Advertisement

ವಚನಗಳು ಇಂದಿಗೂ ಪ್ರಸ್ತುತ

06:17 PM Jul 26, 2021 | Team Udayavani |

ರಾಮನಗರ: ಹಡಪದ ಅಪ್ಪಣ್ಣ ಅವರು ಹನ್ನೆರಡನೆಯ ಶತಮಾನದಲ್ಲಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಉಪನ್ಯಾಸಕ ಡಾ.ಅಂಕನಹಳ್ಳಿ ಪಾರ್ಥ ಹೇಳಿದರು.

Advertisement

ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿ ರ್ಣದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಜಿÇÉಾಡಳಿತ, ಜಿಪಂ, ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸರಳ ಹಾಗೂ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿ, ಅಪ್ಪಣ್ಣ ಅವರು ರಚಿಸಿರುವ ವಚನಗಳಲ್ಲಿ ಮಾನವನಲ್ಲಿರುವ ಮೂಢನಂಬಿಕೆಯನ್ನು ತೊಲಗಿಸುವ ನಿಟ್ಟಿನಲ್ಲಿ ಅರಿವು ಮೂಡಿಸುತ್ತವೆ.

ಸಮಾಜದ ಪರಿಸ್ಥಿತಿಯನ್ನು ಅಪ್ಪಣ ಅವರ ವಚನಗಳಲ್ಲಿ ವ್ಯಕ್ತವಾಗಿವೆ. ವಚನ ಚಳವಳಿ, ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಅಪ್ಪಣ್ಣ ಸಹ ಒಬ್ಬರು ಎಂದರು.

 ಅಪ್ಪಣ್ಣ ಕಾರ್ಯಕ್ಷಮತೆ ಮಾರ್ಗದರ್ಶಕ: ಬಸವಣ್ಣನವರನ್ನು ಕಾಣಲು ಬಂದವರು ಮೊದಲು ಹಡಪದ ಅಪ್ಪಣ್ಣನವರನ್ನು ಕಂಡೇ ಬರಬೇಕು ಎಂಬ ನಿಯಮ ಜಾರಿಯಲ್ಲಿತ್ತು ಎನ್ನಲಾಗಿದೆ. ವಿಶ್ವದ ಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರೊಂದಿಗೆ ಇದ್ದರು. ಹಡಪದ ಅಪ್ಪಣ್ಣ ಅವರ ಕಾರ್ಯಕ್ಷಮತೆ ಇಂದಿಗೂ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.

250ಕ್ಕೂ ಹೆಚ್ಚು ವಚನ ರಚನೆ: ವಿಜಯ ಪುರ ಜಿಲ್ಲೆಯ ತಂಗಡಗಿಯಲ್ಲಿ ಹಡಪದ ಅಪ್ಪಣ ಅವರ ಸಮಾಧಿ ಇದೆ. 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ವಚನಗಳು ರಚನೆಯಾಗಿವೆ. ಹಡಪದ ಅಪ್ಪ ಣನವರ ಧರ್ಮಪತ್ನಿ ಲಿಂಗಮ್ಮನವರು ಸಹ ವಚನಗಳನ್ನು ರಚಿಸಿದ್ದಾರೆ.

Advertisement

ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳ ಪ್ರಕಾರ ಬಸವಣ್ಣನವರಿಗೆ ಅಪ್ಪಣ್ಣನವರೆಂದರೆ ಪ್ರಾಣ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮುದಾಯದ ಜಿÇÉಾ ಉಪಾಧ್ಯಕ್ಷರಾದ ಸತೀಶ್, ಪ್ರಮುಖರಾದ ಶಾಂತಕುಮಾರ್ ಭಜಂತ್ರಿ, ಅನಿಲ್ ಕುಮಾರ್, ನಿತನ್ ಕೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next