ರಾಮನಗರ: ಶನಿವಾರ ರಾತ್ರಿ 10.15ರ ವೇಳೆ ನಗರದ ಮಾಗಡಿ ರಸ್ತೆಯ ಮಹಿಳಾ ಸರ್ಕಾರಿ ಪದವಿಕಾಲೇಜು ಮುಂಭಾಗದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೂವರು ಯುವಕರು ಮೃತ ಪಟ್ಟ ಘಟನೆಗೆಜಿಲ್ಲಾಡಳಿತ, ನಗರಸಭೆಮತ್ತು ಪೊಲೀಸ್ ಇಲಾಖೆಯೆ ನೇರಹೊಣೆ ಎಂದು ಆ ಭಾಗದ ನಾಗರಿಕರುಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿರುವು ಎಚ್ಚರಿಕೆಯ ಫಲಕವಿಲ್ಲ: ನಗರದ ಮಾಗಡಿರಸ್ತೆಯ ಕೆಂಪೇಗೌಡ ವೃತ್ತ ಮತ್ತು ರಾಯರದೊಡ್ಡಿವೃತ್ತದ ನಡುವಿನ ಈ ರಸ್ತೆಯಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಭಿವಿಸುತ್ತಲೇ ಇರುತ್ತವೆ. ಮಹಿಳಾ ಸರ್ಕಾರಿಪದವಿ ಕಾಲೇಜು ಮುಂಭಾಗ ರಸ್ತೆಯ ತಿರುವಿದೆ.ಎದುರುಗಡೆಯಿಂದ ಬರುವ ವಾಹನಗಳುಗೋಚರಿಸುವುದೇ ಇಲ್ಲ. ಇಲ್ಲಿ ತಿರುವು ಇರುವ ಬಗ್ಗೆವಾಹನ ಚಾಲಕರನ್ನು ಎಚ್ಚರಿಸುವ ಯಾವ ಫಲಕವೂಇಲ್ಲ. ಸಿಗ್ನಲ್ ದೀಪ, ರಸ್ತೆ ಉಬ್ಬು ಇಲ್ಲ. ರಾತ್ರಿ ವೇಳೆಇಲ್ಲಿರುವ ಬೀದಿ ದೀಪದ ವ್ಯವಸ್ಥೆ ಸಾಕಾಗುವುದಿಲ್ಲಎಂದು ನಾಗರಿಕರು ತಿಳಿಸಿದ್ದಾರೆ.
ಇಲ್ಲಿ ಸಂಚರಿಸುವ ದ್ವಿಚಕ್ರವಾಹನಗಳ ಚಾಲಕರತಪ್ಪು ಇದೆ ಎಂದು ಆರೋಪಿಸಿರುವ ನಾಗರಿಕರು ರಸ್ತೆಅಗಲವಿದೆ ಎಂದು ಕೆಲವರು ವೇಗವಾಗಿ ಹೋಗುವುದುಂಟು ಎಂದು ದೂರಿದ್ದಾರೆ. ಶನಿವಾರದಘಟನೆಯನಂತರ ಪೊಲೀಸರು ಇಲ್ಲಿ ಕೆಲವು ಬ್ಯಾರಿಕೇಡ್‌ಗಳನ್ನುಅಳವಡಿಸಿದ್ದಾರೆ.ಅಧಿಕಾರಿಗಳ ಗಮನಸೆಳೆದರೂ ಉಪಯೋಗವಾಗಲಿಲ್ಲ: ರಸ್ತೆಯ ಅಕ್ಕ-ಪಕ್ಕ ಚರಂಡಿ ವ್ಯವಸ್ಥೆ ಇಲ್ಲ. ಫುಟ್‌ಪಾತ್ ವ್ಯವಸ್ಥೆ ಇಲ್ಲ. ಶರತ್ ಶಾಲೆಯ ಬಳಿ ರಸ್ತೆಯಲ್ಲಿಪದೇ ಪದೆ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗುತ್ತಲೇ ಇದೆ.
ಮಹಿಳಾ ಕಾಲೇಜು ಮುಂಭಾಗ ರಸ್ತೆ ಅಕ್ಕಪಕ್ಕ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ. ಸಹಜವಾಗಿಮಣ್ಣು, ಧೂಳು ರಸ್ತೆಯನ್ನು ಸೇರುತ್ತಿದೆ. ವೇಗವಾಗಿಚಲಿಸುವ ದ್ವಿಚಕ್ರ ವಾಹನಗಳು ಆಯ ತಪ್ಪಿ ಜಾರಿಬಿದ್ದಿರುವ ಉದಾಹರಣೆಗಳು ಇವೆ, ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು ಉಪಯೋಗವಾಗಲಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಡೆಯದ ಪ್ರತಿಭಟನೆ: ಶನಿವಾರದ ಘಟನೆಯನ್ನುಆಧಾರವಾಗಿಟ್ಟು ಕೊಂಡು ಆ ಭಾಗದ ಕೆಲವು ನಾಗರಿಕರು ಭಾನುವಾರ ಪ್ರತಿಭಟನೆ ಹಮ್ಮಿಕೊಳ್ಳಲುಮುಂದಾಗಿದ್ದರು, ಸಾಮಾಜಿಕ ಜಾಲತಾಣದಲ್ಲಿ ಈಬಗ್ಗೆ ಪ್ರಚಾರವನ್ನು ಮಾಡಿದ್ದರು. ಆದರೆ ಭಾನುವಾರಈ ಪ್ರತಿಭಟನೆ ನಡೆಯಲಿಲ್ಲ. ಪೊಲೀಸ್ ಅಧಿಕಾರಿಗಳಸೂಚನೆಯ ಮೇರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.