Advertisement

Ram Mandir ಭಾರತ ಮರುನಿರ್ಮಾಣ ಅಭಿಯಾನಕ್ಕೆ ಮುನ್ನುಡಿ:ಮೋಹನ್‌ ಭಾಗವತ್‌

11:04 PM Jan 21, 2024 | Team Udayavani |

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಲಲ್ಲಾನ ಪ್ರವೇಶ ಮತ್ತು ಪ್ರಾಣ ಪ್ರತಿಷ್ಠೆ ಸಮಾರಂಭವು “ಭರತವರ್ಷದ ಮರುನಿರ್ಮಾಣ’ದ ಅಭಿಯಾನಕ್ಕೆ ಮುನ್ನುಡಿಯಾಗಲಿದೆ. ಸಾಮರಸ್ಯ, ಏಕತೆ, ಪ್ರಗತಿ, ಶಾಂತಿ ಮತ್ತು ಸರ್ವರ ಕ್ಷೇಮಾಭಿವೃದ್ಧಿಯೇ ಇದರ ಧ್ಯೇಯ- ಮೋಹನ್‌ ಭಾಗವತ್‌, ಆರೆಸ್ಸೆಸ್‌ ಮುಖ್ಯಸ್ಥ

Advertisement

ರಾಮಮಂದಿರ ಭೇಟಿಗೆ ನಾನೂ ಉತ್ಸುಕ
ಜೈ ಶ್ರೀ ರಾಮ್‌… ನಾನು ರಾಮಮಂದಿರ ಭೇಟಿಗೆ ಉತ್ಸುಕನಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರತಿಯೊಬ್ಬ ಭಾರತೀಯನನ್ನೂ ಇಂದು ನಾನು ಅಭಿನಂದಿಸುತ್ತೇನೆ. ಮೋದಿಯವರ ನಾಯಕತ್ವದಲ್ಲಿ 500 ವರ್ಷಗಳ ಬಳಿಕ ಮಂದಿರ ನಿರ್ಮಾಣ ಸಾಧ್ಯವಾಗಿದ್ದು ಹರ್ಷ ತಂದಿದೆ.– ಡೇವಿಡ್‌ ಸೇಮರ್‌, ನ್ಯೂಜಿಲೆಂಡ್‌ ಸಚಿವ

ಪ್ರತಿ ಭಾರತೀಯನ ಸ್ವಾಭಿಮಾನದ ಸಂಕೇತ
ಹಿಂದೂವಾಗಲೀ, ಮುಸ್ಲಿಂ ಆಗಿರಲೀ, ಕ್ರಿಶ್ಚಿಯನ್‌ ಆಗಿರಲೀ… ಸೋಮವಾರ ಪ್ರತಿ ಭಾರತೀಯನಿಗೂ ವಿಶೇಷವಾದ ದಿನವಾಗಿದೆ. ಇದನ್ನು ಎಲ್ಲರೂ ಸಂಭ್ರಮಿಸಬೇಕು. ಇದನ್ನು ಕೇವಲ ರಾಮ ಮಂದಿರ ಎಂದು ಭಾವಿಸಬಾರದು. ಬದಲಿಗೆ ಪ್ರತಿ ಭಾರತೀಯನ ಸ್ವಾಭಿಮಾನದ ಸಂಕೇತ.
-ಸಿ.ಪಿ. ರಾಧಾಕೃಷ್ಣನ್‌ ಜಾರ್ಖಂಡ್‌ ರಾಜ್ಯಪಾಲ

ಅಯೋಧ್ಯೆ ಎನ್ನುವುದು ಧರ್ಮದ ನಗರ
ಅಯೋಧ್ಯೆ ಎನ್ನುವುದು ಧರ್ಮದ ನಗರ. ಎಲ್ಲರೂ ಶ್ರೀರಾಮನನ್ನು ಪೂಜಿಸಿ, ಆತನ ಆದರ್ಶವನ್ನು ಪಾಲಿಸಬೇಕು. ಪ್ರತಿ ಧರ್ಮವೂ ಮಾನವೀಯತೆಯ ಪ್ರತೀಕ. ಪರಸ್ಪರರ ನಡುವೆ ದ್ವೇಷವಿರಬಾರದು, ಸಾಮರಸ್ಯ ತುಂಬಿ ತುಳುಕಬೇಕು ಎಂದೇ ಎಲ್ಲ ಧರ್ಮಗಳೂ ಬೋಧಿಸುತ್ತವೆ.
ಇಕ್ಬಾಲ್‌ ಅನ್ಸಾರಿ, ರಾಮಜನ್ಮಭೂಮಿ ವಿವಾದದ ಮುಸ್ಲಿಂ ಅರ್ಜಿದಾರ

ಕಣ್ತುಂಬಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ
ಐತಿಹಾಸಿಕವಾಗಿ ನಡೆಯುತ್ತಿರುವ ಭಗವಾನ್‌ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆಂದು ಪವಿತ್ರ ಅಯೋಧ್ಯಾ ನಗರಿಗೆ ಆಗಮಿಸಿದ್ದೇನೆ. ಇದು ನನಗೆ ಸಿಕ್ಕಿರುವ ಸುವರ್ಣಾವಕಾಶ. ನಾನಂತೂ ಈ ಕಾರ್ಯಕ್ರಮವನ್ನು ಮನದುಂಬಿಕೊಳ್ಳಲು, ಕಣ್ತುಂಬಿಕೊಳ್ಳಲು ಉತ್ಸುಕನಾಗಿದ್ದೇನೆ.
-ಆದಿನಾಥ್‌ ಮಂಗೇಶ್ಕರ್‌ ಗಾಯಕಿ ಲತಾ ಮಂಗೇಶ್ಕರ್‌ ಸೋದರ ಸಂಬಂಧಿ

Advertisement
Advertisement

Udayavani is now on Telegram. Click here to join our channel and stay updated with the latest news.

Next