ರಾಮದುರ್ಗ: ಹಳೆಯ ವಿದ್ಯಾರ್ಥಿಗಳು ಬಿಡುವು ಮಾಡಿಕೊಂಡು ಶಿಕ್ಷಣ ನೀಡಿದ ಗುರುಗಳನ್ನು ಸ್ಮರಿಸಿಕೊಂಡು ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ಎಸ್.ಪಿ. ಶೇಷಪ್ಪನವರ ಮೆಚ್ಚುಗೆ
ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯದ ಹೋಟೆಲ್ ತಿರುಮಲಾ ಸಭಾಂಗಣದಲ್ಲಿ ಪಟ್ಟಣದ ಸಿ.ಡಿ. ಹಲ್ಯಾಳ ಹೈಸ್ಕೂಲ್‌ನ 2003-05 ರ ಅವಧಿ ಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಮ್ಮಿಕೊಂಡ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದ ಎಲ್ಲಗೆಳೆಯರು ಕೂಡಿಕೊಂಡು ಇಂದು ಸ್ನೇಹ ಹಂಚಿಕೊಳ್ಳುತ್ತಿರುವುದು ಬಹಳ ಸಂತಸ. ತಾವುಗಳು ಯಾವುದೇ ಸ್ಥಾನ ದಲ್ಲಿದ್ದರೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ 2003-05ರ ಅವಧಿಯ ಹಾಗೂ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಸತ್ಕರಿಸಿ ಗೌರವಿಸಲಾಯಿತು. ಸಿ.ಡಿ. ಹಲ್ಯಾಳ ಹೈಸ್ಕೂಲ್ ಮುಖ್ಯೋಪಾಧ್ಯಾಯ ಎ.ಬಿ. ಸತ್ತರಗಿ ಮಾತನಾಡಿ, ಹೈಸ್ಕೂಲಿನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಮಾಡಿರುವ ಉತ್ತಮ ಸಾಧನೆಯಿಂದ ಶಾಲೆಯ ಹೆಸರು ಜಿಲ್ಲಾ ಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾರೆ. ಮುಂದೆ ಇದೇ ರೀತಿ ವಿದ್ಯಾರ್ಥಿಗಳು ಶಾಲೆಯ ಕೀರ್ತಿಯನ್ನು ಹೆಚ್ಚಿಸುವತ್ತ ಸಾಗಲಿ ಎಂದು ಹೇಳಿದರು.
ಎಸ್.ಡಿ. ಅರವಟಗಿ, ಎಸ್.ಆರ್. ಪುರಶಾಕಾರಿ, ವಿ.ಬಿ. ಜಂಬಗಿ, ಎಸ್. ಎಸ್.ಜೋಗಳೆ, ಎಂ.ವೈ. ಪೂಜಾರ, ಎಚ್.ಪಿ. ಇಂಗಳೆ, ಬಿ.ಡಿ. ಪೂಜಾರ, ಎಂ ಮಾಗನೂರ, ಎಸ್.ಎಣ. ಸೊರಟಿ, ವಿದ್ಯಾರ್ಥಿಗಳಾದ ವಾಣಿ ದೇವರ್ಗಿಕರ, ಕೀರ್ತಿ ಮುರುಡಿ, ಸಾದೀಕ ಹುದ್ದಾರ, ಅನಿಲ್ ರಾಮದುರ್ಗ, ಶಿವು ಮಾಳಿ, ದಿವ್ಯಾ ತುಂಬಳಗಡ್ಡಿ, ಶ್ರೀದೇವಿ ಜಲಗೇರಿ, ಆನಂದ ಯಾದವಾಡ, ಉಮೇಶ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.