Advertisement
ರಾಮಲಲ್ಲಾಗೆ ಧಿವಾಸ್ ಪೂಜೆರಾಮ ಮಂದಿರದಲ್ಲಿ ಐದನೇ ದಿನದ ಪೂಜಾ ಕಾರ್ಯಗಳು ಶನಿವಾರ ಸಾಂಗವಾಗಿ ನೆರವೇರಿವೆ. ರಾಮಲಲ್ಲಾಮವ ವಿಗ್ರಹಕ್ಕೆ ವಿವಿಧ “ಧಿವಾಸ್’ ಪೂಜೆಗಳನ್ನು ನೆರವೇರಿಸಿ ಅಲಂಕಾರಗಳನ್ನು ಮಾಡಲಾಗಿದೆ. ಪುಷ್ಪ ಧಿವಾಸ್ ಆಚರಣೆಯ ಭಾಗವಾಗಿ ದೇಶದ ವಿವಿಧ ಪ್ರದೇಶಗಳಿಂದ ಕಳುಹಿಸಲಾಗಿದ್ದ ಸಕ್ಕರೆ, ಹೂವುಗಳಿಂದ ಮೂರ್ತಿಗೆ ಪೂಜೆ- ಅಲಂಕಾರಗಳನ್ನು ನೆರವೇರಿಸಲಾಗಿದೆ. ಅಲ್ಲದೇ, ದೇಶದ ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ತಂದು 81 ಕಲಶಗಳಲ್ಲಿ ಸಂಗ್ರಹಿಸಿಡಲಾಗಿದ್ದ ಪುಣ್ಯ ಔಷಧೀಯ ಜಲದಿಂದ ವಿಗ್ರಹಕ್ಕೆ ಪುಣ್ಯ ಸ್ನಾನ ಮತ್ತು ಗರ್ಭಗುಡಿಯ ಸ್ವತ್ಛತ ಕಾರ್ಯಗಳನ್ನು ನಡೆಸಲಾಗಿದೆ. “ಸ್ನಾಪನ್’ ಎಂದು ಕರೆಯುವ ಈ ವಿಧಿಯನ್ನು ವೇದ -ಮಂತ್ರಗಳ ಘೋಷದೊಂದಿಗೆ ಸುದೀರ್ಘ ಮೂರು ಗಂಟೆಗಳ ಕಾಲ ನಡೆಸಲಾಗಿದೆ. ಔಷಧೀಯ ಪುಣ್ಯ ಜಲವು ಗೋಮೂತ್ರ, ವಿವಿಧ ಹಣ್ಣುಗಳು ಸೇರಿದಂತೆ ಹಲವು ಔಷಧಯುಕ್ತ ಪದಾರ್ಥಗಳ ಸಾರವನ್ನು ಒಳಗೊಂಡಿತ್ತು. ವಿಶೇಷವಾಗಿ ಈ ಜಲದೊಂದಿಗೆ ಭಾರತದ ಕ್ಷೇತ್ರಗಳು ಮಾತ್ರವಲ್ಲದೇ, ನೇಪಾಲದ ಪುಣ್ಯ ಕ್ಷೇತ್ರಗಳ ಜಲವನ್ನೂ ಸೇರಿಸಲಾಗಿದೆ.
ದೇಶದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಹಾಗೂ ಈಶಾನ್ಯ ಭಾಗದಿಂದ 14 ದಂಪತಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಪೂಜೆಯಲ್ಲಿ ಯಜಮಾನ ಕ್ರಿಯಾವಿಧಿ ನಡೆಸ ಲಿದ್ದಾರೆ. ಹೀಗೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತೀಯ ಪ್ರಚಾರ ಪ್ರಮುಖರಾದ ಸುನಿಲ್ ಅಂಬೆಕರ್ ತಿಳಿಸಿದ್ದಾರೆ. ಈ ಪೈಕಿ ಕರ್ನಾಟಕದ ಲಿಂಗ ರಾಜ್ ಬಸವರಾಜ್ ಹಾಗೂ ಅವರ ಪತ್ನಿಯೂ ಸೇರಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.