Advertisement

Ram Setu 1 ರೈಲು ಬೋಗಿಯಷ್ಟು ಅಗಲ: ಇಸ್ರೋ ಮ್ಯಾಪ್‌ನಲ್ಲಿ ಸ್ಪಷ್ಟ

11:30 PM Jul 09, 2024 | Team Udayavani |

ಹೊಸದಿಲ್ಲಿ: ಸಮುದ್ರದಲ್ಲಿ ಮುಳುಗಡೆಯಾಗಿರುವ ರಾಮಸೇತುವಿನ ನಕ್ಷೆಯನ್ನು ಇಸ್ರೋ ಬಿಡುಗಡೆ ಮಾಡಿದೆ. ಇದು ಪ್ರಾಚೀನ ಕಾಲದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ರಸ್ತೆ ಸಂಪರ್ಕ ಕಲ್ಪಿಸುತ್ತಿತ್ತು ಎಂಬ ವಾದಕ್ಕೆ ಈಗ ಮತ್ತಷ್ಟು ಪುಷ್ಟಿ ದೊರಕಿದಂತಾಗಿದೆ.

Advertisement

ಐಸಿಇ ಸ್ಯಾಟ್‌ ಉಪಗ್ರಹದ 2018ರಿಂದ 2023ರವರೆಗಿನ ಮಾಹಿತಿಯನ್ನು ಆಧರಿಸಿ ಈ ಮ್ಯಾಪ್‌ ರಚಿಸಲಾಗಿದೆ.  ತಮಿಳುನಾಡಿನ ಧನುಷೊRàಡಿಯಿಂದ ಶ್ರೀಲಂಕಾದ ತಲೈಮನ್ನಾರ್‌ಗೆ ಈ ಸೇತುವೆ ಸಂಪರ್ಕ ಕಲ್ಪಿಸಲಿದ್ದು, 1 ರೈಲು ಬೋಗಿಯಷ್ಟು ಅಗಲವಾಗಿದೆ. ಈ ಸೇತುವೆಯ ಶೇ.99.98ರಷ್ಟು ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ಸಂಶೋಧಕ ಗಿರಿಬಾಬು ದಂಡಾಬತುಲಾ ಹೇಳಿದ್ದಾರೆ.

ಇದು ಮಾನವ ನಿರ್ಮಿತ?: ಇಡೀ ಸೇತುವೆ ಯಲ್ಲಿ 11 ಕಡೆ ಸಣ್ಣ ಸಣ್ಣ ಕಾಲುವೆಗಳಿರು ವುದನ್ನು ಈ ಸಂಶೋಧನೆ ಪತ್ತೆ ಮಾಡಿದೆ. ಈ ಕಾಲುವೆಗಳು ಪಾಕ್‌ ಜಲಸಂಧಿಯಿಂದ ಮನ್ನಾರ್‌ಖಾರಿಗೆ ನೀರು ಸುಲಭವಾಗಿ ಹರಿದುಹೋಗಲು ಸಹಾಯ ಮಾಡುತ್ತದೆ. ಹೀಗಾಗಿ ಈ ಸೇತುವೆ ಮಾನವ ನಿರ್ಮಿತವಾಗಿವೆ.  ರಾಮೇಶ್ವರಂ ನಲ್ಲಿರುವ ಶಾಸನದ ಮಾಹಿತಿಯ ಪ್ರಕಾರ 1480ರವರೆಗೆ ಈ ಸೇತುವೆ ನೀರಿನ ಮೇಲ್ಭಾಗದಲ್ಲಿ ಕಾಣುತ್ತಿತ್ತು. ಬಳಿಕ ಭಾರಿ ಪ್ರವಾಹಕ್ಕೆ ಸಿಲುಕಿ ನಾಶವಾಯಿತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next