Advertisement
ಹೌದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಹರ್ಯಾಣದ ಜನರೂ ಶುಕ್ರವಾರ ಗಣೇಶನ ಹಬ್ಬದ ಸಂಭ್ರಮದಲ್ಲಿ ತೇಲಬೇಕಿತ್ತು. ಆದರೆ, ಹಬ್ಬದ ಖುಷಿ ಒತ್ತಟ್ಟಿಗಿರಲಿ, ಇಲ್ಲಿನ ಜನ ಉಸಿರು ಬಿಡಲೂ ಭಯಬೀಳಬೇಕಾದ ಸ್ಥಿತಿ ಎದುರಿಸಬೇಕಾಯಿತು. ತೀರ್ಪು ಹೊರಬೀಳುತ್ತಿದ್ದಂತೆ ಗುರ್ಮೀತ್ ಸಿಂಗ್ ಅವರ ಲಕ್ಷಾಂತರ ಬೆಂಬಲಿಗರು ಬೀದಿಗಿಳಿದು ನಡೆಸಿದ ರಂಪ, ಹಿಂಸಾಚಾರಕ್ಕೆ ನೂರಾರು ವಾಹನಗಳು ಸುಟ್ಟು ಭಸ್ಮವಾದವು. ಬರೋಬ್ಬರಿ 30 ಮಂದಿ ಪ್ರಾಣವನ್ನೇ ಕಳೆದುಕೊಂಡರು. ಹಿಂಸಾಚಾರಕ್ಕೆ ಸನ್ನದ್ಧರಾ ಗಿಯೇ ಬಂದಿದ್ದ ಗುರ್ಮೀತ್ ಸಿಂಗ್ ಬೆಂಬಲಿಗರು ಬೀದಿ ಬೀದಿಗಳಲ್ಲಿ ಅಟ್ಟಹಾಸಗೈದರು. ತಮ್ಮನ್ನು ತಡೆಯುವವರೇ ಇಲ್ಲ ಎಂಬಂತೆ, ಹಿಂಸಾಚಾರದಲ್ಲಿ ತೊಡಗಿದರು, ಭದ್ರತಾ ಪಡೆಗಳ ಮೇಲೆ ಕಲ್ಲುಗಳನ್ನು ತೂರಿದರು, ಘರ್ಷಣೆಗಿಳಿದರು, ಪಂಚಕುಲ ದಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದರು, ಮಾಧ್ಯಮಗಳ ಒಬಿ ವ್ಯಾನ್‌ಗಳನ್ನು ಸುಟ್ಟುಹಾಕಿದರು, ಮಾಧ್ಯಮಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದರು.
Related Articles
15 ವರ್ಷಗಳ ಹಿಂದೆ ಅಂದರೆ, 2002ರಲ್ಲಿ ಡೇರಾ ಸಚ್ಚಾ ಸೌದಾ ಆಶ್ರಮದಲ್ಲಿ ನೆಲೆ ಸಿದ್ದ ಸಾಧ್ವಿಯೊಬ್ಬರು ಆಶ್ರಮದಲ್ಲಿ ತಾವು ಅನುಭವಿಸುತ್ತಿರುವ ದೌರ್ಜನ್ಯಗಳ ಕುರಿತು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಪತ್ರ ಬರೆದಿದ್ದರು. ಅದರಲ್ಲಿ ಆಶ್ರ ಮದ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್ ತಮ್ಮ ಮತ್ತು ಆಶ್ರಮದ ಇತರ ಸಾಧ್ವಿಯರ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದ್ದರು. ಒಂದು ದಿನ ತಮ್ಮನ್ನು ಗುರ್ಮೀತ್ ತಮ್ಮ ಕೋಣೆಗೆ ಕರೆದಿದ್ದು ತಾನು ಕೋಣೆಗೆ ಹೋದ ವೇಳೆ ಆತ ಬಂದೂಕು ಹಿಡಿದು ನಿಂತಿದ್ದ. ಕೋಣೆಯ ಟಿವಿ ಪರದೆ ಮೇಲೆ ಅಶ್ಲೀಲ ಚಿತ್ರ ಬಿತ್ತರ ವಾಗುತ್ತಿತ್ತು. ಅಂದು ತನ್ನ ವಿರುದ್ಧ ಅತ್ಯಾಚಾರ ನಡೆಯಿತು. ಮುಂದಿನ 3 ವರ್ಷಗಳ ಕಾಲ ಸತತವಾಗಿ ದೌಜ್ಯìನ್ಯಕ್ಕೀಡಾದೆ ಎಂದು ಬರೆದಿದ್ದರು. ನನ್ನಂತೆ ಸುಮಾರು 40 ಜನ ಈ ಹಿಂಸೆ ಅನುಭವಿಸಿದ್ದಾರೆ ಎಂದೂ ಆರೋಪಿಸಿದ್ದರು.
Advertisement
ಬಾಬಾ ಬ್ಯಾಗ್ ಹಿಡಿದ ಕಾನೂನು ಅಧಿಕಾರಿ ವಜಾಗುರ್ಮೀತ್ ಅಪರಾಧಿ ಎಂದು ಸಾಬೀತಾದ ಬಳಿ ಕವೂ ಅವರಿಗೆ ಸಾಥ್ ನೀಡಿದ ಡೆಪ್ಯೂಟಿ ಅಡ್ವೊ ಕೇಟ್ ಜನರಲ್ ಗುರುದಾಸ್ ಸಲ್ವಾರಾರನ್ನು ಹರ್ಯಾಣ ಸರಕಾರ ವಜಾ ಮಾಡಿದೆ. ಅಪರಾಧಿ ಯನ್ನು ಜೈಲಿಗೆ ಕಳುಹಿಸುವ ವೇಳೆ ಗುರ್ಮೀತ್‌ರ ಬ್ಯಾಗ್ ಅನ್ನು ಸಲ್ವಾರಾ ಅವರೇ ಹಿಡಿದುಕೊಂಡಿದ್ದ ದೃಶ್ಯ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರ, ಸಲ್ವಾರಾರನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಜತೆಗೆ, ಹಿಂಸಾಚಾರ ಹತ್ತಿಕ್ಕುವಲ್ಲಿ ವಿಫಲವಾದ ಡಿಸಿಪಿ ಅಶೋಕ್‌ರನ್ನೂ ಸಸ್ಪೆಂಡ್ ಮಾಡಲಾಗಿದೆ. ರಾಂ ರಹೀಂ ಹೇಗಿದ್ದ.. ಹೇಗಾದ ಗೊತ್ತಾ..?
ಕಲರ್ ಕಲರ್ ಡ್ರೆಸ್ಸು, ಕಣ್ಣಿಗೆ ಕೂಲಿಂಗ್ಲಾಸು, ತಲೆಗೆ ಸುತ್ತಿದ ವಸ್ತ್ರ ವಿಚಿತ್ರ ವೇಷ. ಹೀಗಿದ್ದರೆ, ಅದು ಗುರ್ಮೀತ್ ರಾಂ ರಹೀಂ. ಈ ವೇಷಗಳ ಹೊರ ತಾಗಿ ಆಶ್ರಮದಲ್ಲಿ ಐಷಾರಾಮಿ ಬೈಕುಗಳು, ಕಾರು ಗಳು, ವೈಭವೋಪೇತ ಸೌಲಭ್ಯ ಎಲ್ಲವೂ ಇವೆ. ರಾಂ ರಹೀಂ ನನ್ನು ಆತನ ಹಿಂಬಾಲಕರು, ಶಿಷ್ಯರು ಆಧ್ಯಾತ್ಮಿಕ ಗುರು, ಸಮಾಜ ಸೇವಕ, ಕ್ರೀಡಾಪುಟು, ಸಿನೆಮಾ ನಿರ್ದೇಶಕ, ನಟ, ಸಂಗೀತ ನಿರ್ದೇಶಕ ಹೀಗೆಲ್ಲ ಗುರುತಿಸುತ್ತಾರೆ. ರಾಜಸ್ಥಾನ, ಪಂಜಾಬ್, ಹರಿಯಾ ಣ ದಲ್ಲಿ ವ್ಯಾಪಕ ಸಂಖ್ಯೆಯ ಹಿಂಬಾಲಕ ರನ್ನು ಹೊಂದಿ ರುವ ಇವನಿಗೆ ಮೊನ್ನೆ ಸ್ವಾತಂತ್ರ್ಯ ದಿನಕ್ಕೆ 50 ವರ್ಷ ತುಂಬಿದೆ. ದೇವಮಾನವ ಆಗುವು ದಕ್ಕೆ ಮುನ್ನ ಆತನ ಜೀವನ ಅಚ್ಚರಿ ತರುವಂಥದ್ದು. ಭೂ ಮಾಲೀಕನ ಪುತ್ರ: ರಾಜಸ್ಥಾನದ ಗಂಗಾ ನಗರ್ ಜಿಲ್ಲೆಯ ಗರುಸರ್ ಮೋದಿಯಾ ಗ್ರಾಮ ದಲ್ಲಿ 1967 ಆ.15ರಂದು ಜನಿಸಿದ್ದ ರಾಂ ರಹೀಂ ತಂದೆ ದೊಡ್ಡ ಭೂಮಾಲಕರು. 7ನೇ ವಯಸ್ಸಿಗೆ ಆತ ದೇವರೆಡೆ ಆಕರ್ಷಿತ ನಾಗಿದ್ದ. 23ನೇ ವರ್ಷಕ್ಕೆ ಡೇರಾ ಪಂಥದ ಮುಖ್ಯಸ್ಥನಾದ. ಉದ್ಯಮವೂ ಇದೆ: ಆಧ್ಯಾತ್ಮಿಕ ಗುರು ಜೊತೆಗೆ ವಾಣಿ ಜ್ಯೋದ್ಯಮದತ್ತಲೂ ಆಕರ್ಷಿತನಾಗಿದ್ದ ಡೇರಾ ಮುಖ್ಯಸ್ಥ, “ಎಮ್‌ಎಸ್‌ಜಿ’ ಹೆಸರಿನಲ್ಲಿ ಸ್ವದೇಶಿ, ಸಾವ ಯವ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದ. ಎರಡು ವರ್ಷಗಳ ಹಿಂದೆ ಈ ಉದ್ಯಮ ಆರಂಭವಾ ಗಿದ್ದು, ಆತನ ಮಕ್ಕಳು ಇದನ್ನು ನೋಡಿಕೊಳ್ಳುತ್ತಿದ್ದಾರೆ. 4 ಮಕ್ಕಳ ತಂದೆ!: ರಾಂ ರಹೀಂ 4 ಮಕ್ಕಳ ತಂದೆ. ಹರ್ಜೀತ್ ಕೌರ್‌ಳನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದಾನೆ. ಹನಿಪ್ರೀತ್ ಎಂಬಾಕೆಯನ್ನು ಆತ ದತ್ತು ತೆಗೆದುಕೊಂಡಿದ್ದಾನೆ. ಖಟ್ಟರ್ ಸರಕಾರದ 3 ವೈಫಲ್ಯಗಳು
1. 2014ರಲ್ಲಿ ಹಿಸಾರ್‌ನಲ್ಲಿ ಸ್ವಘೋಷಿತ ದೇವಮಾನವ ರಾಮ್‌ಪಾಲ್‌ರ ಬಂಧನವಾಯಿತು. ಆಗ ನಡೆದ ಹಿಂಸಾಚಾರಕ್ಕೆ ಒಂದು ಮಗು ಹಾಗೂ ಐವರು ಮಹಿಳೆಯರು ಬಲಿಯಾದರು 2. 2016ರಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹಿಸಿ ಜಾಟ್ ಸಮುದಾಯ ನಡೆಸಿದ ಪ್ರತಿಭಟನೆ
ಹಿಂಸಾಚಾರಕ್ಕೆ ತಿರುಗಿ 30 ಜನ ಸಾವಿಗೀಡಾಗಿದ್ದರು. 3. 2017ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಧಾರ್ಮಿಕ ಗುರು ಗುರ್ಮೀತ್ ರಾಂ ರಹೀಂ ಸಿಂಗ್ ದೋಷಿ ಎಂದು ಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಆತನ ಹಿಂಬಾಲಕರು ನಡೆಸಿದ ಹಿಂಸಾಚಾರದಲ್ಲಿ 32 ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ. ಆಸಕ್ತಿಕರ ವಿಚಾರಗಳು
– ರಾಂ ರಹೀಮ್ ಸಿಂಗ್‌ಗೆ ಹಾಡುವುದೆಂದರೆ ತುಂಬಾ ಇಷ್ಟ
– ಮೊದಲ ಮ್ಯೂಸಿಕ್ ಆಲ್ಪಂನ 1 ಕೋಟಿ ಸೀಡಿ ಮಾರಾಟ
– ವಿವಿಐಪಿ ಸ್ಟೇಟಸ್ ಹೊಂದಿರುವ 36 ಮಂದಿಯಲ್ಲಿ ಇವರೂ ಒಬ್ಬರು
– ಕೇಂದ್ರ ಸರಕಾರದಿಂದಲೇ ಝಡ್ ಪ್ಲಸ್ ಭದ್ರತೆ, ಈಗ ವಾಪಸ್
– ರಾಜಸ್ಥಾನದ ಹಳ್ಳಿಯೊಂದರಲ್ಲಿ ಹುಟ್ಟಿದ್ದ ಇವರು ತಂದೆಗೆ ವ್ಯವಸಾ ಯದಲ್ಲಿ ಸಹಾಯ ಮಾಡುತ್ತಿದ್ದರು
– 23ನೇ ವಯಸ್ಸಿನಲ್ಲೇ ಇವರನ್ನು ಡೆೇರಾ ಸಚ್ಚಾ ಸೌದಾದ ಮುಖ್ಯಸ್ಥನಾಗಿ ಘೋಷಣೆ ಮಾಡಲಾಗಿತ್ತು
– ರೇಂಜ್ ರೋವರ್ ಎಸ್‌ಯುವಿಯಲ್ಲೇ ಓಡಾಟ, ಇವರ ಹಿಂದೆ 100 ವಾಹನ ಇರಲೇಬೇಕು. ವಿಶೇಷ ಜೈಲು, ಮಿನರಲ್ ವಾಟರ್, ಸಹಾಯಕಿ?
ರಾಂ ರಹೀಂ ಜೈಲು ಸೇರಿದ್ದರೂ ಆತನ ಐಷಾರಾಮಿ ಜೀವನ ವೇನೂ ಕೊನೆಯಾಗಿಲ್ಲ! ರೋಹrಕ್ ಜೈಲಿನಲ್ಲಿ ಸಿಂಗ್‌ನನ್ನು ಇಡಲಾಗಿದ್ದು, ಅಲ್ಲಿ ಆತನಿಗೆ ವಿಶೇಷ ಜೈಲು, ಬಾಟಲಿಯಲ್ಲಿ ಮಿನರಲ್ ವಾಟರ್, ಓರ್ವ ಸಹಾಯಕಿ (ದತ್ತು ಪುತ್ರಿ)ಯನ್ನೂ ನಿಯುಕ್ತಿಗೊಳಿಸಲಾಗಿದೆ. ಇದರೊಂದಿಗೆ ಜೈಲಿಗೆ ಕಳಿಸುವ ಮೊದಲು ಪೊಲೀಸ್ ಗೆಸ್ಟ್ ಹೌಸ್‌ನಲ್ಲಿ ಇರಿಸಲಾಗಿತ್ತು ಎಂದು ಹೇಳಲಾಗಿದೆ. ಆದರೆ, ಇದನ್ನು ನಿರಾಕರಿಸಿದರುವ ಜೈಲು ಅಧಿಕಾರಿಗಳು, ಆತನಿಗೆೆ ವಿಶೇಷ ಸೌಲಭ್ಯ ನೀಡಲಾಗಿಲ್ಲ. ಸಾಮಾನ್ಯ ಕೈದಿಯಂತೆಯೇ ಜೈಲಿಗೆ ಹಾಕಲಾಗಿದೆ. ಎ.ಸಿ.ವ್ಯವಸ್ಥೆ ಯೇನೂ ಇಲ್ಲ. ನೆಲದಲ್ಲೇ ಮಲಗುತ್ತಾನೆ. ಆತನ ಬ್ಯಾರಕ್ ಪಕ್ಕ 4 ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದಿದ್ದಾರೆ. ಯೋಗ, ಚಹಾ, 2 ಬ್ರೆಡ್: ಶನಿವಾರ ಬೆಳಗ್ಗೆ 4 ಗಂಟೆಗೇ ಎದ್ದ ರಾಂ ರಹೀಂ ಜೈಲು ಕೋಣೆಯಲ್ಲಿ ಯೋಗ ಮಾಡಿದ್ದು, ಬಳಿಕ ಚಹಾ ಕುಡಿದು, 2 ತುಂಡು ಬ್ರೆಡ್ ತಿಂದಿದ್ದಾನೆ. ರಾತ್ರಿ ಇಡೀ ಎಚ್ಚರದಿಂದಲೇ ಇದ್ದು, ಶುಕ್ರವಾರ ರಾತ್ರಿ ಜೈಲು ಕೋಣೆ ಒಳಗೆ ಸ್ವಲ್ಪ ಹೊತ್ತು ನಡೆದಾಡಿದ್ದ ಎಂದು ಮೂಲಗಳು ಹೇಳಿವೆ. ಅಪ್ಪನ ಸಾವಿನ ನ್ಯಾಯಕ್ಕೆ ಕಾದಿರುವ ಪುತ್ರ
15 ವರ್ಷಗಳ ಹಿಂದೆ ರಾಂ ರಹೀಂ ಹೇಗೆ ಸಾಧ್ವಿಗಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿ ದ್ದಾನೆ ಎಂಬುದನ್ನು ಪತ್ರಿಕೆಯಲ್ಲಿ ಬರೆದಿದ್ದ ಪತ್ರಕರ್ತ ರಾಮ್ ಚಂದರ್ ಛತ್ರಪತಿಯನ್ನು 2002ರ ಅ.24ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವರ ಮನೆಗೇ ನುಗ್ಗಿ ಈ ಕೃತ್ಯ ಎಸಗ ಲಾಗಿತ್ತು. ತಂದೆಯನ್ನು ಕೊಂದವರಿಗೆ ಶಿಕ್ಷೆ ಆಗಲೇಬೇಕು ಎಂದು ಅವರ ಪುತ್ರ ಅನುÏಲ್ ಕಾನೂನು ಹೋರಾಟ ಮುಂದುವರಿಸಿದರು. ಈ ಪ್ರಕರಣವೂ ಇದೀಗ ಪಂಚಕುಲದ ಸಿಬಿಐ ಕೋರ್ಟ್ ಮುಂದಿದೆ. ಇನ್ನೇನು ಇದೂ ಮುಗಿಯುವ ಹಂತದಲ್ಲಿದೆ. ಆದರೆ, ಈವರೆಗೆ ಅನುÏಲ್ ಎದುರಿಸಿದ ಬೆದರಿಕೆಗಳು ಅಷ್ಟಿಷ್ಟಲ್ಲ. 28 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅಪ್ಪ, ಪೊಲೀಸರ ಮುಂದೆ ಹೇಳಿಕೆ ನೀಡುವಾಗ ಡೇರಾ ಮುಖ್ಯಸ್ಥನ ಹೆಸರನ್ನೂ ಹೇಳಿದ್ದರು. ಆದರೆ, ಅವರು ಎಫ್ಐಆರ್ ನಲ್ಲಿ ಆತನ ಹೆಸರನ್ನು ಪ್ರಸ್ತಾವಿಸಲೇ ಇಲ್ಲ. ಇದರಿಂದ ನೊಂದು ಕಾನೂನು ಹೋರಾಟ ಆರಂಭಿಸಿದೆ ಎನ್ನುತ್ತಾರೆ ಅನುÏಲ್. ಕೊಹ್ಲಿಗೆ ಕೋಚ್ ಆಗಿದ್ನಂತೆ!
ಬಾಬಾ ರಾಂ ರಹೀಂ ಸಿಂಗ್, ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಕೋಚ್ ಆಗಿದ್ನಾ..? ಇಂಥದ್ದೊಂದು ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿದೆ. ಸಾಕಷ್ಟು ಹಾಸ್ಯಕ್ಕೂ ಕಾರಣವಾಗಿದೆ. 2016ರಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ರಾಂ ರಹೀಂ, ತಾನು 32 ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಆಡಿದ್ದು, ಕೋಚ್ ಆಗಿದ್ದಾಗಿ ಹೇಳಿದ್ದಾನೆ. ಅಲ್ಲದೇ ಕ್ರಿಕೆಟಿಗ ವಿರಾಟ್ ಕೊಹ್ಲಿ, ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೆ ಕೋಚಿಂಗ್ ನೀಡಿದ್ದಾಗಿ ಹೇಳಿದ್ದಾನೆ. ಇದು ರಾಂ ರಹೀಂ ಬಗ್ಗೆ ಹಾಸ್ಯಕ್ಕೆ ಕಾರಣವಾಗಿದೆ. ಬಾಬಾಗೆ ಬಿಜೆಪಿ, ಕಾಂಗ್ರೆಸ್ ನಂಟು?
ಅಪಾರ ಸಂಖ್ಯೆಯ ಬೆಂಬಲಿಗರನ್ನು ಹೊಂದಿರುವ ರಾಂ ರಹೀಂಗೆ ರಾಜ ಕೀಯ ನಂಟು ಇಲ್ಲದೇನಿಲ್ಲ. ಆತ ಹೇ ಳುವ ಪ್ರಕಾರ 7 ಕೋಟಿ ಮಂದಿ ಬೆಂಬ ಲಿ ಗರಿದ್ದು, ಪ್ರಭಾವ ಬೀರಲು ಶಕ್ತವಾಗಿದ್ದ. 2007ರಲ್ಲಿ ಡೇರಾ ಸಚ್ಚಾ ಸೌದಾ ರಾಜಕೀಯ ವಿಭಾಗ ಪಿಎಡ ಬ್ಲೂé ವನ್ನು ತೆರೆದಿತ್ತು. ಇಂತಹವರಿಗೇ ಮತ ನೀಡಬೇಕೆಂದು ಸಲಹೆ ನೀಡಲು ಇದನ್ನು ಶುರುಮಾಡಿದ್ದಾಗಿ ಹೇಳಲಾಗಿತ್ತು. 2014ರ ಚುನಾವಣೆ: ಅಂದು ಬಿಜೆಪಿ ಡೇರಾ ಸಚ್ಚಾದ ಬೆಂಬಲವನ್ನು ಕೇಳಿತ್ತು. ರಾಂ ರಹೀಂ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದ. ಇದನ್ನು ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಪ್ರಶಂಸಿಸಿದ್ದರು. ಸ್ವತ್ಛ ಭಾರತ ಅಭಿಯಾನಕ್ಕೂ ಆತ ಬೆಂಬಲ ಸೂಚಿ ಸಿದ್ದು, ಈ ವೇಳೆಯೂ ಪ್ರಧಾನಿ ಅಭಿನಂ ದಿಸಿದ್ದರು. ಹರಿಯಾಣ ಅಸೆಂಬ್ಲಿ ಚುನಾ ವಣೆ ವೇಳೆಯೂ ಬಿಜೆಪಿ ಅಭ್ಯರ್ಥಿ ಗಳನ್ನು “ಆಶೀರ್ವದಿಸಲು’ ಕೇಳಿಕೊಳ್ಳ ಲಾಗಿತ್ತು. ಈಗಿನ ಖಟ್ಟರ್ ಸರಕಾರವು ಈತನ ಮೇಲೆ ಮೃದು ಧೋರಣೆ ತಾಳಲು ಇದೂ ಒಂದು ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಕಾಂಗ್ರೆಸ್ ನಂಟು: ರಾಂ ರಹೀಂ ಪುತ್ರ ನಿಗೆ ವಿವಾಹವಾಗಿದ್ದು ಪಂಜಾಬ್‌ನ ಮಾಜಿ ಕಾಂಗ್ರೆಸ್ ಶಾಸಕ ಹರ್ಮೀಂ ದರ್ ಸಿಂಗ್ ಪುತ್ರಿಯನ್ನು. 2007ರ ಪಂಜಾಬ್ ಚುನಾವಣೆಯಲ್ಲಿ ರಾಂ ರಹೀಂ ಕಾಂಗ್ರೆಸ್‌ಗೆ ಬೆಂಬಲ ಘೋಷಿ ಸಿದ್ದ. ಆದರೆ ಕಾಂಗ್ರೆಸ್ ವಿಜಯಿಯಾಗಿ ರಲಿಲ್ಲ. 2012ರಲ್ಲೂ ಮೆರಿಟ್ ಆಧಾರ ದಲ್ಲಿ ಅಭ್ಯರ್ಥಿಗೆ ಮತ ಹಾಕುವಂತೆ ಹಿಂಬಾಲಕರಿಗೆ ಹೇಳಿದ್ದ. ಪಂಜಾಬ್ ಚುನಾವಣೆಯಲ್ಲಿ ಆತ ಬಿಜೆಪಿಯನ್ನು ಬೆಂಬಲಿಸಿದ್ದು, ಸೋತಿತ್ತು. ಕಾಂಗ್ರೆಸ್ ಕೇಂದ್ರದಲ್ಲಿದ್ದಾಗ ಆತನಿಗೆ ಝಡ್ ಪ್ಲಸ್ ಭದ್ರತೆಯನ್ನೂ ನೀಡಲಾಗಿತ್ತು. ಬಿಜೆಪಿ ಸಚಿವರ ಕೋಟಿ ದೇಣಿಗೆ!: ಹರಿಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ವಿವಿಧ ಸಚಿವರು ಡೇರಾ ಸಚ್ಚಾಕ್ಕೆ ಕೋಟಿ ರೂ. ದೇಣಿಗೆ ನೀಡಿ ದ್ದಾರೆ. ವಿವಿಧ ಕಾರ್ಯಕ್ರಮಗಳನ್ನು ಡೇರಾ ಪಂಥ ನಡೆಸುತ್ತದೆ ಎಂಬ ಕಾರಣಕ್ಕೆ ಕಳೆದ ಆಗಸ್ಟ್ ವರೆಗೆ 1.2 ಕೋಟಿ ರೂ.ವರೆಗೆ ದೇಣಿಗೆ ನೀಡಲಾಗಿತ್ತು. ಡೇರಾ ಸಚ್ಚಾ ಸೌದಾ ಮುಖ್ಯಸ್ಥನನ್ನು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸಮರ್ಥನೆ ಮಾಡಿಕೊಳ್ಳುವ ಮೂಲಕ ಸಂಘ ಪರಿವಾರದ ಅಮಾನವೀಯ ಮುಖ ಬಯಲಾಗಿದೆ.
– ಪಿ. ವಿಜಯನ್,
ಕೇರಳ ಸಿಎಂ ದೇವರು, ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವುದು ಖಂಡನೀಯ. ಇದನ್ನು ಒಪ್ಪಲು, ಸಹಿಸಲು ಸಾಧ್ಯವಿಲ್ಲ.
– ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ ಮತ ಕಬಳಿಕೆಗಾಗಿ ಈ ಪರಿಯ ರಾಜಕೀಯ ಶರಣಾಗತಿ ನಿಜಕ್ಕೂ ನಾಚಿಕೆಗೇಡು. ಕೂಡಲೇ ಖಟ್ಟರ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು.
– ಮಾಯಾವತಿ,
ಬಿಎಸ್ಪಿ ನಾಯಕಿ ಹರಿಯಾಣದಲ್ಲಿ ಹಿಂಸಾಚಾರ, ಜನರ ಪ್ರಾಣ ಕಾಪಾಡುವಲ್ಲಿ ಸಂಪೂರ್ಣ ವಿಫಲವಾದ ಮನೋಹರ್ ಲಾಲ್ ಖಟ್ಟರ್ ಸರಕಾರವನ್ನು ಕೂಡಲೆ ವಜಾ ಮಾಡಬೇಕು.
– ಶಶಿ ತರೂರ್,
ಕಾಂಗ್ರೆಸ್ ಸಂಸದ