Advertisement
ಹಲವು ಸಮಯದಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಾಮ ಭಟ್ ಅವರು ಕೆಲವು ತಿಂಗಳ ಹಿಂದೆ ಮಂಗ ಳೂರು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯು ತ್ತಿದ್ದರು.
Related Articles
Advertisement
1951ರಲ್ಲಿ ಭಾರತೀಯ ಜನ ಸಂಘ ಸ್ಥಾಪನೆಯಾದಾಗ ಅದರಲ್ಲಿ ಸಕ್ರಿಯವಾಗಿ ತೊಡಗಿ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿ ದ್ದರು. ಸರಿ ಸುಮಾರು 60 ವರ್ಷಗಳ ಕಾಲ ಜನ ಸಂಘ, ಬಿಜೆಪಿ ಪಕ್ಷದ ನೇತಾರರಾಗಿ ಕರಾವಳಿಯ ವಾಜಪೇಯಿ ಎಂದೇ ಜನಜನಿತರಾಗಿದ್ದರು.
ವಿಧಾನಸಭೆಗೆ ಸ್ಪರ್ಧೆ: 1957ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರ ಒತ್ತಾಸೆ ಯಂತೆ ಪುತ್ತೂ ರಿನಲ್ಲಿ ಕಣಕ್ಕಿಳಿದ ರಾಮ ಭಟ್ ಮೊದಲ ಚುನಾವಣೆಯಲ್ಲಿ 11, 684 ಮತ ಗಳಿಸಿ ಪರಾಜಿತರಾದರು. ಅನಂತರ ರಾಜ ಕೀಯ ಕ್ಷೇತ್ರದಲ್ಲಿ ಸಕ್ರಿಯರಾದ ಅವರು 1962, 1967 ಮತ್ತು 1972ರಲ್ಲೂ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.
ರಾಷ್ಟ್ರೀಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ ಸೇರಿ ದಂತೆ ರಾಷ್ಟ್ರ ನಾಯಕರ ಜತೆ ನಿಕಟ ಸಂಬಂಧ ಹೊಂದಿದ್ದರು. ಮೊದಲ ಕಾಂಗ್ರೆಸೇತರ ಶಾಸಕ: 1978ರಲ್ಲಿ ಜನತಾ ಪಕ್ಷ ಮತ್ತು ಜನಸಂಘ ವಿಲೀನಗೊಂಡ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಿಂದ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಈಶ್ವರ ಭಟ್ ಅವರನ್ನು ಸೋಲಿಸಿ ಶಾಸಕ ರಾದರು.
ತನ್ಮೂಲಕ ಪುತ್ತೂರಿನ ಮೊದಲ ಕಾಂಗ್ರೆಸೇತರ ಶಾಸಕ ಎಂಬ ಕೀರ್ತಿ ಅವರಿಗೆ ಒಲಿಯಿತು. 1980ರಲ್ಲಿ ಜನಂಘದ ಉತ್ತರಾಧಿಕಾರಿಯಾಗಿ ಬಿಜೆಪಿ ಸ್ಥಾಪನೆಯಾದಾಗ ರಾಮ ಭಟ್ ಬಿಜೆಪಿ ನಾಯಕರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡರು. 1983ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕಾಂಗ್ರೆಸ್‌ನ ಬಿ. ಸಂಕಪ್ಪ ರೈ ಅವರನ್ನು ಸೋಲಿಸಿ 2ನೇ ಬಾರಿ ಶಾಸಕರಾದರು.
ತನ್ಮೂಲಕ ಬಿಜೆಪಿಯ ಮೊದಲ ಶಾಸಕ ಎಂಬ ಹಿರಿಮೆಗೆ ಪಾತ್ರರಾದರು. ಇಂದು ಅಂತ್ಯ ಸಂಸ್ಕಾರ: ರಾಮ ಭಟ್ ಅವರ ಅಂತ್ಯ ಸಂಸ್ಕಾರ ಮಂಗಳವಾರ ಮಧ್ಯಾಹ್ನ ಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ. ಬೆಳಗ್ಗೆ ಪಾರ್ಥಿವ ಶರೀರವನ್ನು ವಿವೇಕಾನಂದ ಮಹಾವಿದ್ಯಾಲಯಕ್ಕೆ ಕೊಂಡೊಯ್ದು ಅಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಗೌರವ ನಮನ ಸಲ್ಲಿಸಲಾಗುತ್ತದೆ.
ನಂತರ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಂಗಳದಲ್ಲಿ 11 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದಾದ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ.