Advertisement

Washington ಅಮೆರಿಕದಲ್ಲೂ ರಾಮ ಮಂದಿರ ಸಂಭ್ರಮ: ತಿಂಗಳ ಕಾಲ ವಿವಿಧ ಕಾರ್ಯಕ್ರಮ

12:47 AM Dec 18, 2023 | Shreeram Nayak |

ವಾಷಿಂಗ್ಟನ್‌: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಸಂಭ್ರಮವು ದೂರದ ಅಮೆ ರಿಕವನ್ನೂ ತಲುಪಿದೆ. ಭವ್ಯ ಮಂದಿರ ತಲೆ ಎತ್ತಿರುವ ಖುಷಿಯನ್ನು ಸಂಭ್ರಮಿಸಲು ವಾಷಿಂಗ್ಟನ್‌ ಡಿಸಿಯಲ್ಲಿ ಅಮೆರಿಕದ ಹಿಂದೂ ಸಮುದಾಯವು ಒಂದು ತಿಂಗಳು ಪೂರ್ತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Advertisement

ಶನಿವಾರ ಮೇರಿ ಲ್ಯಾಂಡ್‌ ಸಮೀಪದ ಶ್ರೀ ಭಕ್ತ ಆಂಜನೇಯ ದೇಗುಲದಿಂದ ಕಾರು ರ್‍ಯಾಲಿ ನಡೆ ದಿದೆ. ಇದರಲ್ಲಿ ಹಿಂದೂ ಸಮುದಾಯದ ಅನೇಕರು ಭಾಗ ವಹಿಸಿದ್ದರು.

“ಕಳೆದ 500 ವರ್ಷಗಳ ಹಿಂದೂಗಳ ಹೋರಾಟದ ಫ‌ಲವಾಗಿ ಅಯೋಧ್ಯೆಯಲ್ಲಿ ಭಗವಾನ್‌ ಶ್ರೀ ರಾಮ ಮಂದಿರ ನಿರ್ಮಾಣ ವಾಗುತ್ತಿದೆ. ಐತಿಹಾಸಿಕ ಸಂಭ್ರಮದ ಅಂಗವಾಗಿ ವಾಷಿಂಗ್ಟನ್‌ ಡಿಸಿಯಲ್ಲಿ ಜ.20ರಂದು ಬೃಹತ್‌ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ ಅಮೆರಿಕದ ಸುಮಾರು 1,000 ಹಿಂದೂ ಕುಟುಂಬಗಳು ಪಾಲ್ಗೊಳ್ಳುತ್ತಿವೆ’ ಎಂದು ವಿಶ್ವ ಹಿಂದೂ ಪರಿಷತ್‌ನ ವಾಷಿಂಗ್ಟನ್‌ ಡಿಸಿ ಘಟಕದ ಅಧ್ಯಕ್ಷ ಮಹೇಂದ್ರ ಸಾಪಾ ತಿಳಿಸಿದ್ದಾರೆ.

“ರಾಮ ಲೀಲಾ, ಶ್ರೀರಾಮನ ಕುರಿತ ಕಥೆಗಳ ಪ್ರವಚನ, ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತನ ಕುರಿತಾದ ಭಕ್ತಿ ಗೀತೆಗಳು, ಅಲ್ಲದೇ ಅಮೆರಿಕದಲ್ಲಿ ಜನಿಸಿದ ಮಕ್ಕಳಿಂದ ಶ್ರೀರಾಮನ ಜೀವನ ಕುರಿತಾದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

Advertisement

ಆಹಾರ ಸಾಮಗ್ರಿಗಳ ಸಂಗ್ರಹ: ಅಯೋ ಧ್ಯೆಯಲ್ಲಿ ಜನವರಿ ಯಿಂದ ಮಾರ್ಚ್‌ ವರೆಗೆ ಪ್ರತಿ ದಿನ ಸುಮಾರು 25,000 ಭಕ್ತರಿಗೆ ಉಚಿತ ಭೋಜನ ವ್ಯವಸ್ಥೆಗಾಗಿ ಸಿದ್ಧತೆ ನಡೆದಿದೆ. 45 ಸಮುದಾಯ ಅಡುಗೆ ಮನೆಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ದೇಶದ ಮೂಲೆ ಮೂಲೆಗಳಿಂದಲೂ ಆಹಾರ ಸಾಮಗ್ರಿ  ಬಂದು ತಲುಪುತ್ತಿವೆ.

ಸ್ಮಾರ್ಟ್‌ ಪಾರ್ಕಿಂಗ್‌: ಮುಂಬರುವ ದಿನಗಳಲ್ಲಿ ಭಕ್ತಸಾಗರವೇ ಅಯೋಧ್ಯೆಗೆ ಹರಿದುಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಈಗಿರುವ ಪಾರ್ಕಿಂಗ್‌ ಹೊರತುಪಡಿಸಿ, ಪಾರ್ಕಿಂಗ್‌ಗಾಗಿಯೇ ಹೆಚ್ಚುವರಿಯಾಗಿ 70 ಎಕ್ರೆ ಸ್ಥಳ ಮೀಸಲಿರಿಸಲಾಗಿದೆ. ಐದು ಅಂತಸ್ತಿನ ಮಲ್ಟಿ ಸ್ಟೋರಿ ಸ್ಮಾರ್ಟ್‌ ಪಾರ್ಕಿಂಗ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next