Advertisement

Rama Mandir ಉದ್ಘಾಟನೆ: ಆಡ್ವಾಣಿ, ಜೋಶಿಗೆ ವಿಎಚ್‌ಪಿ ಆಹ್ವಾನ

09:04 AM Dec 20, 2023 | Team Udayavani |

ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯ ಕರಾದ ಎಲ್‌.ಕೆ.ಆಡ್ವಾಣಿ ಹಾಗೂ ಮುರಳಿ ಮನೋಹರ್‌ ಜೋಶಿ ಅವರನ್ನು ವಿಶ್ವ ಹಿಂದೂ ಪರಿಷತ್‌ ಮಂಗಳವಾರ ಭೇಟಿಯಾಗಿ ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಿದೆ.

Advertisement

ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದು, ರಾಮ ಮಂದಿರ ಚಳವಳಿಯ ನೇತಾರರಾದ ಅಡ್ವಾಣಿ ಹಾಗೂ ಜೋಶಿ ಇಬ್ಬರನ್ನೂ ಭೇಟಿಯಾಗಿ, ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದ್ದೇವೆ. ಇಬ್ಬರೂ ಹಿರಿ ಯರು ಬರುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಮಂದಿರ ಚಳವಳಿ ಕುರಿತಂತೆ ಅವರೊಂದಿಗೆ ಚರ್ಚೆ ನಡೆಸಿದೆವು ಎಂದು ತಿಳಿಸಿದ್ದಾರೆ.

ಅಡ್ವಾಣಿ ಹಾಗೂ ಜೋಷಿಯವರು ಹಿರಿಯರಾಗಿರುವ ಹಾಗೂ ಅನಾರೋಗ್ಯವಿರುವ ಕಾರಣ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರದಂತೆ ಮನವಿ ಮಾಡಲಾಗಿದ್ದು, ಅದಕ್ಕೆ ಅವರು ಒಪ್ಪಿದ್ದಾರೆ ಎಂದು ಮಂದಿರ ಟ್ರಸ್ಟ್‌ನ ಚಂಪತ್‌ ರಾಯ್‌ ನೀಡಿದ್ದ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರು ಈ ಇಬ್ಬರೂ ನಾಯಕರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಅವರ ಆರೋಗ್ಯ ದೃಷ್ಟಿಯಿಂದ ಸಮಾರಂಭಕ್ಕೆ ಆಗಮಿಸದಂತೆ ವಿನಂತಿ ಮಾಡಿದ್ದೇವೆ ಎಂದು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next