Advertisement

ಅಯೋಧ್ಯೆಯಲ್ಲಿ ರಾಮಮಂದಿರ ಆಗಲೇಬೇಕು: ವಿಶ್ವವಲ್ಲಭ ತೀರ್ಥಶ್ರೀ

06:50 AM Nov 12, 2018 | Team Udayavani |

ಮಂಡ್ಯ/ ಮದ್ದೂರು: ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಇಲ್ಲ ಎಂದ ಮೇಲೆ ಹಿಂದೂಸ್ಥಾನದಲ್ಲಿ ಇನ್ನು ಯಾವ ಮಂದಿರ ಕಟ್ಟುವುದು ಎಂದು ಉಡುಪಿ ಸೋಂದಾ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.

Advertisement

ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲೇಬೇಕು. ಇದು ಪ್ರತಿ ಯೊಬ್ಬ ಹಿಂದೂಗಳ ಆಶಯವೂ ಆಗಿದೆ. ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ನ್ಯಾಯಾಲಯ ಅನಗತ್ಯ ವಿಳಂಬ ಮಾಡು ತ್ತಿದೆ ಎನ್ನುವುದು ಹಿಂದೂ ಪರ ಸಂಘಟನೆಗಳ ವಾದವಾಗಿದೆ. ಹಾಗಾಗಿ, ಮಂದಿರ ನಿರ್ಮಾಣ ವಿಷಯವನ್ನು ಹೀಗೆಯೇ ಬಿಟ್ಟರೆ ಆಗದು. ಎಲ್ಲ ಹಿಂದೂಗಳನ್ನು ಒಗ್ಗೂಡಿಸಿದರೆ ಮಾತ್ರ ಮಂದಿರ ನಿರ್ಮಾಣ ಕೆಲಸ ಆಗಲು ಸಾಧ್ಯ. ಎಲ್ಲಾ ಹಿಂದೂ ಗಳು ಒಕ್ಕೊರಲಿನಿಂದ ಹೋಗಿ ಮನವಿ ಮಾಡುವಂಥ ಕೆಲಸ ಆಗಬೇಕು ಎಂದರು. ಈ ನಿಟ್ಟಿ ನಲ್ಲಿ ಹಿಂದೂ ಪರ ಸಂಘಟನೆಗಳು ಕೆಲಸ ಮಾಡುವಂತೆ ಸಲಹೆ ನೀಡಿದರು.

ಸಮ್ಮಿಶ್ರ ಸರ್ಕಾರ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ರುವ 81 ದೇವಸ್ಥಾನಗಳ ಹುಂಡಿ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಸುತ್ತೋಲೆ ಹೊರಡಿಸಿದೆ. ನಾವು ಅದರ ಬಗ್ಗೆ ಮಾತನಾಡಿದರೆ ನಮಗೆ ವಿರೋಧಿಗಳ ಪಟ್ಟ ಕಟ್ಟುತ್ತಾರೆ. ಈ ಬಗ್ಗೆ ಮಾತನಾಡದಿರುವುದೇ ಸೂಕ್ತ.
– ವಿಶ್ವವಲ್ಲಭ ತೀರ್ಥ ಸ್ವಾಮೀಜಿ,ಉಡುಪಿ ಸೋಂದಾ ವಾದಿರಾಜ ಮಠ.

Advertisement

Udayavani is now on Telegram. Click here to join our channel and stay updated with the latest news.

Next