Advertisement

Ramanagara: ಕರ್ತವ್ಯ ನಿರತ ಪೊಲೀಸರೇ ಫುಲ್ ಟೈಟ್; ಸಾರ್ವಜನಿಕರೊಂದಿಗೆ ಕಿರಿಕ್

12:41 PM Jun 23, 2023 | Team Udayavani |

ರಾಮನಗರ: ಕರ್ತವ್ಯ ನಿರತ ಪೊಲೀಸರೇ ಫುಲ್ ಟೈಟಾಗಿ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿಕೊಂಡ ಪ್ರಸಂಗ ಜಿಲ್ಲೆಯಲ್ಲಿ ನಡೆದಿದೆ. ಕರ್ತವ್ಯದ ವೇಳೆಯೇ ಮಾಗಡಿ ಪೊಲೀಸರು ಮೋಜುಮಸ್ತಿ ಮಾಡಿದ್ದಾರೆ.

Advertisement

ಮಾಗಡಿ ಎಎಸ್ಐ ಮಂಜುನಾಥ್, ಕುದೂರು ಕ್ರೈಂ ಪಿಸಿ ನಾರಾಯಣ ಸೇರಿ ಮತ್ತಿಬ್ಬರು ಪೊಲೀಸರ ಮೋಜುಮಸ್ತಿ ಮಾಡಿದ್ದಾರೆ.

ಮಾಗಡಿ ಠಾಣೆಯಿಂದ ಕೈದಿಯನ್ನ ರಾಮನಗರ ಜಿಲ್ಲಾ ಕಾರಗೃಹಕ್ಕೆ ಬಿಡಲು ಬಂದಿದ್ದ ಖಾಕಿ ಪಡೆಯು ಖೈದಿಯನ್ನು ಬಿಟ್ಟು ನಂತರ ಮಾಗಡಿಗೆ ತೆರಳುವಾಗ ಪುಲ್ ಟೈಟ್ ಆಗಿದ್ದಾರೆ.  ಮೈ ಮೇಲೆ ಪ್ರಜ್ಞೆ ಇಲ್ಲದ ಪೊಲೀಸರು, ಯೂನಿಫಾರ್ಮ್ ಕಳಚಿಟ್ಟಿದ್ದಾರೆ. ಈ ವೇಳೆ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.

ಇದನ್ನೂ ಓದಿ:2024ರ ಐಪಿಎಲ್ ನಲ್ಲಿ ಧೋನಿ ಆಡುತ್ತಾರಾ?: ಮಹತ್ವದ ಮಾಹಿತಿ ನೀಡಿದ ಸಿಎಸ್ ಕೆ ಸಿಇಒ

ಈ ಕಾರಿನಲ್ಲಿದ್ದವರು ಟೈಟ್ ಆಗಿ ತೂರಾಡುತ್ತಿದ್ದದ್ದ ಪೊಲೀಸರ ವೀಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next