Advertisement

Ram Mandir: ಪ್ರಾಣ ಪ್ರತಿಷ್ಠಾಪನೆಗೆ ಇಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ: ಸಿದ್ದು ಸವದಿ

04:44 PM Jan 06, 2024 | Team Udayavani |

ರಬಕವಿ ಬನಹಟ್ಟಿ : ಭಾರತದ ಹಿಂದೂ ಧರ್ಮ ಅತ್ಯಂತ ಸನಾತನ ಧರ್ಮವಾಗಿದ್ದು, ಶ್ರೀರಾಮ ಮಂದಿರ ನಿರ್ಮಾಣ ರಾಷ್ಟ್ರೀಯತೆಯ ಪ್ರತೀಕವಾಗಿದೆ. ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಇಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಅವರು ಶನಿವಾರ ಬನಹಟ್ಟಿಯ ಹನುಮಾನ ದೇವಸ್ಥಾನದಲ್ಲಿ ಶ್ರೀರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜನರ ಸಹಕಾರ, ಕೊಡುಗೆಯಿಂದ ಕೋಟ್ಯಾಂತರ ರೂ ಖರ್ಚು ಮಾಡಿ ಭವ್ಯವಾದ ಐತಿಹಾಸಿಕ ರಾಮ ಮಂದಿರ ನಿರ್ಮಾಣವಾಗಿದೆ. ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ನಾವೆಲ್ಲರೂ ಒಂದಾಗಿ ರಾಷ್ಟ್ರೀಯತೆಯ ಪ್ರತೀಕವಾಗಿರುವ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಜ. 22 ರಂದು ನಡೆಯಲಿದೆ. ಅದಕ್ಕೆ ಮುಂಚಿತವಾಗಿ ಜಾಗೃತಿ ಮೂಡಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಮಂತ್ರಾಕ್ಷತೆಯನ್ನು ಮನೆ ಮನೆಗೆ ನೀಡುವ ಕಾರ್ಯ ಕ್ಷೇತ್ರದಲ್ಲಿ ಪ್ರಾರಂಭವಾಗುತ್ತಿದೆ.

ರಾಮ ಮಂದಿರದ ಪ್ರತಿಷ್ಠಾಪನೆಯ ಸಂದೇಶವನ್ನು ದೇಶದ ಪ್ರತಿಯೊಂದು ಮನೆಗೂ ತಲುಪಿಸುವುದು, ಆಹ್ವಾನ ನೀಡುವುದು ಉದ್ದೇಶವಾಗಿದೆ. ಭಾರತ ಬಲಿಷ್ಠವಾಗಿ ಹೋಗಲು, ನಾವೆಲ್ಲ ಒಂದಾಗಲೂ ನಮ್ಮ ಸನಾತನ ಧರ್ಮವನ್ನು ಉಳಿಸಿ ಬೆಳೆಸಬೇಕು. ಸ್ವಇಚ್ಛೆಯಿಂದ ಸಂಘಟಿತರಾಗಿ ಕೆಲಸಮಾಡೋಣ.

ಜ. 22 ರಂದು ನಡೆಯುವ ಕಾರ್ಯಕ್ರಮದಂದು ಕ್ಷೇತ್ರಾದ್ಯಂತ ಮನೆಮನೆಗಳಲ್ಲಿ ಕನಿಷ್ಠ5 ದೀಪಗಳನ್ನು ಹಚ್ಚುವುದರ ಮೂಲಕ ಶ್ರೀ ರಾಮ ಮಂದಿರ ಉದ್ಘಾಟನೆಯನ್ನು ಸಂಭ್ರಮ ಸಡಗರದಿಂದ ಆಚರಿಸೋಣ ಎಂದರು.

Advertisement

ಈ ಸಂದರ್ಭದಲ್ಲಿ ಪಟ್ಟಣದ ಗೌಡರಾದ ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಸುರೇಶ ಚಿಂಡಕ, ಶಿವಾನಂದ ಗಾಯಕವಾಡ, ವೀರುಪಾಕ್ಷಯ್ಯ ಮಠದ, ವಿದ್ಯಾಧರ ಸವದಿ, ಶಿವಾನಂದ ಕಾಗಿ, ಅಶೋಕ ರಾವಳ, ಶ್ರೀಶೈಲ ಬೀಳಗಿ, ಶ್ರೀನಿವಾಸ ಹಳ್ಯಾಳ, ಭೀಮಸಿ ಆದಗೊಂಡ, ಪ್ರಭಾಕರ ಮೊಳೇದ, ಈರಯ್ಯ ಪರಾಳಮಠ, ಶಾಂತವೀರ ಚನಪನ್ನವರ, ಶ್ರೀಶೈಲ ಮಠಪತಿ, ದುಂಡಪ್ಪ ಮಾಚಕನೂರ, ಪರಶುರಾಮ ರಾವಳ, ಚಿದಾನಂದ ಹೊರಟ್ಟಿ, ರೇವಪ್ಪ ಗುಣಕಿ, ಶ್ರೀಶೈಲ ಬಡಿಗೇರ, ಪ್ರವೀಣ ಧಬಾಡಿ, ಕಾಳಪ್ಪ ಬಡಿಗೇರ, ಈರಣ್ಣ ಚಿಂಚಖಂಡಿ, ಸದಾಶಿವ ಪರೀಟ, ಮಲ್ಲು ಸಾರವಾಡ, ಶಶಿಕಲಾ ಸಾರವಾಡ, ದುರ್ಗವ್ವ ಹರಿಜನ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next