ಮಂಗಳೂರು: ಶ್ರೀರಾಮ ಮಾನವತೆಯ ಅವ್ಯಕ್ತ ಪ್ರತಿರೂಪ. ಜೀವನದ ಪ್ರತಿ ಹಂತದಲ್ಲಿಯೂ ಶ್ರೀ ರಾಮನ ಆದರ್ಶ ಪಾಲನೆ ಮಾಡಿ
ದರೆ ಬದುಕು ಹಸನಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ನಾ. ಸೀತಾರಾಮ ಹೇಳಿದರು.
ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃ ಮಂಡಳಿ ದುರ್ಗಾ ವಾಹಿನಿ ಮತ್ತು ಶ್ರೀ ರಾಮೋತ್ಸವ ಸಮಿತಿಯ ವತಿಯಿಂದ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಎ. 6ರ ವರೆಗೆ ನಡೆಯುವ ಶ್ರೀ ರಾಮೋತ್ಸವದ ಎರಡನೇ ದಿನವಾದ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಹುಟ್ಟಿನಿಂದ ಜೀವನದ ಕೊನೆಯ ಹಂತದವರೆಗೂ ಶ್ರೀರಾಮನ ಆದರ್ಶ ಗಳು ಅನುಕರಣೀಯ. ಶ್ರೀ ರಾಮನ ಹೆಸರೇ ಬದುಕಿಗೆ ಚೈತನ್ಯ ನೀಡು ವಂತದ್ದು ಎಂದವರು ಅಭಿಪ್ರಾಯಪಟ್ಟರು.
ಶ್ರೀ ಧಾಮ ಮಾಣಿಲದ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಯಮಿ ಬದ್ರಿನಾಥ್ ಕಾಮತ್ ಉದ್ಘಾಟಿಸಿದರು. ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಉದ್ಯಮಿ ನಾಗೇಶ್ ಕಲ್ಲಡ್ಕ, ಬಿಜೆಪಿ ನಗರ ದಕ್ಷಿಣ ಹಿಂದುಳಿದ ಮೋರ್ಚಾ ಅಧ್ಯಕ್ಷ ಸದಾನಂದ ನಾವೂರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಮ್, ತುಳು ಚಲನಚಿತ್ರ ನಿರ್ಮಾಪಕ ಕಿಶೋರ್ ಡಿ. ಶೆಟ್ಟಿ, ಬಂಟರ ಸಂಘ ಗುರುಪುರ ವಲಯ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ರಾಜೇಶ್ ಕೊಟ್ಟಾರಿ, ಉದ್ಯಮಿ ದಿನೇಶ್ ಕೆ. ಉಪಸ್ಥಿತರಿದ್ದರು.