Advertisement

ಕೋವಿಡ್ 19 ಜಾಗೃತಿ: ಮಂಗಳೂರು ರಾಮಕೃಷ್ಣ ಮಠದಿಂದ Contact-10 ಚಾಲೆಂಜ್ ; ನಾವೇನು ಮಾಡಬೇಕು?

09:44 AM Mar 31, 2020 | Hari Prasad |

ಮಂಗಳೂರು: ಕೋವಿಡ್ 19 ಮಾರಕ ವೈರಸ್ ದೇಶವ್ಯಾಪಿಯಾಗುತ್ತಿರುವ ಈ ಸಂದರ್ಭದಲ್ಲಿ ಇದರ ನಿಯಂತ್ರಣ ನಮ್ಮ ಕೈಯಲ್ಲಿ ಮಾತ್ರ ಸಾಧ್ಯ. ಇದಕ್ಕಾಗಿಯೇ ಕೇಂದ್ರ ಸರಕಾರ 21 ದಿನಗಳ ಸಂಪೂರ್ಣ ಲಾಕ್ ಡೌನ್ ಸ್ಥಿತಿಯನ್ನು ಘೋಷಿಸಿದೆ. ಆದರೂ ಜನರ ಓಡಾಟ ಸಂಪೂರ್ಣವಾಗಿ ನಿಂತಿಲ್ಲ. ‘ಮನೆಯಲ್ಲಿಯೇ ಇರಿ’ ಎಂದು ಪ್ರಧಾನಿ ಕರೆ ಕೊಟ್ಟರೂ ಜನರು ಮನೆಗಳನ್ನು ಬಿಟ್ಟು ಹೊರಬರುವುದು ಸಂಪೂರ್ಣವಾಗಿ ನಿಂತಿಲ್ಲ.

Advertisement

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಕೆಲವೊಂದು ಸರಳ ನಿಯಮಗಳನ್ನು ನಾವು ಅಳವಡಿಸಿಕೊಂಡದ್ದೇ ಆದಲ್ಲಿ ಈ ಕೋವಿಡ್ 19 ವೈರಸ್ ಮಹಾಮಾರಿಯನ್ನು ಶೀಘ್ರವಾಗಿ ಹೊಡೆದೋಡಿಸಬಹುದು.

ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿರುವ ರಾಮಕೃಷ್ಣ ಮಿಷನ್ ವಿನೂತನ ಅಭಿಯಾನ ಒಂದನ್ನು ಪ್ರಾರಂಭಿಸಿದೆ. ‘ಕಾಂಟ್ಯಾಕ್ಟ್ 10’ ಎಂಬ ಹೆಸರಿನ ಈ ಅಭಿಯಾನದಲ್ಲಿ ನಾವು ನಮಗೆ ಪರಿಚಯವಿರುವ 10 ಜನರಿಗೆ ಕರೆಮಾಡಿ ಅವರಿಗೆ ಈ ಕೆಳಗಿನ ನಾಲ್ಕು ಅಂಶಗಳ ಕುರಿತಾಗಿ ಮನವರಿಕೆ ಮಾಡಿಕೊಡುವುದು.

1) ಕಡ್ಡಾಯವಾಗಿ ತಮ್ಮ ಮನೆಯಲ್ಲಿಯೇ ಇರುವಂತೆ ತಿಳಿಸಿ

2)ಯಾವುದೇ ಕಾರಣಕ್ಕೂ ಎಷ್ಟೇ ಆತ್ಮಿಯರಾದವರನ್ನೂ ಮನೆಯೊಳಗೆ ಸೇರಿಸಬೇಡಿ ಎಂದು ಬೇಡಿಕೊಳ್ಳಿ

Advertisement

3) ಅಗತ್ಯವಸ್ತು ಗಳಾದ ದಿನಸಿ, ಕಾಯಿಪಲ್ಯ ಹಣ್ಣು , ಮೆಡಿಸಿನ್ ಇತ್ಯಾದಿಗಳನ್ನುಗಳನ್ನು ಹತ್ತು ದಿನಕ್ಕೊಮ್ಮೆ ತರಲು ತಿಳಿಸಿ.

4) ಅಕಸ್ಮಾತ್ ಹೊರಹೋಗಿ ಬಂದರೆ ತಂದಂತಹ ಸಾಮಾನುಗಳನ್ನು ಅಗತ್ಯಗನುಸಾರ ಶುಚಿಮಾಡಿ. ಮತ್ತು ಹೊರಹೋಗಿ ಬಂದ ತತಕ್ಷಣ ಮನೆಯಲ್ಲಿನ ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ಸ್ಪರ್ಶಿಸದೇ ನೇರವಾಗಿ ಸ್ನಾನದ ಕೋಣೆಗೆ ತೆರಳಿ ಸ್ನಾನಮಾಡುವಂತೆ ತಿಳಿಸಿ.

ಇಷ್ಟು ವಿಷಯಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಈ ಅಂಶಗಳನ್ನು ಅವರು ಮತ್ತೆ ಹತ್ತು ಜನರಿಗೆ ಕರೆ ಮಾಡಿ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಬೇಕು. ಇದೇ ರೀತಿ ನಾವು ಪ್ರತೀ ದಿನ ಹತ್ತು ಜನರಿಗೆ ಕರೆ ಮಾಡಿ ಈ ಜಾಗೃತಿ ಸಂದೇಶಗಳನ್ನು ಹರಡುವುದೇ ಈ ‘ಕಾಂಟ್ಯಾಕ್ಟ್ 10’ ಪಂಥಾಹ್ವಾನದ (ಚಾಲೆಂಜ್) ಉದ್ದೇಶ.

ಈ ಸವಾಲನ್ನು ಸ್ವೀಕರಿಸಿದವರು ತಾವು ಕರೆ ಮಾಡಿದ ಹತ್ತ ಜನರ ಹೆಸರನ್ನು (ಗಮನಿಸಿ, ಅವರ ಮೊಬೈಲ್ ಸಂಖ್ಯೆಯನ್ನು ಅಲ್ಲ) 93530  29103 ಈ ಸಂಖ್ಯೆಗೆ ವಾಟ್ಸ್ಯಾಪ್ ಮಾಡುವಂತೆ ಮತ್ತು ಈ ಮೂಲಕ ರಾಮಕೃಷ್ಣ ಮಠಕ್ಕೆ ‘ಕರೆ ದೇಣಿಗೆ’ಯನ್ನು ಸಲ್ಲಿಸುವಂತೆ ಸ್ವಾಮೀಜಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಮೊಬೈಲ್ ಸಂಖ್ಯೆಯನ್ನು ಖುದ್ದು ಸ್ವಾಮಿ ಏಕಗಮ್ಯಾನಂದ ಅವರೇ ನೋಡಿಕೊಳ್ಳುತ್ತಿರುವುದಾಗಿ ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಅವರು ತಿಳಿಸಿದ್ದಾರೆ.

ಹಾಗಾದರೆ ಇನ್ನೇಕೆ ತಡ, ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಏನನ್ನು ಮಾಡುವುದು ಎಂದು ಯೋಚಿಸುತ್ತಿರುವವರು ಈಗಲೇ ತಮ್ಮ ಆತ್ಮೀಯ ಹತ್ತು ಜನರಿಗೆ ಕರೆ ಮಾಡಿ ಈ ಜಾಗೃತಿ ಸಂದೇಶವನ್ನು ಅವರಿಗೆಲ್ಲಾ ತಿಳಿಸೋಣ ಹಾಗೂ ಈ ಮೂಲಕ ಕೋವಿಡ್ 19 ವೈರಸ್ ಮಹಾಮಾರಿಯಾಗಿ ಹಬ್ಬುವುದನ್ನು ತಡೆಯುವಲ್ಲಿ ನಮ್ಮ ಪಾಲಿನ ಕೊಡುಗೆಯನ್ನು ಸಲ್ಲಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next