Advertisement

ಹವಾಮಾನ ಬೆಳೆ ವಿಮೆಯೋಜನೆ ಅನುಷ್ಠಾನ

05:21 PM Jul 05, 2021 | Team Udayavani |

ರಾಮನಗರ: ಜಿಲ್ಲೆಯ ಎಲ್ಲಾ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ 2021-22ರ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಮರು ವಿನ್ಯಾಸಗೊಳಿಸಿದಾಗಹವಮಾನ ಆಧಾರಿತ ಬೆಳೆ ವಿಮಾಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

Advertisement

ಈ ವಿಚಾರವನ್ನು ರೈತಾಪಿವರ್ಗದ ಗಮನಕ್ಕೆ ತರಬೇಕು ಎಂದುಅಧಿಕಾರಿಗಳು ಹಾಗೂ ಪ್ರಚಾರ ಸಂಸ್ಥೆಗಳಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್‌.ಕೆ. ಸೂಚಿಸಿದರು.ಮರು ವಿನ್ಯಾಸಗೊಳಿಸಿದ ವಿಮಾಯೋಜನೆಯ ಪ್ರಚಾರಕ್ಕಾಗಿ ಹಮ್ಮಿಕೊಂಡಿರುವ ಬೆಳೆ ವಿಮಾ ಸಪ್ತಾಹಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬೆಳೆ ವಿಮೆ ನೋಂದಣಿಯಿಂದಆಗುವ ಅನುಕೂಲಗಳ ಬಗ್ಗೆ ರೈತರಿಗೆಮನವರಿಕೆ ಮಾಡಿಕೊಡಬೇಕು.

ಹೆಚ್ಚುಮಂದಿರೈತರು ವಿಮಾಸೌಲಭ್ಯ ಪಡೆಯುವಂತೆ ಪ್ರೋತ್ಸಾಹಿಸಿ ಎಂದರು ತಿಳಿಸಿದರು.ಬ್ಯಾಂಕ್‌ ಮೂಲಕ ನೋಂದಾಣಿ:ರಾಮನಗರ ಜಿÇÉೆಯಲ್ಲಿ ಅಂದಾಜು32743 ಹೆ.ಪ್ರದೇಶದಲ್ಲಿ ಮಾವು ಬೆಳೆಬೆಳೆಯಲಾಗುತ್ತಿದೆ. 27412 ರೈತರುಮಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾವು ಬೆಳೆಯನ್ನು ವಿಮಾವ್ಯಾಪ್ತಿಗೆ ಒಳಪಡಿಸಿ, ಬೆಳೆ ಸಾಲ ಪಡೆದರೈತರು ಕಡ್ಡಾಯವಾಗಿ ವಿಮಾ ಮಾಡಿಸಬೇಕಾಗಿದೆ. ಸಾಲ ಪಡೆಯದ ರೈತರುತಮ್ಮ ವ್ಯಾಪ್ತಿಯಲ್ಲಿರುವ ಬ್ಯಾಂಕುಗಳಮೂಲಕ ನೋಂದಾಣಿ ಮಾಡಿಸಿಕೊಳ್ಳಬಹುದಾಗಿದೆ. ಪ್ರತಿ ಹೆಕ್ಟೇರ್‌ಗೆ ಗರಿಷ್ಠವಿಮಾ ಮೊತ್ತ 80 ಸಾವಿರ ರೂ. ಆಗಿದೆ.

ರೈತರು ಶೇ.5ರಂತೆ ಪ್ರತಿ ಹೆಕ್ಟೇರ್‌ಗೆ 4ಸಾವಿರ ರೂ. ವಿಮಾ ಕಂತು ಪಾವತಿಸಬೇಕಾಗಿದೆ ಎಂದರು.ವಿಮಾ ಪರಿಹಾರ ಪಾವತಿ: 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು1718ಜನ ವಿಮೆಗೆ ನೋಂದಾಯಿಸಿದ್ದರು. 40 ಲಕ್ಷ ರೂ.ವಿಮಾ ಕಂತನ್ನುಪಾವತಿಯಾಗಿತ್ತು. ತದ ನಂತರ ಒಟ್ಟು377 ಲಕ್ಷ ರೂ ರೈತರ ಖಾತೆಗೆ ವಿಮಾಪರಿಹಾರ ಮೊತ್ತ ಪಾವತಿಯಾಗಿದೆ.2020-21 ನೇ ಸಾಲಿನಲ್ಲಿ ಜಿÇÉೆಯಲ್ಲಿಒಟ್ಟು 1186 ಜನ ವಿಮೆಗೆ ನೋಂದಾಯಿಸಿದ್ದರು. 29.49 ಲಕ್ಷ ರೂ.ವಿಮಾಕಂತನ್ನು ಪಾವತಿಯಾಗಿದೆ. ಪರಿಹಾರಕೋರಿರುವ ರೈತರ ಅಹವಾಲನ್ನುಟರ್ಮ್ ಶೀಟ್‌ನಲ್ಲಿ ನಮೂದಿಸಲಾಗಿದೆ.

Advertisement

ಪರಿಹಾರ ಅನುಮೋದನೆ ಹಂತದಲ್ಲಿದೆ ಎಂದು ಹೇಳಿದರು.ವಿಮಾ ಸೌಲಭ್ಯ ಪಡೆಯಿರಿ: ಸರ್ಕಾರದಆದೇಶದ ಪ್ರಕಾರ ಜಿಲ್ಲೆಯಲ್ಲಿ ಬೆಳೆವಿಮೆ ನಿರ್ವಹಣೆಗೆ ಸ್ಟೇಟ್‌ ಬ್ಯಾಂಕ್‌ಆಫ್ ಇಂಡಿಯಾ ಮತ್ತು ಜನರಲ…ಇನ್ಯೂರೆನ್ಸ್‌ಕಂಪನಿಗಳು ಅನುಮೋದಿತವಿಮೆ ಸಂಸ್ಥೆಯಾಗಳಾಗಿವೆ. ವಿಮಾಮೊತ್ತ ಪಾವತಿಸುವುದು ಮತ್ತು ವಿಮಾಯೋಜನೆಗೆ ನೋಂದಾಯಿಸಿಕೊಳ್ಳಲುಜು.31 ಕೊನೆ ದಿನವಾಗಿದೆ. ವಿಮಾಸೌಲಭ್ಯ ಪಡೆಯ ಬೇಕು ಎಂದರು. ಕೃಷಿಇಲಾಖೆ ಉಪ ನಿರ್ದೇಶಕ ಸೋಮಸುಂದರ್‌, ತೋಟಗಾರಿಕೆ ಇಲಾಖೆಉಪ ನಿರ್ದೇಶಕ ಮುನೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next