Advertisement

60ರ ದಶಕವನ್ನು ನೆನಪಿಸಿದ ಜಾವಾ ಯಜ್ಡಿ ಬೈಕ್‌ಗಳ ರ‍್ಯಾಲಿ

11:47 PM Jul 14, 2019 | Team Udayavani |

ಸುರತ್ಕಲ್: ಪಣಂಬೂರು ಕಡಲ ಕಿನಾರೆಯಲ್ಲಿ ರವಿವಾರ 60ರ ದಶಕವನ್ನು ನೆನಪಿಸುವಂತೆ ಹಳೆಯ ಆ್ಯಂಟಿಕ್‌ ಪೀಸ್‌ ಜಾವಾ ಯಜ್ಡಿ ಬೈಕ್‌ಗಳ ಪ್ರದರ್ಶನ ರ‍್ಯಾಲಿ ಜರಗಿತು. ಮಂಗಳೂರು ಜಾವಾ ಯಜ್ಡಿ ಮೋಟಾರ್‌ ಸೈಕಲ್ ಕ್ಲಬ್‌ ಆಯೋಜಿಸಿತ್ತು.

Advertisement

ಮಂಗಳೂರಿನ 60, ಬೆಂಗಳೂರಿನ 14, ಉಡುಪಿಯ 18, ಮೈಸೂರಿನ 2 ಹಾಗೂ ಮಡಿಕೇರಿಯ ಓರ್ವ ಮಹಿಳಾ ಬೈಕ್‌ ರೈಡರ್‌ ಸಹಿತ ಸುಮಾರು ನೂರು ಬೈಕ್‌ಗಳ ಮಾಲಕರು ಜಾಗೃತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 1960ರಿಂದ 1996ರ ತನಕವು ಭಾರತದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದ ಐಡಿಯಲ್ ಜಾವಾ ಸಂಸ್ಥೆಯು ಜಾವಾ 250, ಜಾವಾ 50 ಜೆಟ್, ಯೆಜ್ಡಿ 250, ಯೆಜ್ಡಿ 250 ಕ್ಲಾಸಿಕ್‌, ಯೆಜ್ಡಿ 250 ರೋಡ್‌ ಕಿಂಗ್‌, ಯೆಜ್ಡಿ 250 ಮೋನಾರ್ಚ್‌, ಯೆಜ್ಡಿ 175 ಡಿಲಕ್ಸ್‌ ಮತ್ತು ಯೆಜ್ಡಿ 350 ಟಿನ್ವ್ ಬೈಕ್‌ಗಳಲ್ಲಿ ಹಲವು ಮಾಡೆಲ್ಗಳ ಬೈಕ್‌ ಭಾಗವಹಿಸಿ ಮೆಚ್ಚುಗೆ ಗಳಿಸಿತು. ಪಣಂಬೂರು ಚಿತ್ರಾಪುರ ಮಾರ್ಗವಾಗಿ ರ್ಯಾಲಿ ನಡೆದು ಚಿತ್ರಾಪುರ ಬೀಚ್ ಕಿನಾರೆಯಲ್ಲಿ ಸಮಾರೋಪಗೊಂಡಿತು. ಈ ಸಂದರ್ಭ ಬೈಕ್‌ ಚಾಲನೆಯಲ್ಲಿ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಾಯಿತು.

ಜಾವಾ ಯೆಜ್ಡಿ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟ ಇಲ್ಲವಾದ್ರೂ ಅವುಗಳ ಕ್ರೇಜ್‌ ಮಾತ್ರ ಕಮ್ಮಿಯಾಗಿಲ್ಲ. ಇದೀಗ ಹೊಸ ಮಾಡಲೆಗಳು ಮಾರುಕಟ್ಟೆಗಳಲ್ಲಿ 2 ಲಕ್ಷ ರೂ. ವರೆಗೆ ದರದಲ್ಲಿ ಸಿಗುತ್ತವೆ. ಹಳೆಯ ಬೈಕ್‌ಗಳ ಮಾಲಕರು ಇಂದಿಗೂ ಇದನ್ನು ಸುಸ್ಥಿತಿಯಲ್ಲಿಟ್ಟುಕೊಂಡಿದ್ದಾರೆ. ಕೆಲವರು ಖರೀದಿಸಿ ದುರಸ್ತಿ ಮಾಡಿದ್ದಾರೆ. ಇದೀಗ ಹಳೆಯ ಬೈಕಿನ ಬಿಡಿ ಭಾಗಗಳು ಸಿಗುವುದೇ ಕಷ್ಟ. 2009ರಿಂದ ನಾವು ಜಾವಾ ಯಜ್ಡಿ ಬೈಕ್‌ ರ‍್ಯಾಲಿ ನಡೆಸುತ್ತಾ ಬರುತ್ತಿದ್ದೇವೆ ಎಂದು ಮಂಗಳೂರು ಜಾವಾ ಯಜ್ಡಿ ಮೋಟಾರ್‌ ಸೈಕಲ್ ಕ್ಲಬ್‌ನ ಶಾನ್‌ ಫೆರ್ನಾಂಡಿಸ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next