Advertisement

ಅಕ್ಟೋಬರ್‌ಗೆ ರಾಮಮಂದಿರ ಅಡಿಪಾಯ ಕೆಲಸ ಪೂರ್ಣ

12:18 AM Jun 04, 2021 | Team Udayavani |

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 1.2 ಲಕ್ಷ ಚದರ ಮೀಟರ್‌ ಪ್ರದೇಶದಲ್ಲಿ ಅಕ್ಟೋಬರ್‌ ಅಂತ್ಯದ ಒಳಗಾಗಿ 50 ಹಂತಗಳಷ್ಟು ಅಡಿಪಾಯ ಹಾಕುವ ಕಾರ್ಯ ಪೂರ್ತಿಗೊಳ್ಳಲಿದೆ.

Advertisement

ಪ್ರತೀ ಹಂತವೂ 400 ಅಡಿ ಉದ್ದ, 300 ಅಡಿ ಅಗಲ, 12 ಇಂಚು ದಪ್ಪ ಹೊಂದಲಿದೆ. ಕಾಮಗಾರಿಯ ಬಗ್ಗೆ ಮಾತನಾಡಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌, “ರೋಲರ್‌ ಕಾಂಪಾಕ್ಟೆಡ್‌ ಕಾಂಕ್ರೀಟ್‌ ಮೂಲಕ ಅಡಿಪಾಯ ನಿರ್ಮಿಸಲಾಗುತ್ತಿದೆ. ದೇಶದ ಪ್ರಸಿದ್ಧ ಲ್ಯಾಬ್‌ಗಳಿಂದ ಪ್ರಮಾಣೀಕೃತಗೊಂಡ ಮಿಶ್ರಣವನ್ನೇ ಕಾಮಗಾರಿಗೆ ಬಳಕೆ ಮಾಡಲಾಗುತ್ತಿದೆ. ಪ್ರತಿಯೊಂದು ಹಂತದ ಅಡಿಪಾಯ ನಿರ್ಮಾಣಕ್ಕೆ 5 ದಿನಗಳು ಬೇಕಾಗುತ್ತವೆ’ ಎಂದು ಹೇಳಿದ್ದಾರೆ.

ಒಂದು ಕ್ಯೂಬಿಕ್‌ ಮೀಟರ್‌ ಪ್ರದೇಶದಲ್ಲಿ 2,400 ಕೆ.ಜಿ. ನಿರ್ಮಾಣ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಈ ಮಿಶ್ರಣದಲ್ಲಿ 60 ಕೆ.ಜಿ. ಸಿಮೆಂಟ್‌, 20 ಎಂಎಂ ಗಾತ್ರದ 769 ಮತ್ತು  10 ಎಂಎಂ ಗಾತ್ರದ 512 ಕೆ.ಜಿ. ಕಲ್ಲು, 854 ಕೆ.ಜಿ. ಕಲ್ಲಿನ ಪುಡಿ, 90 ಕೆ.ಜಿ. ಕಲ್ಲಿದ್ದಲು ಬೂದಿಯನ್ನು ಬಳಕೆ ಮಾಡಲಾ ಗುತ್ತದೆ. 12 ಗಂಟೆಯ ಎರಡು ಪಾಳಿಗಳಲ್ಲಿ ಕೆಲಸಗಳು ನಡೆಯುತ್ತಿವೆ  ಎಂದು ರಾಯ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next