Advertisement

ರಾಮಜನ್ಮಭೂಮಿ: 1976ರಲ್ಲಿ ಹೇಳಿದ್ದೇ 2003ರಲ್ಲಿ ಸಾಕ್ಷಿ ಸಹಿತ ದೃಢ

03:52 AM Feb 28, 2021 | Team Udayavani |

ಭಾರತೀಯ ಪುರಾತಣ್ತೀ ಸರ್ವೇಕ್ಷಣ (ಎಎಸ್‌ಐ) ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಲ್ಲಿಕೋಟೆಯ ಕೆ.ಕೆ. ಮುಹಮ್ಮದ್‌ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಉತ್ಖನನ ಮಾಡಿದ ಸದಸ್ಯರಲ್ಲಿ ಒಬ್ಬರು. ಹಿಂದೂ, ಇಸ್ಲಾಂ, ಕ್ರೈಸ್ತ, ಬೌದ್ಧ ಧರ್ಮಕ್ಕೆ ಸಂಬಂಧಿಸಿದ ನೂರಾರು ಐತಿಹಾಸಿಕ ಸ್ಥಳಗಳನ್ನು ಉತ್ಖನನ/ಸಂರಕ್ಷಣೆ ಮಾಡಿದ ಕೀರ್ತಿ ಇವರಿಗೆ ಇದೆ. ಫೆ. 28ರಂದು ಬೆಳಗ್ಗೆ ಉಡುಪಿ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಇತಿಹಾಸ ತಜ್ಞ ಡಾ| ಪಾದೂರು ಗುರುರಾಜ ಭಟ್‌ ಸ್ಮಾರಕ ಪ್ರಶಸ್ತಿ ಸ್ವೀಕರಿಸುವ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದ ಸಾರಾಂಶ.

Advertisement

– ನೀವು ಎದುರಿಸಿದ ಸವಾಲುಗಳಲ್ಲಿ ಉಲ್ಲೇಖೀಸಬಹುದಾದದ್ದು ಯಾವುದು?
ಗ್ವಾಲಿಯರ್‌ ಸಮೀಪದ ಬತ್ತೇಶ್ವರ ದಲ್ಲಿ 9, 11ನೇ ಶತಮಾನಕ್ಕೆ ಸೇರಿದ 200ಕ್ಕೂ ಹೆಚ್ಚು ದೇವಸ್ಥಾನಗಳನ್ನು ನವೀಕರಿಸುವಾಗ ವೀರಪ್ಪನ್‌ನಂತಹ ಡಕಾಯಿತರಿಂದ ಎದುರಿಸಿದ ಸವಾಲು ಗಂಭೀರವಾದುದು. ಅವರ ಮನ ವೊಲಿಸಿದ ಬಳಿಕ ನನ್ನ ಸೇವೆ ಕಂಡು ಸಹಕರಿಸಿದರು. ನಾನೊಬ್ಬ ಸಾಮಾನ್ಯ ಮನುಷ್ಯ. ಆದ್ದರಿಂದಲೇ ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ್ದೇನೆ. ದಿಲ್ಲಿಯಲ್ಲಿರುವಾಗ ಇಂತಹ ಒಂದು ಶಾಲೆಯನ್ನು ತೆರೆದೆ. ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಭಾರತಕ್ಕೆ ಬಂದಾಗ ಈ ಶಾಲೆಗೆ ಭೇಟಿ ನೀಡಿದರು. “ಸರ್ವೇ ಭವಂತು ಸುಖೀನಃ’ ಎಂಬ ಉಪನಿಷತ್‌ ವಾಕ್ಯ, “ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್‌’ (ಪರೋಪ ಕಾರವೇ ಪುಣ್ಯ, ಪರಪೀಡನೆಯೇ ಪಾಪ) ವೇದವ್ಯಾಸರ ಉಕ್ತಿಯಂತೆ ನಡೆದುಕೊಂಡಿದ್ದೇನೆ.

– ಅಯೋಧ್ಯೆ ಎರಡನೆಯ ಬಾರಿ ಉತVನನದಲ್ಲಿ ಪಾಲ್ಗೊಂಡಿರಲಿಲ್ಲವೇಕೆ?
1976-77ರಲ್ಲಿ ಎಎಸ್‌ಐ ಮಹಾ ನಿರ್ದೇಶಕರಾಗಿದ್ದ ಬಿ.ಬಿ.ಲಾಲ್‌ ನೇತೃತ್ವ ದಲ್ಲಿ ನಡೆದ ಮೊದಲ ಉತ್ಖನನದಲ್ಲಿ ಪಾಲ್ಗೊಂಡಿದ್ದೆ. ನಾನೊಬ್ಬನೇ ಆ ತಂಡ ದಲ್ಲಿದ್ದ ಮುಸ್ಲಿಂ. ಆಗ ಕೇಂದ್ರದಲ್ಲಿ ಸಂಸ್ಕೃತಿ ಸಚಿವರಾಗಿ ಸಯ್ಯದ್‌ ನುರುಲ್‌ ಹಸನ್‌ ಇದ್ದರು. ಅಲ್ಲಿ ದೇವಸ್ಥಾನ ಇದ್ದ ಲಕ್ಷಣಗಳ ಕುರಿತು ಅಭಿಪ್ರಾಯ ತಿಳಿಸಿದ್ದೆ. ಎಡಪಂಥೀಯ ಇತಿಹಾಸಕಾರರು ಅಲ್ಲಗಳೆದರು. 2003ರಲ್ಲಿ ಲಕ್ನೋ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಉತ್ಖನನ ನಡೆಯಿತು. ನಾನು ಏನನ್ನು ಹೇಳಿದ್ದೆನೋ ಅದು ಬಳಿಕ ಮತ್ತಷ್ಟು ಸಾಕ್ಷ್ಯಾಧಾರಗಳೊಂದಿಗೆ (50 ಸ್ತಂಭಗಳು, ಮಕರಪ್ರಣಾಲಿ ಇತ್ಯಾದಿ) ಸಾಬೀತಾಯಿತು. ಸರ್ವೋಚ್ಚ ನ್ಯಾಯಾಲಯವೂ ಒಪ್ಪಿಗೆ ಸೂಚಿಸಿತು. ಎರಡನೆಯ ಬಾರಿಗೆ ಹೊಸ ಮುಖಗಳಿರಲಿ ಎಂಬ ಕಾರಣಕ್ಕೆ ನಾನು ಪಾಲ್ಗೊಂಡಿರಲಿಲ್ಲ. ಎಎಸ್‌ಐನ ಎರಡನೇ ತಂಡದ ಎಲ್ಲ ಸದಸ್ಯರೂ ನಮ್ಮ ವರದಿಯನ್ನು ಅಂಗೀಕರಿಸಿದ್ದರು.

– ಬೇರಾವ ಪುರಾವೆ ಇದೆ?
ಐನೆ-ಅಕ್ಬರಿ ಸಂಪುಟ 3ರಲ್ಲಿ ಅಬು ಫ‌ಜಲ್‌ (1502), ಜಹಾಂಗೀರ್‌ ಕಾಲದಲ್ಲಿ ವಿದೇಶೀ ಯಾತ್ರಿಕ ವಿಲಿ ಯಮ್‌ ಫಿಲ್ಚ್ (1608-1611), ಜಹಾಂಗೀರ್‌- ಶಾ ಜಹಾನ್‌ ಅವಧಿಯಲ್ಲಿ (1631) ಡಚ್‌ ಭೂಗೋಳ ತಜ್ಞ ಜಾನ್‌ ಡೇಲೀಟ್‌, ಥಾಮಸ್‌ ಹರ್ಬರ್ಟ್‌ (1606-82) ಇಲ್ಲಿ ಜನರು ಪೂಜಿಸುತ್ತಿದ್ದುದನ್ನು ದಾಖಲಿಸಿದ್ದಾರೆ. 1766ರಲ್ಲಿ ಮೊದಲ ಬಾರಿ ಜೋಸೆಫ್ ಟೈಸನ್‌ ಟೇಲರ್‌ ದೇವಸ್ಥಾನ ಕೆಡವಿದ ಬಗ್ಗೆ ಉಲ್ಲೇಖೀಸುತ್ತಾನೆ. ದೇವಸ್ಥಾನ ಕೆಡವಿ ಮಸೀದಿ ನಿರ್ಮಿಸಿದ ಬಳಿಕವೂ ಅಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದುದು ಈ ಎಲ್ಲ ವಿದೇಶೀ ಯಾತ್ರಿಕರ ಅಭಿಪ್ರಾಯದಂತೆ ಸಾಬೀತಾಗುತ್ತದೆ.

– ಮಥುರಾ, ಕಾಶೀ ಕ್ಷೇತ್ರದ ಬಗೆಗೆ?
ಅಯೋಧ್ಯೆ ವಿಷಯದಲ್ಲಿಯೂ ಮುಸ್ಲಿಮರು ಸ್ವಯಂ ಇಚ್ಛೆಯಿಂದ ಕೊಡಬಹುದು ಎಂದು ಹೇಳಿದ್ದೆ. ಇದಕ್ಕೂ ಅದೇ ಮಾತು. ಭಾರತ ಸರಕಾರದ ಧಾರ್ಮಿಕ ಪೂಜಾ ಕಾಯಿದೆ-1991ರ ಪ್ರಕಾರ ಅಯೋಧ್ಯೆ ಹೊರತುಪಡಿಸಿ ಉಳಿದೆಲ್ಲವೂ 1947ರಲ್ಲಿದ್ದ ಸ್ಥಿತಿಯಲ್ಲಿಯೇ ಮುಂದುವರಿಯಬೇಕೆಂದಿದೆ.

Advertisement

– ನಾನಾ ಮತಧರ್ಮಗಳ ಸ್ಮಾರಕಗಳ ಶೋಧನೆ, ಸಂರಕ್ಷಣೆ ಮಾಡಿರುವುದು ಹೇಗೆ ಸಾಧ್ಯವಾಯಿತು?
ದೇವರು ನನಗೆ ಅಂತಹ ಅವಕಾಶ ಒದಗಿಸಿದ. ಫ‌ತೇಪುರ್‌ ಸಿಕ್ರಿಯಲ್ಲಿ ಅಕºರ್‌ ನಿರ್ಮಿಸಿದ ಇಬಾದತ್‌ ಖಾನ (ಬಹುಧರ್ಮೀಯರ ಒಕ್ಕೂಟ- ದಿನ್‌ ಇ ಇಲಾಹಿ) ಸಂಕೀರ್ಣದಲ್ಲಿ ಸ್ಪೇನ್‌, ಇಟಲಿ ಕ್ರೈಸ್ತ ಮಿಶನರಿಗಳ ಕಲಾಕೃತಿಗಳು, ಚಾಪೆಲ್‌ ಉತ್ಖನನ, ಗೋವಾದಲ್ಲಿ ಚರ್ಚ್‌ಗಳ ಉತ್ಖನನ, ಸಂರಕ್ಷಣೆ, ಗೋವಾದ ಪೋಂಡಾದಲ್ಲಿ ಮಸೀದಿ ಸಂರಕ್ಷಣೆ, ಬಿಹಾರದಲ್ಲಿ ಕೇಸರಿಯ ಸ್ತೂಪ, ರಾಜಗಿರಿ ಸ್ತೂಪದ ಉತ್ಖನನ, ನಲಂದ, ವಿಕ್ರಮ ಶಿಲಾದ ಸಂರಕ್ಷಣೆ, ವಿವಿಧೆಡೆ ನೂರಕ್ಕೂ ಹೆಚ್ಚು ದೇವಸ್ಥಾನಗಳ ಶೋಧನೆ, ಸಂರಕ್ಷಣೆ ಮಾಡಿದ್ದೆ.

ಪ್ರಶಸ್ತಿ ಗಳಿಸಿದ “ನಾನೆಂಬ ಭಾರತೀಯ’ ಕೃತಿ
ಕೆ. ಕೆ. ಮುಹಮ್ಮದ್‌ ಮಲಯಾಳದಲ್ಲಿ ಬರೆದ ಆತ್ಮಕಥನ “ಜ್ಯಾನೆನ್ನ ಭಾರತೀಯನ್‌’ ಕೃತಿಯನ್ನು ಕನ್ನಡಕ್ಕೆ (“ನಾನೆಂಬ ಭಾರತೀಯ’) ಅನುವಾದಿಸಿದವರು ಕಾಸರ ಗೋಡಿನ ಲೇಖಕ, ನಿವೃತ್ತ ಬ್ಯಾಂಕ್‌ ಅಧಿಕಾರಿ ಬಿ. ನರಸಿಂಗ ರಾವ್‌. ಈ ಪುಸ್ತಕಕ್ಕೆ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2019ನೇ ಸಾಲಿನ ಪುಸ್ತಕ ಬಹು ಮಾನ ನೀಡಿದೆ. ಇದೇ ಸಾಲಿನಲ್ಲಿ ಡಕಾಯಿತರ ಮನವೊಲಿಸಿ ಪ್ರಾಚೀನ ದೇವಸ್ಥಾನಗಳನ್ನು ಪುನಃಸ್ಥಾಪಿಸಿದ್ದಕ್ಕೆ ಮುಹಮ್ಮದರಿಗೆ ಪದ್ಮಶ್ರೀ ಪ್ರಶಸ್ತಿ ಬಂತು. ಮುಹ ಮ್ಮದ್‌ ಮತ್ತು ನರಸಿಂಗ ರಾವ್‌ ಪುಸ್ತಕದಿಂದ ಬರುವ ಆದಾಯ ವನ್ನು ನಿರ್ಗತಿಕರ ಸೇವೆ ಮಾಡುವ ಸಂಸ್ಥೆಗೆ ಕೊಡಬೇಕೆಂದು ನಿರ್ಧರಿಸಿ ಮಂಜೇಶ್ವರ ಬಳಿಯ ದೈಗೋಳಿ ಸಾಯಿನಿಕೇತನ ಸೇವಾಶ್ರಮಕ್ಕೆ 1 ಲ.ರೂ. ಮೊತ್ತವನ್ನು ಈಗಾಗಲೇ ನೀಡಿದ್ದಾರೆ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next