ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ.ರಾಮಕೃಷ್ಣ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಆಶ್ರಯ ಕಾಲೋನಿ ನಿವಾಸಿಗಳ ಜತೆ ಮಾತುಕತೆ ನಡೆಸಿ, ಸೌಕರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು ಆಶ್ರಯ ಕಾಲೋನಿಯಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ಸಮಸ್ಯೆಯಿದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ತೊಂದರೆ ತಿಳಿಸಿದ್ದಾರೆ. ಈಗಾಗಲೇ ಹೆಚ್‌ಕೆಆರ್‌ಡಿಬಿ ಅನುದಾನದಲ್ಲಿ ಸುಮಾರು 8 ಲಕ್ಷ ರೂ. ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ನೀಡಲು ತಾಕೀತು ಮಾಡಿದ್ದೇವೆ. ಜೆಸ್ಕಾಂ
ಅಧಿಕಾರಿಗಳಿಗೆ ಕರೆ ಮಾಡಿ, ವಿದ್ಯುತ್ ಕಂಬಗಳನ್ನು ಶೀಘ್ರವೇ ಹಾಕಲು ತಿಳಿಸಿದ್ದೇವೆ. ಅದರಂತೆ ವಿದ್ಯುತ್ ಕಂಬಗಳನ್ನು ಒಂದು ಸ್ಥಳದಲ್ಲಿ ಹಾಕಿದ್ದಾರೆ. ವಾರದಲ್ಲಿ ವಿದ್ಯುತ್ ಪೂರೈಕೆಯಾಗಲಿದೆ ಎಂದು ಹೇಳಿದರು. ಇಲ್ಲಿನ ಜನರ ಬಹುದಿನದ ಬೇಡಿಕೆಯಾದ ಕುಡಿಯುವ ನೀರು, ರಸ್ತೆ ನಿರ್ಮಾಣಕ್ಕೆ ಸದ್ಯದಲ್ಲೇ ಪ್ರಸ್ತಾವನೆ ಕಳಿಸಿ, ಉತ್ತಮ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ್, ವೈಜನಾಥ ತಡಕಲ್, ವಿಜಯಕುಮಾರ ರಾಮಕೃಷ್ಣ, ಸಾಹೇಬಗೌಡ ಬೋಗುಂಡಿ, ಹಾಷಮ್ ಖಾನ, ಮೃತ್ಯುಂಜಯ ಹಿರೇಮಠ, ಶರಣಬಸಪ್ಪ ಪಗಲಾಪುರ,
ಬಾಬಾ, ಅನ್ವರ್ ಪಾಷಾ, ನಾಗೇಂದ್ರ ನಾಟೇಕಾರ್, ಸೂರ್ಯಕಾಂತ ಕೋಬಾಳ, ರಾಜು ಮೇಸ್ತ್ರಿ, ನಿಂಗಣ್ಣ ದೇವಕರ್, ನಿಂಗಣ್ಣ ಸಂಗಾವಿಕರ್, ಡಾ| ಅಹ್ಮದ್ ಪಟೇಲ್, ವೆಂಕಟೇಶ ಕುಸಾಳೆ, ಡಾ| ಆಂಜನೇಯ, ಇನಾಯತ್‌ಖಾನ ಜಮಾದಾರ, ಮಹ್ಮದ್ ರಶೀದ್, ಮ.ಜಲೀಲ ಇತರರು ಇದ್ದರು.
Advertisement