ರಾಮನಗರ: ತಾಲೂಕಿನ ವಿಭೂತಿಕೆರೆ ಮತ್ತುಬನ್ನಿಕುಪ್ಪೆ (ಕೆ) ಗ್ರಾಪಂ ವ್ಯಾಪ್ತಿಯ12 ಗ್ರಾಮಗಳನಿವಾಸಿಗಳಿಗೆಕುಡಿಯಲುಕಾವೇರಿ ನೀರು ಪೂರೈಕೆಯಾಗಲಿದೆ ಎಂದು ರಾಮನಗರ ವಿಧಾನಸಭಾಕ್ಷೇತ್ರದ ಶಾಸಕಿ ಅನಿತಾ ತಿಳಿಸಿದರು.
ತಾಲೂಕಿನ ಕೈಲಾಂಚ ಹೋಬಳಿಯವಿಭೂತಿಕೆರೆ ಮತ್ತು ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ, ಗಣಿಮತ್ತು ಭೂ ವಿಜ್ಞಾನ ಇಲಾಖೆಗಳ ಅನುದಾನದಡಿರಸ್ತೆ, ಚರಂಡಿ ಮುಂತಾದ ಅಭಿವೃದ್ಧಿಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ರಾಮನಗರಕ್ಕೆಕಾವೇರಿ ನೀರುಕಲ್ಪಿಸುವ ತೊರೆಕಾಡನಹಳ್ಳಿಯಿಂದಸುಮಾರು 420 ಕೋಟಿ ರೂ. ವೆಚ್ಚದ ನೀರುಪೂರೈಕೆ ಯೋಜನೆಕಾರ್ಯಗತವಾಗುತ್ತಿದೆ. ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಪೈಪ್‌ಲೈನ್‌ವಿಭೂತಿಕೆರೆ, ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಕೆಲವುಗ್ರಾಮಗಳ ಮೂಲಕ ಹಾದು ಹೋಗಲಿದ್ದು, ಈಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.
ಮುಂದಿನ ದಿನಗಳಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ರೈತರಿಗೆ ಅನುಕೂಲ: ಕುಮಾರಸ್ವಾಮಿ ಸಿಎಂಆಗಿದ್ದ ಸಂದರ್ಭದಲ್ಲಿ ಕಸಬಾ ಹೋಬಳಿವ್ಯಾಪ್ತಿಯ ಕಾಳೇಗೌಡನದೊಡ್ಡಿ ಬಳಿ 28 ಕೋಟಿರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಅನುಮತಿ ನೀಡಿದ್ದರು. ಆದರೆ, ಹಣ ಬಿಡುಗಡೆಯಾಗಿರಲಿಲ್ಲ. ಇದೀಗ ಸರ್ಕಾರದ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಫೈಲ್‌ಬಂದಿದೆ. ಅನುಮೋದನೆ ದೊರೆಯುವ ವಿಶ್ವಾಸವಿದೆ. ಕಸಬಾ ಹೋಬಳಿ ವ್ಯಾಪ್ತಿಯ ರೈತರಿಗೆಅನುಕೂಲವಾಗಲಿದೆ ಎಂದು ಹೇಳಿದರು.
ಚುನಾವಣೆಗೆ ಸಂಘಟನೆಗೆ ಚುರುಕು: ಡಿಸೆಂಬರ್‌ವೇಳೆಗೆ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಚುನಾವಣೆ ನಡೆಯುವ ಸಾಧ್ಯತೆ ಇದೆ. ಜೆಡಿಎಸ್‌ನಲ್ಲಿ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿದ್ದು, ಸಂಘಟಿತರಾಗಿ ಚುನಾವಣೆಎದುರಿಸಲಿದ್ದಾರೆ. ಪಕ್ಷ ಸಂಘಟನೆಯನ್ನುಚುರುಕುಗೊಳಸಲಾಗಿದೆ. ಯಾರೇ ಕಾರ್ಯಕರ್ತನಿಗೆ ಟಿಕೆಟ್ ಸಿಕ್ಕರೂ ಉಳಿದವರು ಅವರ ಗೆಲುವಿಗೆಶ್ರಮಸಲಿದ್ದಾರೆ ಎಂದು ಹೇಳಿದರು.ನಾಗರಿಕರ ಮನವಿ: ಚನ್ನಮಾನಹಳ್ಳಿ ಗ್ರಾಮದಲ್ಲಿ ಮಹಿಳೆಯರು ತಮ್ಮ ಗ್ರಾಮದ ರಸ್ತೆ ಸಮಸ್ಯೆ ಬಗ್ಗೆ ಹೇಳಿಕೊಂಡರು.
ಕೆಲವರು ತಮ್ಮ ವೃದ್ದಾಪ್ಯವೇತನ ಬಂದಿಲ್ಲ ಎಂದು ಶಾಸಕರ ಬಳಿ ನೋವುತೋಡಿಕೊಂಡರು. ಶಾಸಕರು ಸಂಧ್ಯಾ ಸುರಕ್ಷಾಯೋಜನೆಯಡಿ ಸುಮಾರು 30 ಮಂದಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಡಿಸಿಸಿಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವಥ್, ಜಿಪಂಮಾಜಿ ಅಧ್ಯಕ್ಷ ಎಚ್.ಸಿ ರಾಜಣ್ಣ, ಜೆಡಿಎಸ್‌ಪ್ರಚಾರ ಸಮಿತಿ ಅಧ್ಯಕ್ಷ ಆರ್. ಪಾಂಡುರಂಗ,ವಿಭೂತಿಕೆರೆ ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ,ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷಚಂದ್ರಗಿರಿ, ಸದಸ್ಯರಾದ ಚಲುವರಾಜು, ಭಾÓರ್ R ,ನವೀನ ನಾಗರಾಜು, ಆರ್. ಮೂರ್ತಿನಾಯಕ್,ಸುನಿತಬಾಬು,ಜ್ಯೋತಿಬಾಲಕೃಷ್ಣ, ಗ್ರಾಪಂಮಾಜಿಅಧ್ಯಕ್ಷ ಎಸ್.ಮಹೇಶ್, ಮುಖಂಡರಾದಗುನ್ನೂರು ದೇವರಾಜು, ನರೇಂದ್ರ, ವೆಂಕಟೇಶ್,ಸಿ¨ಯ್ಯ, ª ಪಾರ್ಥಸಾರಥಿ, ನàನ್, ಪುಟ್ಟಸ್ವಾಮಿ, ಸಿ.ಎಸ್.ಜಯಕುಮಾರ್, ಚಂದ್ರಗಿರಿ, ಗಿರಿಸ್ವಾಮಿ,ಕರಿಯ±, Ã ³ ೇವಣ್ಣ, ಗೋಪಾಲನಾಯ್ಕ,ಅಪ್ಪಾಜಣ್ಣ, ಕೃಷ್ಣೇಗೌಡ, ಬಾಬು, ಕಾಡನಕುಪ್ಪೆನವೀನ್, ದೊಡ್ಡಣ್ಣ ಹಾಜರಿದ್ದರು.