Advertisement

Ram Temple ರಾಮಲಲ್ಲಾ ಮೂರ್ತಿಯಲ್ಲಿ ಬಾಲ ಸ್ವರೂಪ ಕಾಣುತ್ತಿಲ್ಲ: ದಿಗ್ವಿಜಯ ಸಿಂಗ್

09:24 PM Jan 19, 2024 | Team Udayavani |

ಹೊಸದಿಲ್ಲಿ: ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೂ ಮುನ್ನ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ದೇಗುಲದಲ್ಲಿ ಕೂರಿಸಿರುವ ರಾಮಲಲ್ಲಾ ವಿಗ್ರಹದಲ್ಲಿ ಬಾಲ ಸ್ವರೂಪ ಕಾಣುತ್ತಿಲ್ಲ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.

Advertisement

“ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ, ವಿವಾದಿತ ರಾಮ್ ಲಲ್ಲಾನ ಮೂಲ ವಿಗ್ರಹ ಎಲ್ಲಿದೆ? ಎರಡನೇ ಪ್ರತಿಮೆಯ ಅಗತ್ಯವೇನು? ನಮ್ಮ ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಜಿ ಮಹಾರಾಜ್ ಕೂಡ ರಾಮನ ವಿಗ್ರಹವನ್ನು ಸ್ಥಾಪಿಸಲು ಸಲಹೆ ನೀಡಿದ್ದರು. ರಾಮಜನ್ಮಭೂಮಿ ದೇವಸ್ಥಾನವು ಮಗುವಿನ ರೂಪದಲ್ಲಿರಬೇಕು ಮತ್ತು ತಾಯಿ ಕೌಸಲ್ಯೆಯ ಮಡಿಲಲ್ಲಿರಬೇಕು. ಆದರೆ ದೇವಾಲಯದಲ್ಲಿರುವ ವಿಗ್ರಹವು ಮಗುವಿನಂತೆ ಕಾಣುತ್ತಿಲ್ಲ” ಎಂದು ಸಿಂಗ್ ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ:Ram Temple: ಮಂದಿರ ಉದ್ಘಾಟನೆಗೂ ಮುನ್ನ ಬಾಲರಾಮನ ಮಂದಸ್ಮಿತ ಮುಖದ ಚಿತ್ರ ಬಿಡುಗಡೆ 

ರಾಮನಾಮಿ ಪಂಥ ಸ್ಥಾಪನೆಯಾದದ್ದು ಹೇಗೆ?

1890 ರಲ್ಲಿ ಪರಶುರಾಮ್ ಜಿ ಅವರು ಪರಿಶಿಷ್ಟ ಜಾತಿಗೆ ಸೇರಿದ ಕಾರಣ ದೇವಸ್ಥಾನಕ್ಕೆ ಪ್ರವೇಶಿಸಲು ಅನುಮತಿಸಲಿಲ್ಲ. ದುಃಖಿತರಾಗಿ, ಅವರು ತನ್ನ ತಲೆ ಮತ್ತು ಇಡೀ ದೇಹದ ಮೇಲೆ “ರಾಮ್” ಎಂದು ಹಚ್ಚೆ ಹಾಕಿಸಿಕೊಂಡರು. ಅಲ್ಲಿಂದ ರಾಮನಾಮಿ ಪಂಥ ಸ್ಥಾಪನೆಯಾಯಿತು. ಇಂದಿಗೂ ಛತ್ತೀಸ್‌ಗಢದಲ್ಲಿ ರಾಮನಾಮಿ ಪಂಥದ ಜನರು ತಮ್ಮ ದೇಹದಾದ್ಯಂತ “ರಾಮ್” ಎಂದು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಅವರಿಗಿಂತ ದೊಡ್ಡ ರಾಮ ಭಕ್ತ ಯಾರಿರಬಹುದು?” ಎಂದು ಇನ್ನೊಂದು ಪೋಸ್ಟ್ ಮಾಡಿದ್ದಾರೆ.

Advertisement

‘ರಾಮ್ ಲಲ್ಲಾ’ ವಿಗ್ರಹವನ್ನು ಕರ್ನಾಟಕದ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದು, ವಿಗ್ರಹವು 51 ಇಂಚು ಎತ್ತರವಿದೆ. ಅದೇ ಕಲ್ಲಿನಿಂದ ರಚಿಸಲಾದ ಕಮಲದ ಮೇಲೆ ನಿಂತಿರುವ ಐದು ವರ್ಷದ ಮಗುವಿನಂತೆ ರಾಮನನ್ನು ವಿಗ್ರಹವು ಚಿತ್ರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next