ಲಿ 100 ಮೀಟರ್‌ ಎತ್ತರದಲ್ಲಿ ಹಾರಿಸಿ, ಚಿತ್ರ ಸೆರೆ ಹಿಡಿದು ವಿಸ್ತೀರ್ಣ ಹಾಗೂ ನಕ್ಷೆಯನ್ನು ಸೃಜಿಸಲಾಗುತ್ತದೆ. ಇದರ ಆಧಾರದ ಮೇಲೆ ಜಿಐಎಸ್‌ ತಂತ್ರಜ್ಞಾನಬಳಸಿ ಡಿಜಿಟಲ್‌ ಪಹಣಿ ನೀಡಲಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸರಕಾರ ರೈತರಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಭೂದಾಖಲೆಗಳನ್ನು ನೀಡುತ್ತಿದೆ. ಪ್ರಾಯೋಗಿಕವಾಗಿ ನಡೆದ ಮೊದಲ ಭೂಮರು ಸರ್ವೇ ಯಶಸ್ವಿಯಾಗಿದೆ. ಇದನ್ನು ಆಧರಿಸಿ ರಾಜ್ಯಕ್ಕೆ ಈ ಯೋಜನೆ ವಿಸ್ತರಿಸಲಾಗುವುದು. -ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.