Advertisement

ನಾರಾಯಣಗುರುಗಳ ಟ್ಯಾಬ್ಲೋ ನಿರಾಕರಣೆ ಸರಿಪಡಿಸಲು ಹಿಜಾಬ್‌ ಹುಟ್ಟಿಕೊಂಡಿದೆ: ರೆಡ್ಡಿ

09:08 PM Feb 05, 2022 | Team Udayavani |

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಕೇರಳದ ನಾರಾಯಣ ಗುರುಗಳ ಟ್ಯಾಬ್ಲೋವನ್ನು ನಿರಾಕರಿಸಿದ ಪರಿಣಾಮ, ಕರಾವಳಿ ಭಾಗದಲ್ಲಿ ಮತ್ತು ಕೇರಳದಲ್ಲಿ ಕೇಂದ್ರ ಸರ್ಕಾರಕ್ಕೆ ಜನರು ವಿರೋಧ ವ್ಯಕ್ತಪಡಿಸಿದರು. ಅದನ್ನು ಸರಿಪಡಿಸಿಕೊಳ್ಳಲು ಈಗ ಹಿಜಾಬ್‌ ವಿವಾದ ತಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ವಿಶ್ವ ಹಿಂದೂ ಪರಿಷತ್‌ನ ಹಿಡನ್‌ ಅಜೆಂಡಾಗಳು ಸಾಮಾನ್ಯ ಜನರಿಗೆ ತಿಳಿಯಲ್ಲ. ಏಕೆಂದರೆ, ಹಿಜಾಬ್‌ ಅನ್ನು ವಿದ್ಯಾರ್ಥಿನಿಯರು ಮೊದಲು ಕೂಡ ಧರಿಸುತ್ತಿದ್ದರು ಈಗಲೂ ಧರಿಸುತ್ತಿದ್ದಾರೆ. ಆದರೆ, ನಾರಾಯಣಗುರುಗಳ ಅಭಿಮಾನಿಗಳ ಮನಸನ್ನು ಬೇರೆ ವರ್ಗಾಯಿಸಲು ಹಿಜಾಬ್‌ ವಿವಾದವನ್ನು ತಂದಿದ್ದಾರೆ.

ಈ ಘಟನೆಯನ್ನು ಜನರು ಅರ್ಥ ಬಹಳ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next