Advertisement

Game Changer: ರಾಮ್‌ಚರಣ್‌ಗೆ ಗಾಯ; ಕೊನೆ ಕ್ಷಣದಲ್ಲಿ ʼಗೇಮ್‌ ಚೇಂಜರ್‌ʼ ಶೂಟಿಂಗ್‌ ರದ್ದು

01:02 PM Sep 25, 2023 | Team Udayavani |

ಹೈದರಾಬಾದ್: ಮೆಗಾ ಪವರ್‌ ಸ್ಟಾರ್‌ ರಾಮಚ್‌ ಚರಣ್‌ ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ʼಗೇಮ್‌ ಚೇಂಜರ್‌ʼ ಅನೌನ್ಸ್‌ ಆದ ದಿನದಿಂದ ಸದ್ದು ಮಾಡುತ್ತಿದೆ. ಶಂಕರ್‌ – ರಾಮ್‌ ಚರಣ್‌ ಕಾಂಬಿನೇಷನ್‌ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿರುವುದರಿಂದ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

Advertisement

ಶೂಟಿಂಗ್‌ ಹಂತದಲ್ಲಿರುವ ಸಿನಿಮಾದ ಹಾಡೊಂದು ಲೀಕ್‌ ಆಗಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಈ ಹಾಡನ್ನು 15 ಕೋಟಿ ರೂ ಬಜೆಟ್‌ ನಲ್ಲಿ ತಯಾರಿಸಲಾಗಿದೆ. ಶಂಕರ್ ಮತ್ತು ಅವರ ತಂಡ ಈ ಚಿತ್ರಕ್ಕಾಗಿ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದಲ್ಲೇ ಈ ಹಾಡು ಲೀಕ್‌ ಆಗಿದೆ ಎಂದು ವರದಿ ತಿಳಿಸಿತ್ತು.

ಇದೀಗ ಸಿನಿಮಾ ತಂಡಕ್ಕೆ ಮತ್ತೊಂದು ಹಿನ್ನೆಡೆ ಉಂಟಾಗಿದೆ. ಇನ್ನೇನು ಶೂಟಿಂಗ್‌ ಆರಂಭಕ್ಕೆ ಕೆಲವೇ ದಿನ ಇರುವ ವೇಳೆ ರಾಮ್‌ ಚರಣ್‌ ಅವರ ಮುಖಕ್ಕೆ ಏಟಾಗಿದೆ ಎನ್ನಲಾಗಿದೆ. ವೈದ್ಯರು ಅವರನ್ನು ಪರೀಕ್ಷಿಸಿದ್ದು, 10 ದಿನಗಳ ವಿಶ್ರಾಂತಿ ಪಡೆಯಬೇಕೆಂದು ಹೇಳಿರುವುದಾಗಿ ವರದಿ ತಿಳಿಸಿದೆ.

“ಕೆಲವು ಕಲಾವಿದರ ಅಲಭ್ಯತೆಯಿಂದಾಗಿ ʼಗೇಮ್‌ ಚೇಂಜರ್‌ʼ ನ ಸೆಪ್ಟೆಂಬರ್ ವೇಳಾಪಟ್ಟಿಯನ್ನು ರದ್ದುಗೊಳಿಸಲಾಗಿದೆ. ಚಿತ್ರೀಕರಣವು ಅಕ್ಟೋಬರ್ ಎರಡನೇ ವಾರದಲ್ಲಿ ಪುನರಾರಂಭಗೊಳ್ಳುತ್ತದೆ” ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಎಂದು ಟ್ವೀಟ್‌ ಮಾಡಿ ಹೇಳಿದೆ.

ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದ್ದು, ಕಾರ್ತಿಕ್ ಸುಬ್ಬರಾಜ್ ಚಿತ್ರದ ಕಥೆ ಬರೆದಿದ್ದಾರೆ.

Advertisement

ಈ ಸಿನಿಮಾದಲ್ಲಿ ರಾಮ್‌ ಚರಣ್‌ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ನಾಯಕಿಯಾಗಿ ಬಾಲಿವುಡ್‌ ಬ್ಯೂಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ. ಎಸ್‌ಜೆ ಸೂರ್ಯ , ಅಂಜಲಿ, ಜಯರಾಮ್, ನವೀನ್ ಚಂದ್ರ, ಸುನೀಲ್, ಶ್ರೀಕಾಂತ್, ಸಮುದ್ರಕಣಿ ನಾಸರ್ ಹಾಗೂ ಇತರರು ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next