ರಾಮನಗರ: ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್‌ರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ನರಸಿಂಹ ಮೂರ್ತಿ (ಬಸವನಪುರ ಮೂರ್ತಿ) ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖೀತ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ತಾಲೂಕಿನ ಬಸವನಪುರ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.7ರಂದುಬಿಡದಿಯ ಜೆವಿಐಟಿ ಕಾಲೇಜಿನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ತಾವು ಭಾಗವಹಿಸಿದ್ದಾಗಿ, ಸಭೆಯ ನಂತರ ಇಕ್ಬಾಲ್‌ಹುಸೇನ್ ಅವರು ತಮ್ಮನ್ನು ಕೊಲೆಮಾಡಿಸುವ ಬೆದರಿಕೆ ಒಡ್ಡಿದರೆಂದು,ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು, ಎಷ್ಟೇ ಕೋಟಿ ಖರ್ಚಾದರೂ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ.
ಅಲ್ಲದೆ, ಅಲ್ಲೇ ಇದ್ದ ಯುವಕ ರಿಗೆ ನನ್ನ ಮೇಲೆ ಹಲ್ಲೆ ಮಾಡಲು ಸೂಚಿಸಿದರು ಎಂದು ನರಸಿಂಹಮೂರ್ತಿದೂರಿದರು. ಯಾವ ವಿಚಾರಕ್ಕೆ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2018ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸಹ ಆಕಾಂಕ್ಷಿಯಾಗಿದ್ದೆ. ಆದರೆ, ವರಿಷ್ಠರು ಇಕ್ಬಾಲ್ ಹುಸೇನ್ ಅವರಿಗೆ ಟಿಕೆಟ್ ಕೊಟ್ಟಿದ್ದರು. ಮುಂದಿನವಿಧಾನಸಭಾ ಚುನಾವಣೆಯಲ್ಲೂ ತಾವು ಮತ್ತೂಮ್ಮೆ ಆಕಾಂಕ್ಷಿ ಆಗಿದ್ದು, ಬಹುಶಃ ಇದನ್ನುಸಹಿಸಲಾಗದೆ ಈ ರೀತಿ ಪ್ರಾಣ ಬೆದರಿಕೆ ಒಡ್ಡಿರಬಹುದು ಎಂದು ಹೇಳಿದರು.
ಹಿಂದೊಮ್ಮೆ ನೀನು ಸೇರಿದಂತೆ ಜಿಲ್ಲೆಯ ಪ್ರಮುಖ ಕಾಂಗ್ರೆಸ್ಸಿಗರ ಸಿ.ಡಿ.ಗಳು ತಮ್ಮ ಬಳಿ ಇವೆ ಎಂದುಇಕ್ಬಾಲ್ ಹುಸೇನ್ ಹೇಳಿದ್ದರು. ಅದೇನು ಸಿಡಿ ಇದೆಯೋಗೊತ್ತಿಲ್ಲ. ಹಾಗೊಮ್ಮೆ ಇದ್ದರೆ ಬಿಡು ಗಡೆ ಮಾಡಲಿ ಎಂದುನರಸಿಂಹ ಮೂರ್ತಿ ಸವಾಲು ಎಸೆದರು. ತಮಗೆ ಕೊಲೆಬೆದರಿಕೆ ಇರುವುದರಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಎಸ್ಪಿಗೆ ಮನವಿ ಮಾಡುವುದಾಗಿ ತಿಳಿಸಿದರು.