Advertisement
ಇದರ ಫಲವಾಗಿ ನಗರಸಭೆಯ ಸಾಮಾನ್ಯ ಸಭೆ ಬಳಿಕ ಪತ್ರಿಕೆಯಲ್ಲಿ ವರದಿ ಬರುತ್ತಿದೆ. ಕೂಡಲೇ ಕಸ ತೆರವು ಮಾಡಿ ಎಂದು ನಗರಸಭಾ ಸದಸ್ಯರು ಅರೋಗ್ಯ ಶಾಖೆಯ ಅಧಿಕಾರಿ ಸುಬ್ರಮಣ್ಯ ಅವರಿಗೆ ಒತ್ತಾಯಿಸಿದ್ದರು. ಬಳಿಕ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕೊಳೆಯುತ್ತಿದ್ದ ಕಸ ತೆರವು ಮಾಡಿ ಕಸ ಹಾಕದಂತೆ ದೇವರ ಫೋಟೋ ಇರುವ ಬ್ಯಾನರ್ ಕಟ್ಟುವ ಮೂಲಕ ಕಸ ಹಾಕದಂತೆ ಮನವಿ ಮಾಡಿದ್ದಾರೆ.
Related Articles
Advertisement
ಇನ್ನು ಈ ಬಗ್ಗೆ ಪ್ರಶ್ನಿಸೋಣವೆಂದರೆ ಅಧ್ಯಕ್ಷರಾಗಿದ್ದ ಪಾರ್ವತಮ್ಮ ಅವರ ರಾಜೀನಾಮೆಯಿಂದ ಅಧ್ಯಕ್ಷ ಹುದ್ದೆ ಖಾಲಿಯಾಗಿದ್ರೆ, ಆಯುಕ್ತರ ಮುಂಬಡ್ತಿಯಾಗಿರುವ ಕಾರಣಕ್ಕೆ ಅವರಿಗೆ ವರ್ಗಾವಣೆಯಾಗಿದೆ. ನಗರದ ಜನರ ಸಂಕಷ್ಟ ಕೇಳ್ಳೋರು ಯಾರು ಎನ್ನುವಂತಾಗಿದೆ.
ಕಸದ ಬುಟ್ಟಿ ನೀಡಿ: ಬೆಳಗ್ಗಿನ ಜಾವ ಕಸ ಹಾಕುವ ಗಾಡಿಗಳಲ್ಲಿ 5 ರಿಂದ 6 ಗಂಟೆಗೆ ಹೆಚ್ಚು ಸೌಂಡ್ ಕೊಟ್ಟಿಕೊಂಡು ಬರುತ್ತಾರೆ. ಇದು ಮಕ್ಕಳು ಮತ್ತು ವೃದ್ಧರ ಆರೋಗ್ಯ ದೃಷ್ಟಿಯಿಂದ ತೊಂದರೆ ಆಗುತ್ತಿದೆ. ಅದನ್ನ ತಪ್ಪಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸಚ್ಛ ಭಾರತ್ ಹಣ ಏನಾಯ್ತು. ಕಸ ಸುರಿಯುವ ಜಾಗವನ್ನೂ ಹುಡುಕಲಾಗಲಿಲ್ಲ. ಇಂತಹ ಬೇಜವಾಬ್ದಾರಿ ಏತಕ್ಕೆ. ಪ್ರತಿಯೊಂದು ಮನೆಗೂ ಕಸ ವಿಂಗಡಣೆಗೆಂದು ಬುಟ್ಟಿ ನೀಡಬೇಕು ಎಂದು ಮಾಜಿ ನಗರಸಭಾ ಸದಸ್ಯ ಪರ್ವೀಜ್ ಪಾಷಾ ಒತ್ತಾಯಿಸಿದರು.
ನಗರಸಭೆಯವರು ಕಸ ಹಾಕದೇ ಇರುವಂತೆ ದೇವರ ಫೋಟೋ ಬ್ಯಾನರ್‌ಗಳಲ್ಲಿ ಮುದ್ರಿಸಿ ಕಸದ ತೊಟ್ಟಿಯಲ್ಲಿ ಕಟ್ಟುವ ಮೂಲಕ ದೇವರಿಗೆ ಅಪಮಾನ ಮಾಡುತ್ತಿದ್ದಾರೆ. ಇದು ಖಂಡನೀಯ. ಕಸ ಹಾಕದಂತೆ ಹಲವು ಮಾರ್ಗ ಅನುಸರಿಸಬಹುದು. ದಂಡ ವಿಧಿಸುವ ಮೂಲಕ ಎಚ್ಚರಿಕೆ ಕೊಡಬಹುದಿತ್ತು. ಧಾರ್ಮಿಕ ಭಾವನೆ ಜೊತೆಗೆ ಆಟ ಆಡಬಾರದು. ಬಗ್ಗೆ ನಗರಸಭಾ ಸದಸ್ಯಗೆ ತಿಳಿಸಿದ್ದೇವೆ. ಕೂಡಲೇ ದೇವರ ಫೋಟೋ ತೆರವು ಮಾಡಬೇಕು. – ಚಂದನ್ ಮೋರೆ, ಹಿಂದೂ ಕಾರ್ಯಕರ್ತ
ಇದು ಧಾರ್ಮಿಕ ಭಾವನೆ ಕೆಣ ಕುವ ಕಾರ್ಯ. ನಗರಸಭೆಯ ವರನ್ನ ಕೇಳಿದ್ರೆ ನಾವು ಹಾಕಿಲ್ಲ ಅಂ ತಾರೆ, ನಗರಸಭೆ ಹೆಸರಲ್ಲಿ ಯಾರೋ ಹಾಕಿದ್ದಾರೆ ಅನ್ನೋದಾದ್ರೆ ಬೇಜವಾ ಬ್ದಾರಿತನ ಬಿಟ್ಟು ದೂರು ದಾಖಲಿಸಲಿ. ಇಲ್ಲವಾದ್ರೆ ಕ್ಷಮಾಪಣೆ ಕೋರಿ ಫೋಟೋ ತೆರವುಗೊಳಿಸಲಿ. –ಅನಿಲ್ ಬಾಬು, ವಿಭಾಗ ಸಂಯೋಜಕ ಹಿಂದೂ ಜಾಗರಣ ವೇದಿಕೆ
ಕಸ ಸುರಿವ ಜಾಗದಲ್ಲಿ ದೇವರ ಫೋಟೋ ಹಾಕುವ ಮೂಲಕ ಹಿಂದೂ-ಮುಸ್ಲಿಂ, ಕ್ರೈಸ್ತರ ಭಾವನೆ ಕೆರಳಿಸುವ ಕೆಲಸಕ್ಕೆ ಹೋಗಬಾರದು. ಕೂಡಲೇ ಅದನ್ನ ತೆಗೆಯಬೇಕು. ಜನತೆಗೆ ಕಸದ ಬುಟ್ಟಿ ನೀಡುವ ಯೋ ಗ್ಯತೆ ಇಲ್ಲದೆ ಈ ರೀತಿ ಯಾಮಾರಿಸ್ತಾರೆ. ಇವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ. –ಪರ್ವೀಜ್ ಪಾಷಾ, ಮಾಜಿ ನಗರಸಭಾ ಸದಸ್ಯ
–ಎಂ.ಎಚ್. ಪ್ರಕಾಶ ರಾಮನಗರ