Advertisement
ಭೂಮಿಪೂಜೆಯನ್ನು ದೂರದರ್ಶನ ನೇರಪ್ರಸಾರ ಮಾಡಿತ್ತು. ಡಿಡಿ ಹಿಂದೆಂದಿಗಿಂತ ಹೆಚ್ಚು ಕೆಮರಾಗಳನ್ನು ಇದಕ್ಕೆ ನಿಯೋಜಿಸಿತ್ತು.
ಅಮೆರಿಕ, ಇಂಗ್ಲೆಂಡ್‌ನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೂಮಿಪೂಜೆ ವೀಕ್ಷಿಸಿದ್ದಾರೆ. ಕೆನಡಾ, ಆಸ್ಟ್ರೇಲಿಯಾದಲ್ಲಿರುವ ಭಾರತೀಯರು ಟಿವಿಯಲ್ಲಿ ಭೂಮಿಪೂಜೆಯನ್ನು ವೀಕ್ಷಿಸಿ ಪುನೀತರಾಗಿದ್ದಾರೆ. ರಾಮಾಯಣದ ಸಾಂಸ್ಕೃತಿಕ ಅಲೆಯಿರುವ ಇಂಡೋನೇಷ್ಯಾ, ಕಾಂಬೋಡಿಯಾ, ಥಾಯ್ಲೆಂಡ್, ನೇಪಾಲಗಳಲ್ಲೂ ಹೆಚ್ಚು ಮಂದಿ ಕಾರ್ಯಕ್ರಮ ವೀಕ್ಷಿಸಿದ್ದಾರೆ.
Related Articles
200ಕ್ಕೂ ಹೆಚ್ಚು ಚಾನೆಲ್
ಭಾರತದಲ್ಲೂ ಭೂಮಿಪೂಜೆ ನಿರೀಕ್ಷೆಗೂ ಮೀರಿ ವೀಕ್ಷಣೆ ಪಡೆದಿದೆ. 200ಕ್ಕೂ ಹೆಚ್ಚು ಖಾಸಗಿ ಚಾನೆಲ್‌ಗಳಲ್ಲಿ ಐತಿಹಾಸಿಕ ಕ್ಷಣದ ನೇರಪ್ರಸಾರ ಬಿತ್ತರವಾಗಿದೆ. ಎಎನ್‌ಐ ಸುದ್ದಿಸಂಸ್ಥೆ ಮೂಲಕ ದೇಶದ 1,200 ಸ್ಟೇಷನ್‌ಗಳಿಗೆ ಸಿಗ್ನಲ್ ಹಂಚಿಕೆ ಮಾಡಲಾಗಿತ್ತು. ಅಲ್ಲದೆ ವಿದೇಶದ 450 ಸುದ್ದಿಮನೆಗಳಿಗೆ ಅಸೋಸಿಯೇಟ್ ಪ್ರಸ್ ಟೆಲಿವಿಷನ್ ನ್ಯೂಸ್ (ಎಪಿಟಿಎನ್) ಸಿಗ್ನಲ್ ಗಳನ್ನು ಹಂಚಿತ್ತು. ಏಷ್ಯಾ ಪೆಸಿಫಿಕ್ ದೇಶಗಳಿಗೆ ಡಿಡಿ ನ್ಯೂಸ್ ವಿಶೇಷವಾಗಿ ದೃಶ್ಯ ಪ್ರಸಾರ ಮಾಡಿತ್ತು.
Advertisement
ಯೂಟ್ಯೂಬ್‌ನಲ್ಲೂ ಹಿಟ್ಡಿಜಿಟಲ್ ವೇದಿಕೆಯಲ್ಲೂ ಭೂಮಿಪೂಜೆ ಸೂಪರ್ ಹಿಟ್ ಆಗಿದೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ನೆದರ್ಲೆಂಡ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ, ಸೌದಿ ಅರೇಬಿಯಾ, ಒಮಾನ್, ಕುವೈಟ್, ನೇಪಾಲ, ಪಾಕಿಸ್ಥಾನ, ಬಾಂಗ್ಲಾ ದೇಶ, ಮಲೇಷ್ಯಾ, ಇಂಡೋ ನೇಷ್ಯಾ, ಥಾಯ್ಲೆಂಡ್, ಫಿಲಿಪ್ಪೀನ್ಸ್, ಸಿಂಗಾ ಪುರ, ಶ್ರೀಲಂಕಾ ಮತ್ತು ಮಾರಿಷಸ್‌ನ ನೆಟ್ಟಿಗರು ಯೂಟ್ಯೂಬ್ ಸ್ಟ್ರೀಮಿಂಗ್‌ನಲ್ಲಿ ಚಾರಿತ್ರಿಕ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.