Advertisement

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

02:50 PM Mar 19, 2024 | Team Udayavani |

ಹೈದರಾಬಾದ್:  ರಾಮ್‌ ಚರಣ್‌ ತಮ್ಮ ಬಹು ನಿರೀಕ್ಷಿತ ʼಗೇಮ್‌ ಚೇಂಜರ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಬಳಿಕ ʼಆರ್‌ ಸಿ 16ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಅವರು ಖ್ಯಾತ ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

Advertisement

ನಿರ್ದೇಶಕ ಸುಕುಮಾರ್‌ ಸದ್ಯ ʼಪುಷ್ಪ-2ʼ ಸಿನಿಮಾದಲ್ಲಿ ನಿರತರಾಗಿದ್ದಾರೆ. ಅಲ್ಲು ಅರ್ಜುನ್‌ ಅವರ ಜೊತೆಗಿನ ಸಿನಿಮಾದ ಬಳಿಕ ಸುಕುಮಾರ್‌ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಇತ್ತ ʼಆರ್‌ ಆರ್‌ ಆರ್‌ʼ ಬಳಿಕ ರಾಮ್‌ ಚರಣ್‌ ಅವರು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ.

ರಾಮ್‌ ಚರಣ್‌ ಹಾಗೂ ಸುಕುಮಾರ್‌ ದೊಡ್ಡ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನುವ ಮಾತುಗಳು ಟಾಲಿವುಡ್‌ ರಂಗದಲ್ಲಿ ಹರಿದಾಡಿದೆ. ʼಆರ್‌ ಸಿ 16ʼ ಬಳಿಕ  ರಾಮ್‌ ಚರಣ್‌ ಸುಕುಮಾರ್‌ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದರ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಈ ಹಿಂದೆ ರಾಮ್‌ ಚರಣ್‌ – ಸುಕುಮಾರ್‌ 2018 ರಲ್ಲಿ ʼ ರಂಗಸ್ಥಳಂʼ ಸಿನಿಮಾ ಮಾಡಿದ್ದರು.

ʼಗೇಮ್ ಚೇಂಜರ್‌ʼನಲ್ಲಿ ಐಎಎಸ್ ಅಧಿಕಾರಿಯಾಗಿ ರಾಮ್ ಚರಣ್ ಕಾಣಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅಂಜಲಿ, ಎಸ್.ಜೆ. ಸೂರ್ಯ, ಜಯರಾಮ್, ಸುನೀಲ್, ಶ್ರೀಕಾಂತ್, ಸಮುದ್ರಕನಿ ಮತ್ತು ನಾಸರ್ ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next