Advertisement

Ram Mandir; ಧಾರವಾಡದಲ್ಲಿ ರಾಮ ದರ್ಬಾರ್ ವರಹ ಪೂಜೆ

03:33 PM Jan 20, 2024 | Team Udayavani |

ಧಾರವಾಡ: ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀರಾಮದೇವರ ದರ್ಬಾರಿನ ಟಂಕೆಯುಳ್ಳ ವರಹಗಳನ್ನು ಹೊಂದಿದವರು ಅದಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿದ್ದು, ಇಂತಹ ಅಪರೂಪದ ನಾಣ್ಯ ನಗರದಲ್ಲಿ ಗಮನ‌ ಸೆಳೆದಿದೆ.

Advertisement

ಡಾ.ಗುರುರಾಜ ಕಳ್ಳೀಹಾಳ ಅವರ ಮನೆಯಲ್ಲಿ ಇಂತಹ ಒಂದು ಅಪರೂಪದ ರಾಮಟಂಕಾ ವರಹವನ್ನು ಕಾಣಬಹುದು. ಈ ಪುರಾತನ ನಾಣ್ಯವು ವಿಕ್ರಮ ಸಂವತ್ಸರದ 1740 ರಲ್ಲಿ ಟಂಕಿಸಿದ್ದ ಬೆಳ್ಳಿಯ ವರಹವಾಗಿದೆ. ಇದರ ಮೇಲ್ಮೆಯಲ್ಲಿ ಶ್ರೀ ರಾಮದೇವರ ದರ್ಬಾರಿನ ರಾಮಾಯಣ ಆಧಾರಿತ ಚಿತ್ರ ಟಂಕಿಸಲಾಗಿದೆ.

ಈ ಚಿತ್ರದಲ್ಲಿ ಚಾಮರದ ಕೆಳಗೆ ಕುಳಿತಿರುವ ಶ್ರೀ ರಾಮದೇವರು ಹಾಗೂ ಸೀತಾಮಾತೆ, ಪಕ್ಕದಲ್ಲಿ ಲಕ್ಷಣ, ಭರತ, ಶತೃಘ್ನರ ಪರಿವಾರವಿದೆ. ಕೆಳಗೆ ಕುಳಿತ ಭಂಗಿಯಲ್ಲಿರುವ ರಾಮಭಕ್ತ ಹನುಂತ ದೇವರನ್ನು ಕಾಣಬಹುದು. ನಾಣ್ಯದ ಹಿಂಭಾಗದಲ್ಲಿ ಬಿಲ್ಲು ಬಾಣಧಾರಿಗಳಾದ ರಾಮ, ಲಕ್ಷ್ಮಣರು ವನವಾಸಕ್ಕೆ ಹೊರಟ ಚಿತ್ರವಿದೆ. ದೇವನಾಗರಿ ಲಿಪಿಯಲ್ಲಿರುವ “ರಾಮ ಲಕ್ಷಣ ಜಾನಕಿ ಜೈ ಭೋಲೋ ಹನುಮಾನ ಕಿ” ಎಂಬ ಅರ್ಥವಿರುವ ಸಾಲುಗಳು ಪ್ರಾಕೃತ ಭಾಷೆಯಲ್ಲಿ ಮುದ್ರಿತವಾಗಿದೆ ಎಂದು ಧಾರವಾಡದ ಸಂಸ್ಕೃತ ವಿದ್ವಾಂಸ ಡಾ. ವೆಂಕಟ ನರಸಿಂಹಾಚಾರ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಡಾ. ಗುರುರಾಜ ಕಳ್ಳೀಹಾಳ್ ಅವರ ಪತ್ನಿ ಡಾ.ಪರಿಮಳಾ ಕಳ್ಳೀಹಾಳ್ ಅವರ ತೀರ್ಥರೂಪರಾದ  ದಿವಂಗತ ನಾಮಗೊಂಡ್ಲು ರಾಮಚಂದ್ರರಾಯರ ಮನೆತನದ ಸಂಗ್ರಹವಿದು. ತಲೆತಲಾಂತರದಿಂದ ಪೂಜೆಗೊಳ್ಳುತ್ತಾ ಬಂದಿರುವ ಈ ಅಪರೂಪದ ನಾಣ್ಯವನ್ನು ರಾಮದರ್ಬಾರ್ ಟೋಕನ್ ಅಂತಲೂ ಕರೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next