Advertisement

Ram Mandir: ಒಂದೇ ರಾತ್ರಿಯಲ್ಲಿ ರಾಮಲಲ್ಲಾ ಗುಡಿ ನಿರ್ಮಾಣ!

10:47 AM Jan 22, 2024 | Team Udayavani |

ಕೋಲಾರ: ಅಯೋಧ್ಯಾ ರಾಮ ಮಂದಿರ ನಿರ್ಮಾ ಣಕ್ಕಾಗಿ ಕರ ಸೇವಕರಾಗಿ ಕರ್ನಾಟಕದಿಂದ ತೆರಳಿದ್ದ ಕೋಲಾರ ಜಿಲ್ಲೆ ಮೂಲದ ಮುನಿರಾಮಪ್ಪರಿಗೆ ಈಗ 79 ವರ್ಷ, 1992 ಡಿಸೆಂಬರ್‌ 6ರ ಘಟನೆಯನ್ನು ಕುರಿತು ಇಂದಿಗೂ ಉತ್ಸಾಹದಿಂದ ಮಾತನಾಡುತ್ತಾರೆ. ಅವರಲ್ಲಿ ಹಚ್ಚಹಸುರಾಗಿರುವ ನೆನಪುಗಳನ್ನು ಹುಮ್ಮಸ್ಸಿನಿಂದ ವಿವರಿಸುತ್ತಾರೆ.

Advertisement

ಅಯೋಧ್ಯೆ ಕರ ಸೇವಕರಾಗಿ ತೆರಳಿದ್ದ ಮುನಿರಾಮಪ್ಪ ಕೋಲಾರ ಜಿಲ್ಲೆಯ ಬೇತಮಂಗಲ ಬಳಿಯ ಅಂಕತಟ್ಟಿ ಗ್ರಾಮದವರು. ಕರ ಸೇವೆಗೆ ತೆರಳಿದ್ದ ಸಂದರ್ಭ ದಲ್ಲಿ ಬೆಂಗಳೂರಿನ ಕೆಆರ್‌ ಪುರಂ ಬಿಜೆಪಿ ಅಧ್ಯಕ್ಷರಾಗಿ 1990ರಿಂದ 1994ರವರೆಗೂ ಸೇವೆ ಸಲ್ಲಿಸಿದ್ದರು. ಈಗಲೂ ಬಿಜೆಪಿಯ ನಿಷ್ಠಾವಂತ ಕಾ ರ್ಯಕರ್ತರಾಗಿ ಉಳಿದಿದ್ದಾರೆ. ಆದರೆ, ಬಿಜೆಪಿ ಮುಖಂಡರ ಪ್ರಸ್ತುತ ನೀತಿ, ನಿರ್ಧಾರ ನಿಲುವುಗಳಿಂದ ಬೇಸತ್ತು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಆದರೆ, ಯಾವುದೇ ಪಕ್ಷಕ್ಕೂ ಹೋಗದೆ ಬಿಜೆಪಿ ಸಿದ್ಧಾಂತಗಳೊಂದಿಗೆ ಅಚಲವಾಗಿದ್ದಾರೆ. ಆ ದಿನಗಳ ಅನುಭವಗಳನ್ನು ಮುನಿರಾಮಪ್ಪ ಉದ ಯವಾಣಿಗೆ ಹೀಗೆ ವಿವರಿಸಿದ್ದಾರೆ.

ಡಿ.2ರಂದು ಪ್ರಯಾಣ ಆರಂಭ: 1992 ಡಿಸೆಂಬರ್‌ 6 ರಂದು ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಲು ಲಕ್ಷಾಂತರ ಮಂದಿ ದೇಶದ ವಿವಿಧ ಮೂಲೆಗಳಿಂದ ಜಮಾಯಿಸ ಬೇಕೆಂದು ಲಾಲ್‌ ಕೃಷ್ಣ ಅಡ್ವಾನಿ ಕರೆ ನೀಡಿದ್ದರು. ಈ ಕರೆಗೆ ಓಗೊಟ್ಟು ನಾನು, ಕೆ.ಎಸ್‌.ಈಶ್ವರಪ್ಪ, ಸಭಾಪತಿ, ಶಂಕರಮೂರ್ತಿ ಮತ್ತಿತರರು ಡಿ.2ರಂದು ಬೆಂಗಳೂರಿನಿಂದ ಅಯೋಧ್ಯೆಗೆ ತೆರಳಲು ರೈಲಿನಲ್ಲಿ ಪ್ರ ಯಾಣ ಬೆಳೆಸಿದೆವು. ಎರಡು ದಿನಗಳ ಪ್ರಯಾಣದ ನಂತರ ಡಿ.4ರಂದು ಬಾರಬಂಕಿಯಲ್ಲಿ ನಾವಿದ್ದ ರೈಲನ್ನು ತಡೆಯಲಾಯಿತು. ಅಯೋಧ್ಯೆಗೆ ಹೋಗಲೇಬೇಕೆಂದು ಸುಮಾರು 36 ಕಿ.ಮೀ. ನಡೆದು ಡಿ.5 ರಂದು ಅಯೋಧ್ಯೆ ಸೇರಿ ಕರ್ನಾಟಕ ರಾಜ್ಯದ ಕಾರ್ಯಕರ್ತರಿಗಾಗಿ ನಿರ್ಮಿಸಿದ್ದ ನಾಲ್ಕು ಟೆಂಟ್‌ಗಳ ಪೈಕಿ ಒಂದರಲ್ಲಿ ಲಗ್ಗೇಜ್‌ ಇಟ್ಟು ವಾಸ್ತವ್ಯ ಮಾಡಿದೆವು.

ಡಿ. 6ರಂದು ಬಹಿರಂಗ ಸಭೆ: ಅಯೋಧ್ಯೆಯಲ್ಲಿ ಡಿ.6 ರಂದು ಭಾನುವಾರ ಬೆಳಗ್ಗೆ 10.30 ಕ್ಕೆ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. ಸರಯೂ ನದಿಯಲ್ಲಿ ಬೆಳಗ್ಗೆಯೇ ಸ್ನಾನ ಮಾಡಿ ಸಭೆ ನಡೆಯುವ ವಿವಾದಾತ್ಮಕ ಕಟ್ಟಡ ಇದ್ದ ಸ್ಥಳ ತಲುಪಿದ್ದೆವು. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಆಗಮಿಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣಸಿಂಗ್‌, ಎಲ್‌.ಕೆ.ಅಡ್ವಾನಿ, ವಿಶ್ವ ಹಿಂದೂ ಪರಿಷತ್‌ನ ಸಾಧ್ವಿ ರಿತಾಂಬರಿ, ಉಮಾಭಾರತಿ, ಅಶೋಕ್‌ ಸಿಂಘಾಲ್‌ ಭಾಷಣಕಾರರಾಗಿದ್ದರು. ಸಾಧ್ವಿ ರಿತಾಂಬರಿ ಮಾತನಾಡುತ್ತಾ, ದೇಶವನ್ನು 40 ವರ್ಷಗಳಿಂದಲೂ 4 ಕಾಂಗ್ರೆಸ್‌ ಆಳುತ್ತಿರುವುದರಿಂದ ರಾಮಮಂದಿರಕ್ಕೆ ಈ ಗತಿ ಬಂದಿದೆ ಎಂದು ಜೋರು ಧ್ವನಿಯಲ್ಲಿ ಮಾತ ನಾಡುತ್ತಿದ್ದಂತೆಯೇ ಇಡೀ ಸಭೆಯಲ್ಲಿದ್ದವರಿಗೆ ಆವೇಶ ಬಂದಂತಾಯಿತು.

ಕ್ಯಾಮೆರಾ ವಾಪಸ್‌: ಕರಸೇವಕರ ಪೈಕಿ ನಾನು ಕ್ಯಾಮೆರಾ ತೆಗೆದುಕೊಂಡು ಹೋಗಿದ್ದೆ. ಕರ್ನಾಟಕದಿಂದ ಪ್ರಯಾಣ ಬೆಳೆಸಿದಾಗಿನಿಂದಲೂ ವಿವಿಧ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದೆ. ಆದರೆ, ಕರಸೇವೆಯ ನಂತರ ಪೊಲೀಸರು ಪ್ರತಿಯೊಬ್ಬರ ಲಗ್ಗೇಜ್‌ ಪರಿಶೀಲಿಸಿದರು. ನಾನು ಹಲವಾರು ಚಿತ್ರಗಳನ್ನು ತೆಗೆದಿದ್ದ ಕ್ಯಾಮೆರಾವನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿ ಇಟ್ಟುಕೊಂಡಿದ್ದರು. ನಾನು ಠಾಣೆಗೆ ಹೋಗಿ ಪೊಲೀಸರಿಂದ ವಿಚಾರಣೆಗೊಳಗಾಗಿ ನಂತರ ಕ್ಯಾಮೆರಾವನ್ನು ಅವರಿಂದ ವಾಪಸ್‌ ಪಡೆದಕೊಳ್ಳಬೇಕಾಯಿತು. ಸದ್ಯಕ್ಕೆ ಪೊಲೀಸರು ಕ್ಯಾಮೆರಾದ ಯಾವುದೇ ರೀಲ್‌ಗಳನ್ನು ತೆಗೆದಿರಲಿಲ್ಲ. ಇದೇ ಕಾರ ಣಕ್ಕೆ ಅಂದು ಚಿತ್ರಿಸಿದ್ದ ಹಲವಾರು ಫೋಟೋಗಳ ನೆನಪು ಇಂದಿಗೂ ನನ್ನಲ್ಲಿ ಉಳಿಯುವಂತಾಗಿದೆ ಎಂದು ಮುನಿರಾಮಪ್ಪ ವಿವರಿಸುತ್ತಾರೆ.

Advertisement

ಬೆಂಗಳೂರಿಗೆ ವಾಪಸ್‌ ಆಗಿದ್ದು: ಎರಡು ದಿನಗಳ ನಂತರ ಲಕ್ನೋಗೆ ಬಂದು ರೈಲಿನಲ್ಲಿ ಬೆಂಗಳೂರಿಗೆ ವಾ ಪಸಾದೆವು. ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣಕ್ಕೆ ಬಂದಾಗ ಕರ್ಫ್ಯೂ ಅಳವಡಿಸಲಾಗಿತ್ತು. ಪೊಲೀಸರು ತಮಗೆ ವಾ ಪಸ್‌ ಮನೆಗೆ ತೆರಳಲು ಸಹಕರಿಸಿದರು. ಕರಸೇವಕರಾಗಿ ಭಾಗವಹಿಸಿದ್ದ ತಮ್ಮನ್ನು ಮುಟ್ಟಲು ಹಲವರು ಹಾತೊರೆದರು. ಹೇಗೋ ಮನೆ ಸೇರಿಕೊಂಡೆವು. ಅಯೋಧ್ಯೆ ಯಲ್ಲಿ ಜರುಗಿದ್ದ ಐತಿಹಾಸಿಕ ಕರಸೇವೆಯಲ್ಲಿ ಭಾಗವಹಿ ಸಿದ್ದ ಅನುಭವಗಳನ್ನು ಹಲವಾರು ವೇದಿಕೆಯಲ್ಲಿ ಹಂಚಿಕೊಳ್ಳಲು ಅವಕಾಶ ಸಿಕ್ಕಿತು. ಕರಸೇವಕರನ್ನು ಬಂಧಿಸಿ ಸೆರೆ ಮನೆಯಲ್ಲಿಡುತ್ತಾರೆಂಬ ವದಂತಿಯನ್ನು ಹರಡಲಾಗಿತ್ತು. ಆದರೆ, ಬಿಜೆಪಿಯ ಹಲವಾರು ಮುಖಂಡರು ತಮ್ಮ ಮನೆಗೆ ಬಂದು ಧೈರ್ಯ ತುಂಬಿದ್ದರು.

ರಾಮಮಂದಿರ ಶಂಕುಸ್ಥಾಪನೆಯಂದು ಸನ್ಮಾನ: ಆಗಸ್ಟ್‌ 4, 2020ರಂದು ರಾಮಮಂದಿರಕ್ಕೆ ಶಂಕುಸ್ಥಾ ಪನೆ ಆದ ದಿನ ಪ್ರಧಾನಿ ಮೋದಿಯವರ ಸಲಹೆ ಮೇರೆಗೆ ತಮ್ಮನ್ನು ಕರಸೇವಕರಾಗಿ ಗುರುತಿಸಿ ನಮ್ಮ ಮನೆಯಲ್ಲೇ ಸನ್ಮಾನಿಸಿ ಗೌರವಿಸಿದರು. ಅಯೋಧ್ಯೆ ಕರ ಸೇವೆಯಲ್ಲಿ ಭಾಗವಹಿಸಿದ್ದೆವು ಎನ್ನುವುದೇ ತಮಗೆ ಹೆಮ್ಮೆಯ ಸಂಗತಿ. ಈಗ ದೇವಾಲಯ ಉದ್ಘಾಟನೆಯಾಗುತ್ತಿರುವುದು ತಮ್ಮ ಕಷ್ಟಕ್ಕೆ ಸಾರ್ಥಕತೆ ಬಂದಿದೆ ಅನಿಸುತ್ತಿದೆ.

ವಿವಾದಾತ್ಮಕ ಕಟ್ಟಡ ಕೆಡವಲು ನಿರ್ಧಾರ : ಮಹಾರಾಷ್ಟ್ರದಿಂದ ಆಗಮಿಸಿದ್ದ ಶಿವಸೇನೆಯ ಕಾರ್ಯಕರ್ತರು ಮೊದಲು ವಿವಾದಾತ್ಮಕ ಕಟ್ಟಡದತ್ತ ನುಗ್ಗಿದರು. ಇವರನ್ನು ಸಭೆಯಲ್ಲಿ ಲಕ್ಷಾಂತರ ಮಂದಿ ಅನುಸರಿಸಿದ್ದರು. ವಿವಾದಾತ್ಮಕ ಕಟ್ಟಡ ಕೆಡವುದು ಪೂರ್ವ ನಿರ್ಧಾರಿತವಾಗಿತ್ತು ಎಂಬುದು ತಮಗೆ ಈಗಲೂ ತಿಳಿದಿಲ್ಲ. ಆದರೆ, ಕರ ಸೇವಕರು ಕಟ್ಟಡದತ್ತ ನುಗ್ಗಿ ಆವರಿಸಿಕೊಂಡು ಕೆಡವಲು ಶುರುವಿಟ್ಟುಕೊಂಡರು. ಕಟ್ಟಡ ಕುಸಿದು ಹಲವರ ಪ್ರಾಣ ತ್ಯಾಗವೂ ಆಯಿತು. ಇದ್ಯಾವು ದಕ್ಕೂ ಕರ ಸೇವಕರು ತಮ್ಮ ಕೆಲಸ ನಿಲ್ಲಿಸಲಿಲ್ಲ. ಇಡೀ ದಿನ ಕರಸೇವೆ ನಡೆಯುತ್ತಿದ್ದರೂ, ಪೊಲೀಸರು, ಮಿಲಿಟರಿ ಸ್ಥಳಕ್ಕೆ ಬಂದಿರಲಿಲ್ಲ.

ಮೂರು ಗುಮ್ಮಟ ಕುಸಿತ : ‌ ಕರ ಸೇವಕರ ನಿರಂತರ ಕಾರ್ಯಾಚರಣೆಯಿಂದ ವಿವಾದಾತ್ಮಕ ಕಟ್ಟಡದ ಮೊದಲ ಗುಮ್ಮಟ ಮಧ್ಯಾಹ್ನ 1.15ಕ್ಕೆ ಕುಸಿದಿತ್ತು. ಆಗ ಸಾಧ್ವಿ ರಿತಾಂಬರಿ ದೇಶದಲ್ಲಿ ಕಾಂಗ್ರೆಸ್‌ ಆಡಳಿತ ಕುಸಿಯಿತು ಎಂಬ ಘೋಷಣೆ ಮೊಳಗಿಸಿದರು. 3.30ರ ಸಮಯಕ್ಕೆ ಎರಡನೇ ಗುಮ್ಮಟ ಕುಸಿಯಿತು. ಆಗ ಮುಸ್ಲಿಂರ ಓಲೈಕೆ ಕೊನೆಗೊಂಡಿತು ಎಂದು ಕೂಗಲಾಯಿತು. ಸಂಜೆ 5.15ಕ್ಕೆ ಮೂರನೇ ಗುಮ್ಮಟ ಕುಸಿದಾಗ ಅಯೋಧ್ಯೆಯಲ್ಲಿ ಸೂರ್ಯೋದಯವಾಯಿತು ಎಂಬ ಘೋಷಣೆ ಕರಸೇವಕರಿಂದ ಮೊಳಗಿತು. ಸಂಜೆಯಾದರೂ ಕರಸೇವಕರಲ್ಲಿನ ಉತ್ಸಾಹ ಕುಗ್ಗಿರಲಿಲ್ಲ. ವಿವಾದಾತ್ಮಕ ಕಟ್ಟಡ ಸಂಪೂರ್ಣ ನೆಲಸಮವಾಗಿತ್ತು.

11 ದಿನ ಜೈಲು ವಾಸ : ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದ್ದನ್ನು ಪ್ರತಿಭಟಿಸಲು 1993ರಲ್ಲಿ ಮತ್ತೇ ದೆಹಲಿಗೆ ತೆರಳಿದ್ದೆವು. ಅಲ್ಲಿನ ಪೊಲೀಸರು ತಮ್ಮನ್ನು ಬಂಧಿಸಿ 11 ದಿನ ಜೈಲಿನಲ್ಲಿಟ್ಟಿದ್ದರು. ನಂತರ ನಮ್ಮ ಭಾವಚಿತ್ರ ತೆಗೆದು, ವಿಳಾಸ ಬರೆದುಕೊಂಡು ತಮ್ಮ ಕ್ಯಾಮೆರಾ ನೀಡಿ ಕಳುಹಿಸಿಕೊಟ್ಟರು. ವಾಪಸ್‌ ಬಂದ ನಂತರ ರಾಮಮಂದಿರ ಅಯೋಧ್ಯೆಯಲ್ಲೇ ನಿರ್ಮಾಣವಾಗಬೇಕೆಂಬ ಕೋಟಿ ಸಹಿ ಸಂಗ್ರಹಕ್ಕೆ ಅಡ್ವಾನಿಯವರು ಕರೆ ನೀಡಿದ್ದರು. ತಾವೊಬ್ಬರೇ ಎರಡೂವರೆ ತಿಂಗಳು ಸಂತೆ, ಜಾತ್ರೆ ತಿರುಗಿ 23 ಸಾವಿರ ಸಹಿ ಸಂಗ್ರಹಿಸಿದ್ದಕ್ಕೆ ಬೆಂಗಳೂರು ನ್ಯಾಷನಲ್‌ ಕಾಲೇಜು ರ್ಯಾಲಿಯಲ್ಲಿ ಅಡ್ವಾನಿ ಅಭಿನಂದಿಸಿದ್ದರು.

ಬಿಎಸ್‌ವೈ ಭಾಷಣ : ಕಾರ್ಯಾಚರಣೆ ಮುಗಿದ ನಂತರ ವಾಪಸ್‌ ಕರ್ನಾಟಕ ಟೆಂಟ್‌ಗಳಿಗೆ ಆಗಮಿಸಿದೆವು. ಆ ವೇಳೆಗಾಗಲೇ ದೇಶಾದ್ಯಂತ ಕರ್ಫ್ಯೂ ಇದ್ದುದ್ದರಿಂದ ವಾಪಸ್‌ ಯಾರೂ ಹೋಗಬೇಡಿ ಎಂದು ಬಿ.ಎಸ್‌.ಯಡಿಯೂರಪ್ಪ ಭಾಷಣ ಮಾಡಿದ್ದರು. ಮತ್ತೇ 8.30ರ ಹೊತ್ತಿಗೆ ಮತ್ತೇ ವಿವಾದಾತ್ಮಕ ಕಟ್ಟಡದತ್ತ ತೆರಳಿದೆವು. ಅಸಂಖ್ಯಾತ ಕರಸೇವಕರ ಸೇವೆಯಿಂದ ಮಾರ್ಬಲ್‌ ಗ್ರಾನೈಟ್‌ಗಳನ್ನು ಬಳಸಿ ರಾಮಲಲ್ಲಾ ಟೆಂಟ್‌ ತಾತ್ಕಾಲಿಕವಾಗಿ ನಿರ್ಮಾಣ ಮಾಡಾಯಿತು. ಈ ಕಾಮಗಾರಿ ಅದೇ ರಾತ್ರಿ ಪೂರ್ಣಗೊಳಿಸಲಾಯಿತು. ಅಯೋಧ್ಯೆಯಲ್ಲಿ ಬಹುತೇಕ ಮುಸ್ಲಿಂ ಕುಟುಂಬಗಳು ಖಾಲಿ ಮಾಡಿದ್ದವು. ಮಾರನೇ ದಿನ ಬೆಳಗ್ಗೆ ಅಯೋಧ್ಯೆ ಮಹಿಳೆಯರು ರಂಗೋಲಿ ಹಾಕಿ, ಹಬ್ಬದ ವಾತಾವರಣ ನಿರ್ಮಿಸಿದ್ದರು. ಸಿಹಿ ತಿಂಡಿ ಮಾಡಿ ಕರಸೇವಕರಿಗೆ ವಿತರಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬರುತ್ತಿತ್ತು.

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next