Advertisement

ರಾಮಮಂದಿರ ನಿರ್ಮಾಣಕ್ಕೆ ತಳುಕಿನ ಎಂಜಿನಿಯರ್‌ ಸೀತಾರಾಮ್‌ ಸಾಥ್‌

03:52 PM Feb 28, 2021 | Team Udayavani |

ಚಳ್ಳಕೆರೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಶ್ರೀರಾಮ ಮಂದಿರ ಟ್ರಸ್ಟ್‌, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಎಂಟು ಜನ ಎಂಜಿನಿಯರ್‌ಗಳನ್ನು ನೇಮಕ ಮಾಡಿದೆ. ಅವರಲ್ಲಿ ನಾಡಿನ ಹೆಮ್ಮೆಯ ಸಾಹಿತಿ ತರಾಸು ಅವರ ಜನ್ಮಭೂಮಿ ತಳುಕಿನ ನಿವಾಸಿಗಳಾದ ಟಿ.ಎಸ್‌. ಗುಂಡೂರಾವ್‌ ಹಾಗೂ ವತ್ಸಲ ಪುತ್ರ ಟಿ.ಜಿ. ಸೀತಾರಾಮ್‌ ಕೂಡ ಒಬ್ಬರು. ಇದು ಕರ್ನಾಟಕದ ಜನ ಹೆಮ್ಮೆಪಡುವ ವಿಷಯವಾಗಿದೆ ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತರಾಮ್‌ ಗೌತಮ್‌ ತಿಳಿಸಿದ್ದಾರೆ.

Advertisement

ಟಿ.ಜಿ. ಸೀತಾರಾಮ್‌ ರವರು ತಳಕು ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣದ ನಂತರ ಪ್ರೌಢಶಾಲಾ ಶಿಕ್ಷಣವನ್ನು ಹರಿಹರ ತಾಲೂಕು ಮಲೇಬೆನ್ನೂರಿನಲ್ಲಿ ಪಡೆದರು.ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ನ್ಯಾಶನಲ್‌ ಕಾಲೇಜು ಸೇರಿದರು. ಎಂಜಿನಿಯರಿಂಗ್‌ ಪದವಿ ಮುಗಿಸಿದ ನಂತರ ಬೆಂಗಳೂರಿನ ಪ್ರಖ್ಯಾತ ಇಂಡಿಯಾನ್‌ ಇನ್ಸ್‌ಟಿಟ್ಯೂಟ್‌ ಆಪ್‌ ಸೈನ್ಸ್‌ನಲ್ಲಿ ಕಾರ್ಯ ನಿರ್ವಹಿಸಿದರು. ಕಳೆದ 2019ರಲ್ಲಿ  ಅದೇ ಸಂಸ್ಥೆಯ ಮುಖ್ಯಸ್ಥರಾಗಿ ನೇಮಕಗೊಂಡರು. ಅದೇ ವರ್ಷ ಚಳ್ಳಕೆರೆ ತಾಲೂಕಿನ ಕುದಾಪುರ ಬಾಬಾ ಅಣು ಸಂಶೋಧನಾ ಕೇಂದ್ರಕ್ಕೆ ವಿಜ್ಞಾನಿಗಳ ತಂಡದ ಪ್ರತಿನಿಧಿ ಯಾಗಿ ಆಗಮಿಸಿದ್ದರು.

ಗೌಹಾಟಿ ಐಐಎಸ್‌ಇ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದು, 2020ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ವಿಜ್ಞಾನ ವಿಷಯವಾಗಿ ಸಂವಾದವನ್ನೂ ನಡೆಸಿದ್ದರು. ಬಹುಮುಖ ಪ್ರತಿಭೆಯುಳ್ಳ ಚಳ್ಳಕೆರೆ ತಾಲೂಕಿನ ಟಿ.ಜಿ. ಸೀತಾರಾಮ್‌ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಷಯ ಎಲ್ಲರಿಗೂ ಹೆಮ್ಮೆ ತಂದಿದೆ ಎಂದರು.

ಸಂಘದ ಗೌರವಾಧ್ಯಕ್ಷ ಎಂ. ವಾಸುದೇವ ರಾವ್‌, ಪ್ರಧಾನ ಕಾರ್ಯದರ್ಶಿ ಎನ್‌. ಗೋಪಿನಾಥ, ಉಪಾಧ್ಯಕ್ಷ ಎಚ್‌. ವಿ. ಯೋಗೇಶ್‌, ನಾಗರಾಜ, ಸಹ ಕಾರ್ಯದರ್ಶಿ ಎಂ. ಸತ್ಯನಾರಾಯಣ, ನಿರ್ದೇಶಕರಾದ ಎಂ.ಎಸ್‌.  ಶ್ರೀನಾಥ, ಸಿ.ಎಸ್‌. ಗೋಪಿನಾಥ, ಪುರೋಹಿತರಾದ ನಾಗಶಯನ ಗೌತಮ್‌, ಮಹಿಳಾ ಘಟಕದ ಅಧ್ಯಕ್ಷೆ ಸೀತಾಲಕ್ಷ್ಮೀ ವಾದಿರಾಜ್‌ ವಿಶ್ವ ಹಿಂದೂಪರಿಷತ್‌ನ ಡಾ| ಮಂಜುನಾಥ, ಎಲ್‌ಐಸಿ ಗಂಗಾಧರ, ಬಾಳೆಮಂಡಿ ರಾಮದಾಸ್‌, ಭಜರಂಗದಳದ ಸಂಚಾಲಕ ಬಾಲಕೃಷ್ಣ ಮೊದಲಾದವರು ಸೀತಾರಾಮ್‌ ಅವರನ್ನು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next