Advertisement
ಪೇಜಾವರ ಮಠದಲ್ಲಿ ಮಂಗಳವಾರ ನಾಗರಿಕರ ದೇಣಿಗೆ ಸ್ವೀಕರಿಸಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ದಕ್ಷಿಣ ಭಾರತವಲ್ಲದೆ ಇಡೀ ದೇಶದಲ್ಲಿಯೇ ಸಿರಿವಂತರು, ನಾಡಿನ ಪ್ರಥಮ ಪ್ರಜೆಗಳಿಂದ ಹಿಡಿದು, ಜನಸಾಮಾನ್ಯರ ವರೆಗೆ, ಹಿಂದೂಗಳಲ್ಲದೆ ಇತರ ಮತೀಯ ರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.
ಜಾತಿ ಮೀಸಲಾತಿ ಸರಿಯಲ್ಲ ಜಾತಿ ಮೀಸಲಾತಿ ಕುರಿತು ಕೇಳಿದ ಪ್ರಶ್ನೆಗೆ, “ಇದು ಮೂಲದಲ್ಲಿಯೇ ತಪ್ಪಾಗಿದೆ. ಜಾತಿ ಆಧಾರದಲ್ಲಿ ಮೀಸಲಾತಿ ಎಂದು ಯಾವಾಗ ಆರಂಭಿಸಿದರೋ ಅಲ್ಲಿಯೇ ತಪ್ಪಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಘೋಷಣೆ ಮಾಡಿದ್ದರೆ ಹೀಗೆ ಆಗಲು ಸಾಧ್ಯವೇ ಇರಲಿಲ್ಲ. ಸೌಲಭ್ಯ ಯಾರಿಗೆ ಬೇಡ? ಎಲ್ಲರಿಗೂ ಬೇಕು. ಮೀಸಲಾತಿ ಆದ ಬಳಿಕ ಒಳ ಮೀಸಲಾತಿ ಬೇಕೆಂಬ ಮತ್ತು ಅವರಿಗೆ ಬೇಡ, ಇವರಿಗೆ ಬೇಕು ಎಂಬಿತ್ಯಾದಿ ಮಾತುಗಳು ಆರಂಭವಾ ಗುತ್ತದೆ. ಈಗ ನಾವು ಸಾಕಷ್ಟು ಮುಂದೆ ಹೋಗಿಯಾಗಿದೆ. ಇದನ್ನು ಸರಿಪಡಿಸು ವುದು ಹೇಗೆ’ ಎಂದರು. ರಾಮೋತ್ಸವ ಸಂಭ್ರಮ
ಮುಂಬಯಿ, ತಮಿಳುನಾಡು, ಕೇರಳ, ಕರ್ನಾಟಕದ ವಿವಿಧೆಡೆ ಸಂಚಾರ ಮಾಡಿದ್ದೇವೆ. ಇದರಲ್ಲಿ ಮುಖ್ಯವಾಗಿ ಬಸ್ತಿ ಪ್ರದೇಶಗಳಲ್ಲಿ ಪಾದಯಾತ್ರೆ ಮತ್ತು ಸಂತ ಸಮಾವೇಶಗಳಲ್ಲಿ ಪಾಲ್ಗೊಂಡಿರುವುದಾಗಿದೆ. ವಸತಿ ಪ್ರದೇಶಗಳಲ್ಲಿ ರಾಮೋತ್ಸವ ರೀತಿಯಲ್ಲಿ ಜನರು ಸಂಭ್ರಮಿಸುತ್ತಿದ್ದಾರೆ ಎಂದರು.
Related Articles
Advertisement
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಆಂಧ್ರ ಪ್ರದೇಶದಲ್ಲಿ ಧ್ವಂಸಗೊಂಡ ದೇವಸ್ಥಾನ, ರಥವನ್ನು ಪುನರ್ನಿಮಿಸುತ್ತಿದ್ದೇವೆ ಎಂದು ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಸಚಿವರು ನಮ್ಮಲ್ಲಿ ಬಂದು ತಿಳಿಸಿದರೆಂದರು. ರೈತರ ಹೆಸರಿನಲ್ಲಿ ಸಂವಿಧಾನಕ್ಕೆ ಅಪಚಾರವಾದರೆ ಸಲ್ಲದು. ಸರಕಾರ ಮಾತುಕತೆಗೆ ಸಿದ್ಧ ಎಂದರೂ ಹೋಗದೆ ಇದ್ದರೆ ಏನು ಮಾಡುವುದು? ಇದು ಇದ್ದಕ್ಕಿದ್ದಂತೆ ಮಾಡಿದ ಕಾನೂನು ಅಲ್ಲ ಎಂದು ಸರಕಾರವೇ ಹೇಳುತ್ತಿದೆಯಲ್ಲ ಎಂದರು.