Advertisement
ಏ.8ರ ಗುರುವಾರ ಜಿಲ್ಲಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸುವರು. ಏ.15 ನಾಮಪತ್ರಗಳ ಸಲ್ಲಿಕೆಗೆ ಕೊನೆ ದಿನ. ಏ.16 ನಾಮಪತ್ರಗಳ ಪರಿಶೀಲನೆ. ಏ.19 ಉದೇದುವಾರಿಕೆಗಳನ್ನು ಹಿಂಪಡೆಯುವ ದಿನ. ಮತದಾನದ ಅವಶ್ಯಕತೆ ಇದ್ದಲ್ಲಿ ಏ.27ರ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನದ ಅವಶ್ಯಕತೆ ಬಿದ್ದಲ್ಲಿ ಏ.29ರ ಗುರುವಾರ ನಡೆಯುತ್ತದೆ.ಮತಗಳ ಎಣಿಕೆ ಏ.30ರಂದು ಬೆಳಗ್ಗೆ 8 ಗಂಟೆಯಿಂದಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಅದೇ ದಿನ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಆಯೋಗದ ಆದೇಶ ತಿಳಿಸಿದೆ.
Related Articles
Advertisement
ವಿಳಂಬ ಏಕಾಗಿತ್ತು? :
2018ರಲ್ಲೇ ಮೀಸಲಾತಿ ನ್ಯಾಯಾಲಯಕ್ಕೆ ಮೊರೆ 2018ರಲ್ಲಿಯೇ ರಾಜ್ಯಸರ್ಕಾರ ಪ್ರಕಟಿಸಿದ್ದ ರಾಮನಗರನಗರಸಭೆಯ ವಾರ್ಡುಗಳ ಮೀಸಲಾತಿ ಮತ್ತು ವಾರ್ಡುಗಳ ಮರುವಿಂಗಡನೆ ಪ್ರಶ್ನಿಸಿ ಕೆಲವರು ಹೈಕೋಟ್ ಮೊರೆ ಹೋಗಿದ್ದರು. ನ್ಯಾಯಾಲಯಮೀಸಲಾತಿ ಪರಿಷ್ಕರಿಸಿ ನಿಗದಿ ಪಡಿಸುವಂತೆನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿ ಆದೇಶ ಹೊರಡಿಸಿತ್ತು. ಆದರೆ ಇಲಾಖೆ ಈ ವಿಚಾರದಲ್ಲಿ ಪರಿಷ್ಕರಣೆ ಮಾಡಲಿಲ್ಲ. 2021ರ ಜನವರಿ 21ರಂದು ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕಾರಜಿಲ್ಲಾಧಿಕಾರಿಗಳು ಮೀಸಲು ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಿದ್ದರು. ಸುಮಾರು 40ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಡೀಸಿಯವರು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
2 ವರ್ಷಗಳ ನಂತರ ಗರಿಗೆದರಿದ ರಾಜಕೀಯ ಚಟುವಟಿಕೆ :
ಬರೋಬ್ಬರಿ 2 ವರ್ಷಗಳ ನಂತರ ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಎರಡು ವರ್ಷಗಳ ಕಾಲ ನಡೆದ ಅಧಿಕಾರಿಗಳ ದರ್ಬಾರು ಏಪ್ರಿಲ್‌ತಿಂಗಳಲ್ಲಿ ಅಂತ್ಯವಾಗಲಿದೆ. ಏ.27ರಂದು ಚುನಾವಣೆ ನಿಗದಿಪಡಿಸಿ ಚುನಾವಣಾ ಆಯೋಗ ಆದೇಶಹೊರೆಡಿಸಿದೆ. ಬೆನ್ನಲ್ಲೆ ಎರಡೂ ನಗರಗಳಲ್ಲಿ ರಾಜಕೀಯ ಗರಿಗೆದರಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ತಮ್ಮ ಗಾಡ್ ಫಾದರ್‌ಗಳ ಬೆನ್ನು ಹತ್ತಿದ್ದಾರೆ. ತೆರೆಮರೆಯಲ್ಲಿ ನಡೆಯುತ್ತಿದ್ದ ಈ ಚಟುವಟಿಕೆ ಸೋಮವಾರ ಇನ್ನಷ್ಟು ಬಿರುಸುಗೊಂಡಿದೆ.