ರಾಮನಗರ: ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿಗಳ ಕಚೇರಿ,ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ,ರೋಟರಿ ಸಿಲ್ಕ… ಸಿಟಿ ಕ್ಲಬ್ ಸಂಯುಕ್ತವಾಗಿ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಮಾದಕವಸ್ತುಗಳ ಬಳಕೆ ಮತ್ತು ಕಳ್ಳ ಸಾಗಾಣಿಕೆ ವಿರೋಧ ದಿನಾಚರಣೆ ಅಂಗವಾಗಿ ಜಾಗೃತಿಜಾಥಾ ಕಾರ್ಯಕ್ರಮ ನಡೆಯಿತು.
ಕರಪತ್ರಗಳನ್ನು ಬಿಡುಗಡೆ ಮಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಶಿಧರ್‌ಮಾತನಾಡಿ, ಮಾದಕ ವಸ್ತುಗಳಿಗೆ ಹೆಚ್ಚಾಗಿಯುವ ಪೀಳಿಗೆ ವ್ಯಸನಿಗಳಾಗುತ್ತಿದ್ದಾರೆ.ಇದು ಒಳ್ಳೆಯ ಬೆಳೆವಣಿಗೆಯಲ್ಲ.ಸಮುದಾಯದಲ್ಲಿ ಜಾಗೃತಿ ಮೂಡಿಸಿ ಅವರನ್ನು ವ್ಯಸನ ಮುಕ್ತರನ್ನಾಗಿ ಮಾಡಬೇಕು.
ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯನ್ನುಜನ ಸಮುದಾಯ ವಿರೋಧಿಸಬೇಕು.ಮಾದಕ ವಸ್ತುಗಳ ಬಳಕೆಯಿಂದ ಮಾನಸಿಕವಾಗಿ ಮತ್ತು ದೇಹದ ಆರೋಗ್ಯದ ಮೇಲೆದುಷ್ಪರಿಣಾಮ ಉಂಟಾಗುತ್ತದೆ. ಇಂತಹಜಾಗೃತಿ ಜಾಥಾಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.
ವ್ಯಸನ ಮುಕ್ತ ಸಮಾಜಕ್ಕೆ ಪ್ರಯತ್ನ:ಜಾಗೃತಿ ಜಾಥಾವನ್ನು ಉದ್ಘಾಟಿಸಿದ ರಾಮನಗರ ರೋಟರಿ ಸಿಲ್ಕ… ಸಿಟಿ ಅಧ್ಯಕ್ಷರವಿಕುಮಾರ್ ಮಾತನಾಡಿ, ವ್ಯಸನ ಮುಕ್ತಸಮಾಜವನ್ನು ನಿರ್ಮಿಸಲು ಆರೋಗ್ಯಇಲಾಖೆಯ ಪ್ರಯತ್ನವನ್ನು ಶ್ಲಾ ಸಿದರು.
ಮುಂದಿನ ದಿನಗಳಲ್ಲಿ ತಮ್ಮ ಸಂಸ್ಥೆಯೂಇಂತಹ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.ಮನೋ ವೈದ್ಯರಾದ ಡಾ.ಶಿವಸ್ವಾಮಿ,ಡಾ.ಆದರ್ಶ, ಡಿ.ಎಲ….ಒ ಡಾ. ಮಂಜುನಾಥ್, ಡಿ.ಟಿ.ಒ ಡಾ.ಕುಮಾರ್, ಡಿ.ಎಂ.ಒಡಾ. ಪ್ರಸನ್ನಕುಮಾರ್, ಡಿ.ಎಸ್. ಒ ಡಾ.ಕಿರಣ್ ಶಂಕರ್, ಜಿÇÉಾ ಆರೋಗ್ಯಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್,ಮಾನಸಿಕ ಆರೋಗ್ಯ ವಿಭಾಗದ ಸೌಮ್ಯ,ಪದ್ಮರೇಖಾ, ಪವಿತ್ರ, ಮೇಲ್ವಿಚಾರಕರಾದಶಂಭುಲಿಂಗಯ್ಯ, ದಾಸಪ್ಪ, ಗುರುಸ್ವಾಮಿ,ಮಂಜುನಾಥ್ ಹಾಗೂ ಆರೋಗ್ಯ ಸಿಬ್ಬಂದಿ,ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು.