Advertisement

ರಾಮ ಮಂದಿರಕ್ಕೆ ಮ್ಯೂಸಿಯಂ ಟಚ್‌!

01:05 PM May 15, 2017 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಮ ಮಂದಿರ ನಿರ್ಮಾಣ ಕನಸಿಗೆ ರೆಕ್ಕೆ, ಪುಕ್ಕ ಬಂದದ್ದು ಸುಳ್ಳಲ್ಲ. ಅದರಂತೆ ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಸಜ್ಜಾಗಿದೆ. ಆದರೆ ರಾಮ ಮಂದಿರಕ್ಕೆ ‘ರಾಮ ಮ್ಯೂಸಿಯಂ’ನ ಟ್ವಿಸ್ಟ್‌ ನೀಡಲಾಗಿದೆ. ಅದರಂತೆ ರಾಮ ಮಂದಿರ ಒಳಗೊಂಡ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ರಾಮ ಮ್ಯೂಸಿಯಂ ನಿರ್ಮಾಣಕ್ಕೆ ಶೀಘ್ರವೇ ಚಾಲನೆ ದೊರೆಯಲಿದೆ.

Advertisement

ಅಯೋಧ್ಯೆಯಲ್ಲಿ ರಾಮ ಮ್ಯೂಸಿಯಂ ನಿರ್ಮಿಸುವ ಇಂಗಿತವನ್ನು ಕಳೆದ ಅಕ್ಟೋಬರ್‌ನಲ್ಲಿ ಪ್ರಧಾನಿ ವ್ಯಕ್ತಪಡಿಸಿದ್ದರು. ಅದಕ್ಕೆ ಸ್ಥಳ ಕೂಡ ಗುರುತಿಸಲಾಗಿತ್ತು. ಆದರೆ ಆಗ ಉತ್ತರ ಪ್ರದೇಶ ಆಳುತ್ತಿದ್ದ ಅಖೀಲೇಶ್‌ ಯಾದವ್‌ ನೇತೃತ್ವದ ಸರಕಾರ ಭೂಮಿ ಕೊಡುವುದಿಲ್ಲ ಎಂದು ಕಡ್ಡಿ ತುಂಡರಿಸಿತ್ತು. ನಂತರದ ರಾಜಕೀಯ ಬದಲಾವಣೆಗಳ ಪರಿಣಾಮ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಇದೀಗ ರಾಮ ಮ್ಯೂಸಿಯಂಗೆ ಸಂಬಂಧಿಸಿದ ಚಟುವಟಿಕೆಗಳು ಗರಿಗೆದರಿವೆ.

ಅಯೋಧ್ಯೆಯ ವಿವಾದಿತ ರಾಮ ಮಂದಿರ ಸ್ಥಳದಿಂದ ಆರು ಕಿ.ಮೀ. ದೂರದಲ್ಲಿ, ಸರಯು ನದಿ ತಟದ ಮೇಲೆ 25 ಎಕರೆ ಜಾಗವನ್ನು ಯೋಗಿ ಸರಕಾರ ಮಂಜೂರು ಮಾಡಿದ್ದು, ಕೇಂದ್ರ ಹಾಗೂ ಉತ್ತರ ಪ್ರದೇಶ ಸರಕಾರದ ಸಹಭಾಗಿತ್ವದಲ್ಲಿ ಮ್ಯೂಸಿಯಂ ನಿರ್ಮಾಣವಾಗಲಿದೆ. ‘ಅದ್ಧೂರಿ ಮಂದಿರ’, ಅದಕ್ಕೆ ಹೊಂದಿಕೊಂಡಂತೆ ‘ರಾಮ ದರ್ಬಾರ್‌’, ವರ್ಚುವಲ್‌ ರಿಯಾಲಿಟಿ, 3ಡಿ ಡಿಸ್‌ಪ್ಲೇ ರೀತಿಯ ಕಟಿಂಗ್‌ – ಎಡ್ಜ್ ತಂತ್ರಜ್ಞಾನ ಬಳಸಿ ಪುರಾತನ ಸಂಪ್ರದಾಯಗಳನ್ನು ಬಿಂಬಿಸುವ ವ್ಯವಸ್ಥೆಯನ್ನು ಯೋಜನೆಯು ಒಳಗೊಂಡಿದ್ದು, ಇದಕ್ಕೆ ಅಂದಾಜು 225 ಕೋಟಿ ರೂ. ವೆಚ್ಚವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next