ಮಾಗಡಿ: ಲಾಕ್‌ಡೌನ್ ಸಂಕಷ್ಟದಲ್ಲಿರುವಬಡವರಿಗೆ ಹಸಿವಿನಿಂದ ನರಳಬಾರದು ಎಂದುದಿನಸಿ ಕಿಟ್ ವಿತರಿಸುತ್ತಿದ್ದೇವೆ ಎಂದು ಮಾಜಿಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ತಿರುಮಲೆ ಎರಡು ಮತ್ತು 3ನೇವಾರ್ಡ್‌ನಲ್ಲಿ ಬಡವರಿಗೆ ದಿನಸಿ ಕಿಟ್ ವಿತರಿಸಿಮಾತನಾಡಿ, ನಾನು ಮಾಜಿ ಶಾಸಕನಾದರೂಜನರ ಋಣ ನನ್ನ ಮೇಲಿದೆ. ಸಂಕಷ್ಟದಲ್ಲಿರುವಾಗಅವರ ಋಣ ತೀರಿಸುವು ದು ನನ್ನ ಕರ್ತವ್ಯ ಎಂಬಭಾವನೆಯಿಂದ ದಿನಸಿ ಕಿಟ್ ವಿತರಿಸುವ ಕೆಲಸಮಾಡುತ್ತಿದ್ದೇನೆ ಎಂದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಸರ್ಕಾರ ವೈಫಲ್ಯದಿಂದ ಲಕ್ಷಾಂತರ ಮಂದಿಸಾವು ನೋವುಗಳನ್ನು ಅನುಭವಿಸು ವಂತಾಗಿದೆ.ಇನ್ನಾದರೂ ಸರ್ಕಾರ 3ನೇ ಅಲೆ ತಡೆಗೆಮುಂಜಾಗ್ರತಾ ಕ್ರಮ ಅನುಸರಿಸುತ್ತ ದೆಯೇಎಂಬುದನ್ನು ಕಾದು ನೋಡಬೇಕಿದೆ. ಸರ್ಕಾರಜಾಗೃತಿಗೊಳ್ಳದಿದ್ದರೆ ಮುಂದಿ ದಿನಗಳಲ್ಲಿ ಜನರೇದಿಟ್ಟ ನಿರ್ಧಾರ ಕೈಗೊಳ್ಳುವ ಕಾಲ ದೂರವಿಲ್ಲಎಂದು ಹೇಳಿದರು.
ಪುರಸಭಾ ಸದಸ್ಯರಾದಎಚ್.ಜೆ.ಪುರು ಷೋತ್ತಮ್, ಶಿವಕುಮಾರ್,ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಮಾಜಿಸದಸ್ಯ ವಿಜಯಕುಮಾರ್, ಮಂಡಿ ಗುರು,ಬೆಳಗುಂಬದ ಜಯರಾಮು, ತೇಜಶ್‌ಕುಮಾರ್,ಮೈಕಲ್, ರಂಗನಾಥ್,ಎಂ.ಆರ್. ಮಂಜುನಾಥ್,ಡೂಂ ಲೈಟ್ ಮೂರ್ತಿ ಇದ್ದರು.