Advertisement

ಅಭಿವೃದ್ಧಿ ವಿಚಾರದಲ್ಲಿ ಸಹಿಸಲ್ಲ

05:29 PM Dec 11, 2019 | Naveen |

ರಾಮನಗರ: ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷವಹಿಸುವ
ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಪಾರಸ್ಸು
ಮಾಡುವುದಾಗಿ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್‌
ಎಚ್ಚರಿಸಿದರು.

Advertisement

ತಾಲೂಕಿನ ಕೂಟಗಲ್‌ ಗ್ರಾಮಪಂಚಾಯ್ತಿ (ಮಾಗಡಿ
ವಿಧಾನಸಭಾ ಕ್ಷೇತ್ರ ವ್ಯಾಪ್ತಿ) ಆವರಣದಲ್ಲಿ ನಡೆದ ಕೂಟಗಲ್‌
ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ
ಅವರು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಾರ್ವಜನಿಕರಿಂದ
ದೂರುಗಳಿಗೆ ಅವಕಾಶವಾಗದಂತೆ ಕಾರ್ಯನಿರ್ವಹಿಸಿ
ಎಂದರು.

ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ
ನಿಟ್ಟಿನಲ್ಲಿಯೂ ಅನೇಕ ದೂರುಗಳು ಕೇಳಿ ಬರುತ್ತಿದೆ. ಸರ್ಕಾರಿ
ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ
ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಬೇಕು. ಹೀಗಾಗಿ
ಅಸಡ್ಡೆ ತೋರುವ, ನಿರ್ಲಕ್ಷವಹಿಸುವ ಅಧಿಕಾರಿಗಳ ವಿರುದ್ದ
ಮುಲಾಜಿಲ್ಲದೆ ಶಿಸ್ತು ಕ್ರಮಕ್ಕೆ ಶಿಪಾರಸ್ಸು ಮಾಡುವುದಾಗಿ
ತಿಳಿಸಿದರು. ಸಣ್ಣ , ಪುಟ್ಟ ಸಮಸ್ಯೆಗಳಿಗೂ ವರ್ಷಗಟ್ಟಲೆ
ಪರಿಹಾರ ದೊರಕುತ್ತಿಲ್ಲ. ಇಂತಹ ಸಂದರ್ಭಗಳಲ್ಲಿ ಜನತೆ
ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಾರೆ ಎಂದರು.

ಅಭಿವೃದ್ದಿಗೆ ಸಾಕಷ್ಟು ಅನುದಾನ ಬಂದಿದೆ: ಅಭಿವೃದ್ಧಿ ವಿಚಾರದಲ್ಲಿ ಕೂಟಗಲ್‌ ಹೋಬಳಿಯನ್ನು ನಿರ್ಲಕ್ಷಿಸವ ಪ್ರಶ್ನೆಯೇ
ಬರುವುದಿಲ್ಲ. ಲೋಕೋ ಪ ಯೋಗಿ ಇಲಾಖೆ, ಕಾವೇರಿ ನೀರಾವರಿ ನಿಗಮ, ಸಣ್ಣ ನೀರಾವರಿ ಇಲಾಖೆ, ಕೃಷಿ , ತೋಟಗಾರಿಕೆ ಸೇರಿದಂತೆ ಅನೇಕ ಇಲಾಖೆಗಳಿಂದ ಸಾಕಷ್ಟು ಅನುದಾನಗಳನ್ನು ತರಲಾಗಿದೆ.

ಅನೇಕ ಕಾರ್ಯಕ್ರಮಗಳಲ್ಲಿ ರೈತರು ಫ‌ಲಾನುಭವಿಗಳಾಗಿದ್ದಾರೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವೆ ಹೊಂದಾಣಿಕೆ ಕೊರತೆ ಇರುವ ಕಾರಣ ಭೂ ವ್ಯಾಜ್ಯಗಳು ಬಗೆ ಹರಿಯುತ್ತಿಲ್ಲ. ಎರಡು ಇಲಾಖೆಗಳು ತಮಗೆ ಸೇರಿದ ಜಾಗದ ಮರು ಸರ್ವೆ ಮಾಡಿಕೊಳ್ಳಬೇಕು. ಇನ್ನು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರು ಹಾಗೂ ಸಾಗುವಳಿ ಚೀಟಿದಾರರಿಗೆ ಹಕ್ಕು ಪತ್ರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

Advertisement

ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ: ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಕುರಿತಂತೆ ಉಂಟಾಗಿರುವ ತಾಂತ್ರಿಕ ದೋಷ ಸರಿಪಡಿಸುವ ವಿಚಾರದಲ್ಲಿ ತಾವು ಪ್ರಾಮಾಣಿಕ ಪ್ರಯತ್ನ ಪಡುತ್ತಿರುವುದಾಗಿ ತಿಳಿಸಿದರು. ರಾಜೀವ್‌ ಗಾಂಧಿ ವಸತಿ ಯೋಜನೆಯಡಿಯಲ್ಲಿ ಕೂಟ ಗಲ್‌ ಹೋಬಳಿ ವ್ಯಾಪ್ತಿಯ ಆರು ಗ್ರಾಪಂ ಗಳ ವಸತಿ ನಿರ್ಮಾಣಕ್ಕೆ ಮಂಜೂರಾಗಿದೆ. ಆದರೆ ರಾಜ್ಯದಲ್ಲಿ ಯಾವ ಫ‌ಲಾನುಭವಿಗೂ ಅನುದಾನ ಬಿಡುಗಡೆಯಾಗಿಲ್ಲ. ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡುವಂತೆ ತಾವು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ವಸತಿ ಯೋಜನೆಗೆ ಹಣ ಬಿಡುಗಡೆಯಾಗಿಲ್ಲ: ತಾಲೂಕು ಪಂಚಾಯಿತಿ ಅಧ್ಯಕ್ಷ ಗಾಣ ಕಲ್‌ ನಟ ರಾಜು ಮಾತನಾಡಿ, ಕೂಟಗಲ್‌ ಹೋಬಳಿಯ ಆರು ಗ್ರಾಪಂಗ ಳಿಗೆ 114 ಮನೆಗಳ ಫ‌ಲಾನುಭವಿಗಳಿಗೆ 62 ಲಕ್ಷ ರುಪಾಯಿ ಬಿಡುಗಡೆ ಆಗಬೇಕಾಗಿದೆ. ರಾಜೀವ್‌ ಗಾಂಧಿ ವಸತಿ ನಿಗಮದವರನ್ನು ಪ್ರಶ್ನಿಸಿದರೆ ಸಮರ್ಪಕವಾದ ಉತ್ತರ ಬರುತ್ತಿಲ್ಲ. ಅನುದಾನ ಬಿಡುಗಡೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.

ಜನಸಂಪರ್ಕ ಸಭೆಗಳು ನಿರಂತರವಾಗಿ ನಡೆಯಲಿ: ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಅಶೋಕ್‌ ಮಾತ ನಾಡಿ, ರೈತರಿಗೆ ಕೃಷಿ ಸಂಬಂಧಿತ ವೈಜ್ಞಾನಿಕ ಮಾಹಿತಿ ನೀಡಲು ರೈತ ಸಂಪರ್ಕ ಕೇಂದ್ರ ಅತ್ಯಗತ್ಯವಾಗಿದ್ದು, ಉದ್ದೇಶಿತ ಜಾಗದಲ್ಲೇ ಕಟ್ಟಡ ನಿರ್ಮಿಸಲು ಸೂಚನೆ ಕೊಡಿ ಎಂದು ಶಾಸಕರನ್ನು ಆಗ್ರಹಿಸಿದರು.

ಮಾಶಾಸನಕ್ಕೆ ಲಂಚ ಕೇಳ್ತಾರೆ: ತಾಲೂಕು ಪಂಚಾ ಯಿತಿ ಸದಸ್ಯ ಜಗದೀಶ್‌ ಮಾತನಾಡಿ, ವಿಧವಾ ವೇತನ, ವೃದ್ಧಾಪ್ಯ ವೇತನ ಮಂಜೂರು ಮಾಡಲು ಅಧಿಕಾರಿಗಳು ಲಂಚ ಕೇಳುತ್ತಿರುವ ದೂರುಗಳಿವೆ. ಜನರು ಪ್ರತಿಭಟಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಭೆಯ ಗಮನ ಸೆಳೆದರು.

ಶಾಸಕರು ಮತ್ತು ಜಿಪಂ ಸದಸ್ಯರು ಚುನಾಯಿತರಾದ ನಂತರ ಕಷ್ಟ ಸುಖ ಆಲಿಸಲು ಬರುತ್ತಿಲ್ಲ ಎಂದು ಜನರು ದೂರುಗಳು ಇವೆ, ಇದಕ್ಕೆ ಅವಕಾಶ ಕೊಡಬೇಡಿ ಎಂದರು.

ಅಹವಾಲು ಸ್ವೀಕಾರ: ಸಭೆಯಲ್ಲಿ ಕೆರೆ ಪುನ ಶ್ಚೇ ತನ, ಅರೇ ಹಳ್ಳಿ – ಕೂಟಗಲ್‌ ಸೇತುವೆ ಕೆಲಸ, ಕೋತಿ ಮತ್ತು ಚಿರತೆಗಳ ಹಾವಳಿ, ವಿಕಲಚೇತನ, ವೃದ್ಧಾಪ್ಯ, ವಿಧವಾ ವೇತನ, ಹಕ್ಕು ಪತ್ರ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಜನತೆ ಅಹವಾಲು ಸಲ್ಲಿಸಿದರು.

ತಾಪಂ ಉಪಾಧ್ಯಕ್ಷೆ ರಮಾಮಣಿ, ಸದಸ್ಯ ಡಿ.ಎಂ.ಮಹದೇವಯ್ಯ, ಕೂಟಗಲ್‌ ಗ್ರಾಪಂ ಅಧ್ಯಕ್ಷೆ ಪದ್ಮಾಕ್ಷಿ ರವಿ, ಶ್ಯಾನು ಭೋಗನ ಹಳ್ಳಿ ಗ್ರಾಪಂ ಅಧ್ಯಕ್ಷ ನಂಜಂಡುಯ್ಯ, ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷ ಎಂ.ಆರ್‌.ರ ಮೇಶ್‌, ದೊಡ್ಡಗಂಗ ವಾಡಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಜಾಲ ಮಂಗಲ ಗ್ರಾಪಂ ಅಧ್ಯಕ್ಷೆ ಸುಮತಿ, ಅಕ್ಕೂರು ಗ್ರಾಪಂ ಅಧ್ಯಕ್ಷೆ ಮಂಜುಶ್ರೀ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next