ಹೈದರಾಬಾದ್: ಸೂಪರ್ಸ್ಟಾರ್ ರಾಮ್ಚರಣ್ ಅವರ ಪತ್ನಿ ಉಪಾಸನಾ ಅವರು ಮಂಗಳವಾರ (ಜೂ. 20) ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ಮೆಗಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಉಪಾಸನಾ ಅವರನ್ನು ಸೋಮವಾರ (ಜೂ. 19) ರಾತ್ರಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ ಉಪಾಸನಾಗೆ ಮಗು ಜನಿಸಿದ ವಿಚಾರವನ್ನು ಆಸ್ಪತ್ರೆಯವರು ಖಚಿತಪಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟು 11 ವರ್ಷಗಳ ನಂತರ ದಂಪತಿ ಮಗುವಿಗೆ ಜನ್ಮ ನೀಡಿದ್ದಾರೆ.
ಆರ್ಆರ್ಆರ್ ಸಿನಿಮಾದ ನಾಟು ನಾಟು.. ಹಾಡು ಸೂಪರ್ ಹಿಟ್ ಆಯಿತು. ಆಸ್ಕರ್ ಅವಾರ್ಡ್ ಕೂಡ ಪಡೆಯಿತು. ಇದೀಗ ಮನೆಗೆ ಮಗಳ ಆಗಮನದಿಂದ ಬಹಳ ಸಂತೋಷದಲ್ಲಿ ಇದ್ದಾರೆ ಮೆಗಾ ಕುಟುಂಬದವರು.
ಅಭಿಮಾನಿಗಳು, ಸೆಲೆಬ್ರಿಟಿಗಳು ದಂಪತಿಗೆ ಶುಭಾಷಯ ಕೋರಿದ್ದಾರೆ. 2012 ಜೂನ್ 14ರಂದು ಉಪಾಸನಾ, ರಾಮ್ ಚರಣ್ ಅದ್ಧೂರಿಯಾಗಿ ಇಬ್ಬರ ವಿವಾಹ ನಡೆದಿತ್ತು.