ಬಾಗಲಕೋಟೆ: ನಮ್ಮದು ದೊಡ್ಡ ರಾಜಕೀಯ ಪಕ್ಷ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇವೆ. ಅವೆಲ್ಲ ಸರಿ ಹೋಗುತ್ತವೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಈಗ ಸಣ್ಣ ಸಮಸ್ಯೆ ಇರಬಹುದು.ಅದು ಶೀಘ್ರವೇ ಸರಿಯಾಗುತ್ತದೆ. ಮುಂಬರುವ 2023ರವಿಧಾನಸಭೆ ಚುನಾವಣೆಗೆ ಪಕ್ಷ ಬಲವರ್ಧನೆ ಮಾಡುವುದುನಮ್ಮ ಮುಂದಿರುವ ಗುರಿ. ಅದಕ್ಕಾಗಿ ಮಾ. 3ರಿಂದರಾಜ್ಯದ 100 ಕ್ಷೇತ್ರಗಳಲ್ಲಿ ಪ್ರವಾಸ ನಡೆಯಲಿದೆ ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನವನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂಗ್ರೆಸ್ ಕಚೇರಿ ಕಟ್ಟಡ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಮುಂಬರುವ ವಿಧಾನಸಭೆಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಚುನಾವಣೆಗೆ ಮುಂಚೆ ಸಿಎಂ ಅಭ್ಯರ್ಥಿ ಘೋಷಣೆಮಾಡುವ ಪರಂಪರೆ ನಮ್ಮಲ್ಲಿ ಇಲ್ಲ. ಗೆದ್ದ ಬಳಿಕವೇ ಸಿಎಂಅಭ್ಯರ್ಥಿ ಯಾರೆಂಬುದು ಶಾಸಕಾಂಗ ಪಕ್ಷದ ಸಭೆ ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮಲ್ಲೂ2ರಿಂದ 3 ಜನ ಸಿಎಂ ಸ್ಥಾನದ ಆಕಾಂಕ್ಷಿಗಳಿದ್ದಾರೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಸೋತಿರುವ 100 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಪಕ್ಷ ಬಲವರ್ಧನೆ ಮಾಡುತ್ತೇವೆ. ಇದಕ್ಕಾಗಿರಾಜ್ಯಾದ್ಯಂತ ಕೆಪಿಸಿಸಿಯಿಂದ ಪಕ್ಷ ಸಂಘಟನೆಗಾಗಿ ಪ್ರವಾಸ ಆರಂಭಗೊಳ್ಳಲಿದೆ ಎಂದರು.
ಒಂದು ಪುಟ್ಟ ಮನೆಯಲ್ಲೂ ಸಣ್ಣ-ಪುಟ್ಟ ಸಮಸ್ಯೆ ಇರುತ್ತವೆ. ಹಾಗೆಯೇ ದೊಡ್ಡ ಪಕ್ಷವಾದ ನಮ್ಮಲ್ಲೂ ಕೆಲಸ ಭಿನ್ನಾಭಿಪ್ರಾಯ ಇವೆ. ಮೈಸೂರು ಮೇಯರ್ ಆಯ್ಕೆವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ ಮಧ್ಯೆ ಸಣ್ಣ ಸಮಸ್ಯೆ ಆಗಿರಬಹುದು. ಅದು ಶೀಘ್ರ ಬಗೆಹರಿಯಲಿದೆ. ಜೆಡಿಎಸ್-ಬಿಜೆಪಿಯವರ ಬೀದಿ ಜಗಳ ನೋಡಿದರೆ, ನಮ್ಮ ಪಕ್ಷದ ಭಿನ್ನಾಭಿಪ್ರಾಯ ಅಷ್ಟು ದೊಡ್ಡದೇನಲ್ಲ ಎಂದು ಹೇಳಿದರು.
2013ರಿಂದ 2018ರಲ್ಲಿ ಅಧಿಕಾರ ನಡೆಸಿದ ನಮ್ಮ ಸರ್ಕಾರ, ಚುನಾವಣೆಗೆ ಮುನ್ನ ನೀಡಿದ್ದ 195ಭರವಸೆಗಳನ್ನೂ ಈಡೇರಿಸಿದೆ. ಇದು ದೇಶದಲ್ಲೇ ಮೊದಲಸರ್ಕಾರ. ಪ್ರಸ್ತುತ ಬಿಜೆಪಿ ಸರ್ಕಾರದ ಆಡಳಿತದಿಂದ ಜನರೋಸಿ ಹೋಗಿದ್ದಾರೆ. ದೇಶ, ರಾಜ್ಯದ ಸಮಗ್ರ ಅಭಿವೃದ್ಧಿಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಬಿಜೆಪಿಯವರಿಗೆ ಆಡಳಿತಮಾಡಲು ಬರಲ್ಲ. ವಿರೋಧ ಮಾಡಲು ಮಾತ್ರ ಬರುತ್ತದೆ ಎಂದು ಟೀಟಿಸಿದರು.
ರಾಜ್ಯದಲ್ಲಿ ವಿವಿಧ ಸಮಾಜದವರು ಮೀಸಲಾತಿಗೆಹೋರಾಟ ನಡೆಸಿದ್ದಾರೆ. ಈ ಕುರಿತು ಪಕ್ಷದ ವೇದಿಕೆಯಲ್ಲಿಚರ್ಚೆಯೂ ಆಗಿದೆ. ಮೀಸಲಾತಿ ಕುರಿತು ನಾನು ವೈಯಕ್ತಿಕವಾಗಿ ಏನನ್ನೂ ಸದ್ಯಕ್ಕೆ ಹೇಳುವುದಿಲ್ಲ. ಈಕುರಿತು ಪಕ್ಷದ ನಿರ್ಧಾರವೇ ರಾಜ್ಯಾಧ್ಯಕ್ಷರೇ ತಿಳಿಸುತ್ತಾರೆ ಎಂದರು.
ಮಾಜಿ ಸಚಿವರಾದ ಶಿವಶಂಕರ ರಡ್ಡಿ, ಎಚ್.ವೈ. ಮೇಟಿ, ಮಾಜಿ ಶಾಸಕರಾದ ಜೆ.ಟಿ. ಪಾಟೀಲ,ಎಸ್.ಜಿ. ನಂಜಯ್ಯನಮಠ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ನಾಗರಾಜ ಹದ್ಲಿ ಉಪಸ್ಥಿತರಿದ್ದರು.