Advertisement

Ram Mandir: 13 ಮಂದಿರ ನಿರ್ಮಾಣಕ್ಕೆ ಸಿದ್ಧತೆ: ಸ್ವಾಮಿ ಗುರುದೇವ್‌

01:11 AM Jan 25, 2024 | Team Udayavani |

ಅಯೋಧ್ಯೆ: ಅಯೋಧ್ಯೆಯನ್ನು ಜಾಗತಿಕ ಅಧ್ಯಾತ್ಮಿಕ ಪ್ರವಾಸಿ ಕೇಂದ್ರವನ್ನಾಗಿಸಲು ವಿಸ್ತಾರವಾದ ಯೋಜನೆಗಳನ್ನು ರೂಪಿಸಲಾಗಿದ್ದು, ಆ ಪೈಕಿ ರಾಮ ಮಂದಿರವನ್ನು ಹೊರತು ಪಡಿಸಿದಂತೆ ಇನ್ನೂ 13 ಮಂದಿರಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ಎಲ್ಲಾ ಯೋಜನೆಗಳೂ ಪ್ರಗತಿಯಲ್ಲಿವೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗುರುದೇವ್‌ ಗಿರಿಜಿ ಹೇಳಿದ್ದಾರೆ.

Advertisement

ಖಾಸಗಿ ವಾಹಿನಿ ಜತೆಗೆ ಸಂದರ್ಶನದಲ್ಲಿ ಮತನಾಡಿದ ಅವರು, ಮಂದಿರ ಕಾಮಗಾರಿ ಪ್ರಗತಿಯಲ್ಲಿದೆ. ಇದರೊಂದಿಗೆ 13 ದೇಗುಲಗಳನ್ನು ನಿರ್ಮಿಸಲು ಸಿದ್ದತೆ ನಡೆಯುತ್ತಿದೆ. ರಾಮ ಮಂದಿರವಿರುವ ಸಂಕೀರ್ಣದ ಒಳಗೇ 6 ದೇವಾಲಯಗಳನ್ನು ನಿರ್ಮಿ Ó ‌ ಲಾಗುತ್ತದೆ. ದೇಗುಲದ 4 ಮೂಲೆ ಗಳಲ್ಲಿ ಗಣಪತಿ, ಶಿವ, ಜಗದಂಬಾ ಮತ್ತು ಸೂರ್ಯದೇವರಿಗೆ ಸಮರ್ಪಿ ತವಾದ ದೇಗುಲಗಳು ಇರಲಿವೆ. ಅದರ ಜತೆಗೆ ಹನುಮಂತನಿಗೆ ಮೀಸಲಾದ ಪ್ರತ್ಯೇಕ ದೇಗುಲ ಮತ್ತು ಸೀತಾ ದೇವಿ ಅಡುಗೆ ಮಾಡುತ್ತಿದ್ದ ಸೀತಾ ರಸೋಯಿ ಜಾಗದಲ್ಲಿ ಅನ್ನಪೂರ್ಣ ದೇವಿಗೆ ಸಮರ್ಪಿತವಾದ ದೇಗುಲ ನಿರ್ಮಾಣಗೊಳ್ಳಲಿದೆ ಎಂದರು.

ಮಂದಿರದ ಹೊರ ಆವರಣದಲ್ಲಿ ಸಂತ ವಾಲ್ಮೀಕಿ, ರಿಷಿ ವಸಿಷ್ಠ, ವಿಶ್ವಾಮಿತ್ರ, ದೇವಿ ಶಬರಿ, ಜಟಾಯು ಸೇರಿದಂತೆ ರಾಮನ ಜೀವನದಲ್ಲಿ ಪ್ರಮುಖ ಪಾತ್ರ ಗಳಾದ ಕೆಲವರಿಗೆ ಈ ದೇಗುಲಗಳು ಸಮರ್ಪಿತವಾಗಲಿವೆ ಎಂದೂ ಸ್ವಾಮಿ ಗುರುದೇವ್‌ ತಿಳಿಸಿದ್ದಾರೆ. ಈಗಾಗಲೇ ಈ ದೇಗುಲಗಳ ನಿರ್ಮಾಣ ಕಾರ್ಯ ವೂ ನಡೆಯುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next