Advertisement

ಜಿಲ್ಲಾದ್ಯಂತ ಸರಳವಾಗಿ ರಂಜಾನ್‌ ಆಚರಣೆ

07:28 AM May 26, 2020 | Lakshmi GovindaRaj |

ರಾಮನಗರ: ಜಿಲ್ಲಾದ್ಯಂತ ಸೋಮವಾರ ಮುಸ್ಲಿಮರು ಶ್ರದ್ಧೆ, ಭಕ್ತಿ, ಸಡಗರದಿಂದ ರಂಜಾನ್‌ ಹಬ್ಬವನ್ನು ತಮ್ಮ ಮನೆಗಳಲ್ಲೇ ಆಚರಿಸಿಕೊಂಡರು. ಕೊರೊನಾ ಸೋಂಕು ಕಾರಣ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರಲಿಲ್ಲ. ಮನುಷ್ಯನ ಮನಸ್ಸಿನಲ್ಲಿ ಹುದುಗಿರುವ ದ್ವೇಷ  ಭಾವನೆ ಕಡಿಮೆ ಮಾಡಿ, ಪ್ರೀತಿ ಹುಟ್ಟಿಸುವ ಪವಿತ್ರ ರಂಜಾನ್‌ ಹಬ್ಬವನ್ನು ಜಿಲ್ಲೆಯ 4 ತಾಲೂಕು ಕೇಂದ್ರ ಗಳು, ಗ್ರಾಮೀಣ ಭಾಗಗಳಲ್ಲಿ ಆಚರಿಸಿದರಾದರೂ, ಅದೆಲ್ಲ ಮನೆ ಮಟ್ಟಿಗೆ ಇತ್ತು.

Advertisement

ರೇಷ್ಮೆ ನಗರಿ ರಾಮನಗರದಲ್ಲಿ ನಗರದ ಮಿನಿ ವಿಧಾನಸೌಧದ ಎದುರಿನಲ್ಲಿರುವ ಈದ್ಗಾ ಮೈದಾನದಲ್ಲಿ ಪ್ರತಿ ವರ್ಷ ಸಾಮೂಹಿಕ ಪ್ರಾರ್ಥನೆ ಅವಕಾಶವಿರುತ್ತಿತ್ತು. ಆದರೆ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ  ಕಾರಣ  ಸಾಮೂಹಿಕ ಪ್ರಾರ್ಥನೆಗೆ ಜಿಲ್ಲಾಡಳಿತ ಅವ ಕಾಶ ಮಾಡಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರವಿತ್ತು. ಆದರೂ ಕೆಲವರು ಈದ್ಗಾ ಮೈದಾನದತ್ತ ಪ್ರಾರ್ಥನೆಗೆಂದು ಬಂದರು. ಅಲ್ಲಿದ್ದ ಪೊಲೀಸರು ಅವರ ನ್ನು ಹಿಂದಕ್ಕೆ  ಕಳುಹಿಸಿದರು.

ನಗರದ ಪ್ರಮುಖ ರಸ್ತೆಗಳ ಮೂಲಕ ಈದ್ಗಾ ಮೈದಾನ ತಲುಪುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿ ಕೇಡ್‌ ಇರಿಸಿದ್ದ ಪೊಲೀಸರು ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ ಎಂಬುದರ ಬಗ್ಗೆ ತಿಳಿವಳಿಕೆ ನೀಡಿ ವಾಪಸು ಕಳುಹಿಸಿತ್ತದ್ದದ್ದು ಕಂಡು  ಬಂತು. ರಸ್ತೆಯಲ್ಲಿ ಓಡಾಡುತ್ತಿದ್ದ ಮುಸಲ್ಮಾನರು ಪರಸ್ಪರ ಆಲಿಂಗಿಸಿ ಕೊಂಡು ಹಬ್ಬದ ಶುಭಾಶಯ ಕೋರಿದ್ದು ಕಂಡು ಬಂತು. ಎಲ್ಲ ಧರ್ಮಗಳಲ್ಲೂ ಉಪವಾಸಕ್ಕೆ ಪ್ರಾಮುಖ್ಯತೆ ಎಲ್ಲ ಧರ್ಮದಲ್ಲಿಯೂ ಉಪವಾಸಕ್ಕೆ ಪ್ರಾಮುಖ್ಯತೆಯಿದೆ. ದೇಹಾರೋಗ್ಯ ಉತ್ತಮ ಪಡಿಸಿಕೊಳ್ಳಲು  ಹಾಗೂ ಸರಳ ಜೀವನಕ್ಕೆ ಉಪವಾಸ ಪ್ರೋತ್ಸಾಹ ನೀಡುತ್ತದೆ.

ಮಾನವನ ಅಂತಃ ಶುದಿಟಛಿಗೂ ಉಪವಾಸ ವ್ರತಗಳು ಉತ್ತಮ ಮಾರ್ಗ ಎಂಬುದು ಹಿಂದೂ, ಮುಸ್ಲಿಮ ಸೇರಿದಂತೆ ಎಲ್ಲ  ಧರ್ಮ ಗುರುಗಳ ಉಪದೇಶ. ಪಾಪ ನಿವಾರಣೆಗೂ ಇದು ಸುಲಭ ಮಾರ್ಗ. ಹೀಗಾಗಿ ರಂಜಾನ್‌ ಮಾಸದಲ್ಲಿ ಬಹುತೇಕ ಮುಸ್ಲಿಮರು ಬಡವ ಬಲ್ಲಿದ ಎನ್ನದೆ ಉಪವಾಸ  ಆಚರಿಸುತ್ತಾರೆ. ತಿಂಗಳ ಕಾಲ ಶ್ರದಾಟಛಿ ಭಕ್ತಿಯ ಉಪವಾಸ ನಡೆಸಿದ ನಂತರ ಮುಸಲ್ಮಾನರು ರಂಜಾನ್‌ ಹಬ್ಬದಂದು ಉಪವಾಸ ಅಂತ್ಯಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next