Advertisement

Ram Mandir: ಅಯೋಧ್ಯೆ ರಾಮಮಂದಿರ ಗರ್ಭ ಗುಡಿಯೊಳಗೆ ಬಾಲರಾಮನ ಪ್ರತಿಷ್ಠಾಪನೆ

03:13 PM Jan 18, 2024 | Team Udayavani |

ಲಕ್ನೋ(ಅಯೋಧ್ಯೆ): ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣಪ್ರತಿಷ್ಠೆ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಬಾಲರಾಮನ ಮೂರ್ತಿಯನ್ನು ಮಂದಿರದ ಗರ್ಭ ಗುಡಿಯೊಳಗೆ ಪ್ರತಿಷ್ಠಾಪನೆ ನೆರವೇರಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Super Over; ಔಟಾದರೂ ರೋಹಿತ್ ಗೆ ಮತ್ತೆ ಬ್ಯಾಟಿಂಗ್ ಅವಕಾಶ ಸಿಕ್ಕಿದ್ಯಾಕೆ? ನಿಯಮವೇನು?

ಮೂಲಗಳ ಪ್ರಕಾರ, ಜನವರಿ 21ರಂದು ಪ್ರಧಾನಿ ಮೋದಿ ಅವರು ಲಕ್ನೋಗೆ ಆಗಮಿಸಲಿದ್ದು, ಜನವರಿ 22ರಂದು 12:15ರಿಂದ 12:45ರೊಳಗೆ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ ಎಂದು ತಿಳಿಸಿದೆ. ಭವ್ಯ ರಾಮಮಂದಿರವು 161 ಅಡಿಗಳಷ್ಟು ಎತ್ತರವಿದ್ದು, ಸುಮಾರು 380 ಅಡಿ ಉದ್ದ ಹಾಗೂ 250 ಅಡಿ ಅಗಲವಿರುವುದಾಗಿ ವರದಿ ವಿವರಿಸಿದೆ.

ಪ್ರಾಣಪ್ರತಿಷ್ಠೆಯ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಬುಧವಾರ ಕಲಶ ಪೂಜೆ ನೆರವೇರಿತ್ತು. ರಾತ್ರಿ ಕ್ರೇನ್‌ ಮೂಲಕ ಬಾಲರಾಮನ ಮೂರ್ತಿಯನ್ನು ರಾಮಮಂದಿರದ ಒಳಗೆ ತರಲಾಗಿತ್ತು. ಜನವರಿ 21ರವರೆಗೆ ವಿವಿಧ ಪೂಜೆ, ಹೋಮ-ಹವನ ನಡೆಯಲಿದ್ದು, ಜನವರಿ 22ರಂದು ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ.

ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ:

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮಮಂದಿರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಜೊತೆಗೆ ಜಗತ್ತಿನಾದ್ಯಂತ ಶ್ರೀರಾಮನ ಕುರಿತು ಬಿಡುಗಡೆ ಮಾಡಿರುವ ಅಂಚೆ ಚೀಟಿಗಳ ಪುಸ್ತಕಗಳನ್ನೂ ಅನಾವರಣಗೊಳಿಸಿದರು.

ಬಿಡುಗಡೆಗೊಳಿಸಿರುವ ಆರು ಅಂಚೆ ಚೀಟಿಗಳಲ್ಲಿ ರಾಮಮಂದಿರ, ಗಣಪತಿ, ಹನುಮಂತ, ಜಟಾಯು, ಕೇವತ್‌ ರಾಜ್‌ ಮತ್ತು ಮಾ ಶಬರಿಯನ್ನು ಒಳಗೊಂಡಿದೆ. ಅದೇ ರೀತಿ ಅಮೆರಿಕ, ನ್ಯೂಜಿಲ್ಯಾಂಡ್‌, ಸಿಂಗಾಪುರ್‌, ಕೆನಡಾ, ಕಾಂಬೋಡಿಯಾ, ಬ್ರಿಟನ್‌ ಸೇರಿದಂತೆ 20 ದೇಶಗಳ ಭಗವಾನ್‌ ಶ್ರೀರಾಮನ ಅಂಚೆ ಚೀಟಿಯನ್ನೊಳಗೊಂಡ 48 ಪುಟಗಳ ಪುಸ್ತಕವನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದರು.

ಜ.22ರಂದು ಉತ್ತರಪ್ರದೇಶದಲ್ಲಿ ಶಾಲಾ ಕಾಲೇಜಿಗೆ ರಜೆ:

ಜನವರಿ 22ರಂದು ಬಾಲರಾಮನ ಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ, ಹರ್ಯಾಣದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉಜ್ಜೈನ್‌ ನಿಂದ 4 ಲಕ್ಷ ಲಡ್ಡು ಅಯೋಧ್ಯೆಗೆ:

ಜನವರಿ 22ರಂದು ನಡೆಯಲಿರುವ ಪ್ರಾಣಪ್ರತಿಷ್ಠೆ ಸಮಾರಂಭದ ಹಿನ್ನೆಲೆಯಲ್ಲಿ ಉಜ್ಜೈನ್‌ ಮಹಾಕಾಲೇಶ್ವರ್‌ ದೇವಾಲಯದಿಂದ ಅಯೋಧ್ಯೆಗೆ 4 ಲಕ್ಷ ಲಡ್ಡುಗಳನ್ನು ಶುಕ್ರವಾರ ಕಳುಹಿಸಲಾಗುವುದು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next