Advertisement

ರಾಮಚಂದ್ರ ಸ್ವಾಮಿ ಬ್ರಹ್ಮರಥೋತ್ಸವ

06:42 AM Apr 11, 2019 | Team Udayavani |

ಕೆಂಗೇರಿ: ಇಲ್ಲಿನ ರಾಮೋಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀರಾಮಚಂದ್ರ ಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ವೈಭವದಿಂದ ನಡೆಯಿತು.

Advertisement

ಮಧ್ವ ನಾರಾಯಣಾಶ್ರಮದ ಶ್ರೀ ವಿಶ್ವಭೂಷಣ ತೀರ್ಥ ಸ್ವಾಮಿಜಿ, ಮಧ್ಯಾಹ್ನ 1.35ಕ್ಕೆ ಸರಿಯಾಗಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಶಾಸಕ ಎಸ್‌.ಟಿ.ಸೋಮಶೇಖರ್‌, ರಾಮೋಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ವೇಣುಗೋಪಾಲ್‌, ಪಂಚಾಯಿತಿ ಅಧ್ಯಕ್ಷೆ ರೂಪಾ ವೇಣುಗೋಪಾಲ್‌, ಉಪಾಧ್ಯಕ್ಷ ಮಹೇಶ್‌, ಮಾಜಿ ಉಪಾಧ್ಯಕ್ಷ ಪ್ರಭು, ಚೇತನ್‌ಗೌಡ, ರಾಕೇಶ್‌ಗೌಡ ಮತ್ತಿತರರು ಭಾಗವಹಿಸಿದ್ದರು.

ಇದೇ ವೇಳೆ ನಡೆದ ಜಾನಪದ ಜಾತ್ರೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ನಂದಿ ಧ್ವಜ, ಚಿಟಾಣಿ ಬೊಂಬೆ, ನಾದಸ್ವರ ಕಲಾವಿದರ ತಂಡಗಳು ಗಮನಸೆಳೇದರು. ದೇವಾಲಯದಿಂದ ಆರಂಭವಾದ ರಥೋತ್ಸವ, ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿ ಬಸ್‌ ನಿಲ್ದಾಣದ ಸಮೀಪ ಕೊನೆಗೊಂಡಿತು.

ಬ್ರಹ್ಮರಥೋತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ಗಜೇಂದ್ರಮೋಕ್ಷ, ಕಲ್ಯಾಣೋತ್ಸವ, ಶೇಷವಾಹನೋತ್ಸವ, ವಸಂತೋತ್ಸವ, ಉಯ್ನಾಲೆ ಉತ್ಸವ, ಅಶ್ವಾರೋಹಣೋತ್ಸವ, ಗರುಡೋತ್ಸವ, ಹನುಮಂತೋತ್ಸವ ಮತ್ತು ಶಯನೋತ್ಸವಗಳು ನಡೆದವು. ವಿ.ವೇಣುಗೋಪಾಲ್‌ ನೇತೃತ್ವದಲ್ಲಿ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next